Breaking News

ಹೊಸಮಠ: ಗೌರಿ ಗಣಪತಿ ನಿಲಯದ ಪ್ರವೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕುಟ್ರುಪ್ಪಾಡಿ ಗ್ರಾಮದ ಹೊಸಮಠ ವಾಳ್ಯದ ಮಾರ್ಗದಮನೆ ಎಂಬಲ್ಲಿ ಶಶಾಂಕ ಗೋಖಲೆಯವರು ನೂತನವಾಗಿ ನಿರ್ಮಿಸಿದ “ಗೌರಿ ಗಣಪತಿ ನಿಲಯ”ದ ಪ್ರವೇಶೋತ್ಸವ ಸಮಾರಂಭ ಜ.4ರಂದು ನಡೆಯಿತು.

ಗೃಹ ಪ್ರವೇಶದ ನಿಮಿತ್ತ ಜ.2ರಂದು ಮೂಲ ಮನೆಯಲ್ಲಿ ಮಹಾ ಗಣಪತಿ ಹೋಮ, ಮನೆದೇವರಿಗೆ ಏಕಾದಶರುದ್ರಾಭಿಷೇಕ, ಸತ್ಯನಾರಾಯಣ ಪೂಜೆ, ನಾಗತಂಬಿಲ ಹಾಗೂ ದೈವತಂಬಿಲ ನಡೆಯಿತು.  ಜ.3ರಂದು ನೂತನ ಗೃಹ ಗೌರಿ ಗಣಪತಿ ನಿಲಯದಲ್ಲಿ ಪ್ರಾತಃಕಾಲ ಸ್ವಸ್ತಿ ಪುಣ್ಯಾಹ ವಾಚನ ಹಾಗೂ ಸಂಜೆ ಸಗೃಹ-ವಾಸ್ತುಹೋಮ ಕಾರ್ಯಕ್ರಮಗಳು ನಡೆಯಿತು. ಸಂಜೆ ಕಡ್ಯ ವಾಸುದೇವ ಭಟ್‌ರವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಜ.4ರಂದು ಬೆಳಿಗ್ಗೆ 10.45ರ ಮುಹೂರ್ತದಲ್ಲಿ ಗೌರಿ ಗಣಪತಿ ನಿಲಯದ ಪ್ರವೇಶೋತ್ಸವ ನಡೆಯಿತು. ವೇದಮೂರ್ತಿ ಪಾಂಡುರಂಗ ಅಭ್ಯಂಕರ್ ಹಾಗೂ ಸಹವೈದಿಕರ ನೇತೃತ್ವದಲ್ಲಿ ವೈದಿಕ ಕಾರ‍್ಯಕ್ರಮಗಳು ನಡೆಯಿತು. ಸಂಜೆ ಅಕ್ಷಯ ಮ್ಯೂಸಿಕ್ ಸ್ಟಾರ್ ಕಡಬ ಹಾಗೂ ಗಿರಿವನ “ವಾಯ್ಸ್ ರೆಕಾರ್ಡ್” ಕಡಬ ಇವರ ಸಹಯೋಗದೊಂದಿಗೆ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗೌರಿ ಗಣಪತಿ ನಿಲಯದ ಶಶಾಂಕ ಗೋಖಲೆಯವರು ಗೃಹನಿರ್ಮಾಣ ಕಾರ್ಯದಿಂದ ಹಿಡಿದು ಪ್ರವೇಶೋತ್ಸವ ಸಮಾರಂಭದವರೆಗೆ ಶ್ರಮಿಸಿದ ಕಾರ್ಮಿಕವರ್ಗದವರಿಗೆ, ಬಂಧುಗಳಿಗೆ ಹಾಗೂ ಊರವರಿಗೆ ಕೃತಜ್ಞತೆ ಸಲ್ಲಿಸಿದರು.

ಸುಬ್ರಾಯ ಹೆಬ್ಬಾರ್, ಪ್ರಕಾಶ್ ಹೆಬ್ಬಾರ್ ಬೆಂಗಳೂರು, ಸದಾನಂದ ರಾವ್, ರಮೇಶ್ ಕಲ್ಪುರೆ, ರಾಜಕುಮಾರ್ ಜೈನ್, ಕರುಣಾಕರ ಗೋಗಟೆ, ಜಿ.ಜೆ ಮಹೆಂದಳೆ, ಶ್ರೀಮತಿ ಪುಲಸ್ತ್ಯ ರೈ, ಕೃಷ್ಣ ಶೆಟ್ಟಿ ಕಡಬ, ಪಿ.ಪಿ. ವರ್ಗೀಸ್, ಮೃತ್ಯುಂಜಯ ಭೀಡೆ, ಕಿರಣ್ ಗೋಗಟೆ, ಸೀತಾರಾಮ ಹೆಬ್ಬಾರ್, ದಿನಕರ ಹೆಬ್ಬಾರ್, ರಘುನಾಥ ಹೆಬ್ಬಾರ್, ರಾಜಾರಾಮ್ ಭಟ್, ಸುರೇಶ ಕುಡೂರು ಹೊಸಮಠ, ಬಾಲಸುಬ್ರಹ್ಮಣ್ಯ, ಮೋನಪ್ಪ ಗೌಡ ನಾಡೋಳಿ, ಸಂತೋಷ ಹೆಬ್ಬಾರ್, ಸತೀಶ್ ಮರಾಠೆ, ಕಾವ್ಯ ಕಿರಣ್ ಗೋಗಟೆ, ಎನ್.ಕಾಶಿನಾಥ್ ಗೋಗಟೆ, ರವೀಂದ್ರ ಹೆಬ್ಬಾರ್, ಭಾರತಿ ಭೀಡೆ, ಛಾಯಾ ಹೆಬ್ಬಾರ್, ಸ್ಮಿತಾ ಹೆಬ್ಬಾರ್, ಅಜಿತ್ ಹೆಬ್ಬಾರ್, ಅನುಷಾ ಹೆಬ್ಬಾರ್, ಕೊರಗಪ್ಪ ಗೌಡ ಹೊಸಮಠ, ಗೋಕುಲ ಮಲ್ಯ, ನಾಗರಾಜ, ಪ್ರಕಾಶ್, ಅಶೋಕ್ ಭಟ್, ಆನಂದ ಪೂಜಾರಿ, ನರಸಿಂಹ ಹೆಬ್ಬಾರ್, ಶ್ರೀಮತಿ ಉಷಾ ಕಿರಣ್, ನವೀನ ಗೋಖಲೆ, ಶರತ್ ಗೋಖಲೆ, ಕು. ಶರಧಿ ಗೋಖಲೆ, ಶಂಕರ ಗೋಖಲೆ, ಸತೀಶ್ ನಾಯಕ್ ಕಡಬ, ರಾಧಾಕೃಷ್ಣ ಕೋಲ್ಪೆ, ವಸಂತ ಗೌಡ ಮಾರಪ್ಪೆ, ಬಾಲಕೃಷ್ಣ ಗೌಡ ಪನ್ಯಾಡಿ, ಚಂದ್ರಶೇಖರ ಕೋಡಿಬೈಲು, ರಾಧಾಕೃಷ್ಣ ಗೌಡ ಪನ್ಯಾಡಿ, ಉಂಡಿಲ ಗೋಪಾಲಕೃಷ್ಣ ಭಟ್ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು. ಕಾರ್ಯಕ್ರಮದ ಎಲ್ಲಾ ದಿನಗಳಲ್ಲಿಯೂ ಅತಿಥಿಗಳಿಗೆ ಹರೀಶ್ ಪಟವರ್ಧನ್‌ರವರ ನೇತೃತ್ವದಲ್ಲಿ ರುಚಿಕರ ಭೋಜನ-ಖಾದ್ಯೋಪಹಾರಗಳ ವ್ಯವಸ್ಥೆ ಮಾಡಲಾಗಿತ್ತು

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.