ಉಪ್ಪಿನಂಗಡಿ, ಕಡಬ, ಕೊಕ್ಕಡ ಸಮುದಾಯ ಆಸ್ಪತ್ರೆಗೆ ಕಟ್ಟಡ ಕಾಮಗಾರಿಗೆ 15 ಕೋಟಿ ಮಂಜೂರು-ಯು.ಟಿ. ಖಾದರ್

Puttur_Advt_NewsUnder_1
Puttur_Advt_NewsUnder_1

uppinangady*30 ಬೆಡ್ ವ್ಯವಸ್ಥೆಯ ಮಾದರಿ ಆಸ್ಪತ್ರೆ ನಿರ್ಮಾಣ

*ಮಾರ್ಚ್‌ನಲ್ಲಿ ಕೆಲಸ ಆರಂಭ

*18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣ

*ಜಿಲ್ಲೆಯ 4 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ  ಕಟ್ಟಡ ನಿರ್ಮಾಣಕ್ಕೆ ತಲಾ 1.30 ಕೋಟಿ

ಉಪ್ಪಿನಂಗಡಿ: ಹಲವು ವರ್ಷಗಳ ಹಿಂದೆ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಕೆಯಾಗಿ ಅನುಷ್ಠಾನ ಆಗದೆ ಉಳಿದಿದ್ದ ಉಪ್ಪಿನಂಗಡಿ, ಕಡಬ, ಕೊಕ್ಕಡ ಸಮುದಾಯ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ನಿರ್ಮಾಣಕ್ಕಾಗಿ ತಲಾ 4.85 ಕೋಟಿ ರೂಪಾಯಿಯಂತೆ 3 ಸಮುದಾಯ ಆಸ್ಪತ್ರೆಗಳಿಗೆ 15 ಕೋಟಿ ರೂಪಾಯಿ ಮಂಜೂರು ಆಗಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಜ. 5ರಂದು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ಆಸ್ಪತ್ರೆ ಕಟ್ಟಡ ಕಾಮಗಾರಿಯನ್ನು ಮಾರ್ಚ್ ತಿಂಗಳಿನಲ್ಲಿ ಕೆಲಸ ಆರಂಭಿಸಲಾಗುವುದು, 18 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ತಾಕೀತು ಮಾಡಲಾಗುವುದು ಎಂದು ಅವರು ತಿಳಿಸಿದರು.

ಆಸ್ಪತ್ರೆಯನ್ನು ಸ್ಥಳೀಯ ಪರಿಸರ ಮತ್ತು ಪ್ರದೇಶಗಳಿಗೆ ಅನುಗುಣವಾಗಿ, 30 ಬೆಡ್ ವ್ಯವಸ್ಥೆಯೊಂದಿಗೆ ಮಾದರಿ ಆಸ್ಪತ್ರೆಯಾಗಿ ನಿರ್ಮಿಸಲಾಗುವುದು, ಕಟ್ಟಡ ಕಾಮಗಾರಿ ಶೇಕಡಾ 50ರಷ್ಟು ಆದ ತಕ್ಷಣ ವೈದ್ಯರು, ಸಿಬ್ಬಂದಿ ಮತ್ತು ಅಗತ್ಯ ಉಪಕರಣಗಳ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೊಸ ಕಟ್ಟಡ: ರಾಜ್ಯದಾದ್ಯಂತ ಅತೀ ಹಳೆಯದಾದ, ಶಿಥಿಲಾವಸ್ಥೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೂತನ ಕಟ್ಟಡ ನಿರ್ಮಾಣದ ಯೋಜನೆ ರೂಪಿಸಲಾಗಿದ್ದು, ಅಂತಹ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ತಲಾ 1.30 ಕೋಟಿ ರೂಪಾಯಿ ನಿಗದಿ ಪಡಿಸಲಾಗಿದೆ, ಅದರಂತೆ ದ.ಕ. ಜಿಲ್ಲೆಯ ಮಂಚಿ, ಕುರ್ನಾಡು, ಚಾರ್ಮಾಡಿ ಮತ್ತು ಅಂಬ್ಲಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಕೆಡವಿ ತಲಾ ೧.೩೦ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ಹಿರಿಯ ಆರೋಗ್ಯ ಸಹಾಯಕಿ ಹುದ್ದೆ ಭರ್ತಿಗೆ ಕ್ರಮ: ಕಳೆದ 6 ವರ್ಷಗಳಿಂದ ಹಿರಿಯ ಆರೋಗ್ಯ ಸಹಾಯಕಿ ಹುದ್ದೆಗೆ ನೇಮಕಾತಿ ಆಗಿಲ್ಲ, ಈ ಮಧ್ಯೆ ಕಿರಿಯ ಆರೋಗ್ಯ ಸಹಾಯಕಿಯರೇ ಈ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಆದರೆ ಆ ಹುದ್ದೆಯಲ್ಲಿರುವವರೂ ಭಡ್ತಿಗೆ ಅವಧಿ ಆಗಿದ್ದರೂ ಭಡ್ತಿಯೂ ದೊರಕದೆ ಸಮಸ್ಯೆ ಎದುರಿಸುವಂತಾಗಿದೆ ಹೀಗಾಗಿ ಹೆಚ್ಚುವರಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಸಹಾಯಕಿಯರು ಗೊಂದಲದಲ್ಲಿ ಇದ್ದಾರೆ ಎಂದು ಸಚಿವರ ಗಮನ ಸೆಳೆದಾಗ “ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಿರಿಯ ಆರೋಗ್ಯ ಸಹಾಯಕಿಯರನ್ನು ಭಡ್ತಿಗೊಳಿಸುವ ಪ್ರಕ್ರಿಯೆ ಆರಂಭ ಆಗಿದೆ, ಈ ತಿಂಗಳ ಕೊನೆಯಲ್ಲಿ ಎಲ್ಲವೂ ಸರಿ ಆಗಲಿದೆ” ಎಂದು ಸಚಿವರು ಪ್ರತಿಕ್ರಿಯಿಸಿದರು.

 ಎಲ್ಲಾ ಆರೋಗ್ಯ ಕೇಂದ್ರಗಳಿಗೆ ಅಂಬುಲೆನ್ಸ್:  ಈಗಾಗಲೇ ತಾಲ್ಲೂಕು ಆರೋಗ್ಯ ಕೇಂದ್ರಕ್ಕೆ “ನಗು ಮಗು” ವಾಹನ ವ್ಯವಸ್ಥೆ ಇದೆ, ಇದು ಬಹು ಬೇಡಿಕೆಯಿಂದ ಇರುವ ಕಾರಣ ಬಹುತೇಕ ಪ್ರಕರಣಗಳಿಗೆ ಇದು ಲಭ್ಯ ಇರುವುದಿಲ್ಲ, ಇದನ್ನು ಸರಿದೂಗಿಸುವ ಸಲುವಾಗಿ ಪ್ರತಿ ಆರೋಗ್ಯ ಕೇಂದ್ರಗಳಿಗೆ ಒಂದರಂತೆ ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು. ಪುತ್ತೂರು ತಾಲ್ಲೂಕು ವೈದ್ಯಾಧಿಕಾರಿ ಡಾ| ಅಶೋಕ್ ರೈ, ಕರ್ನಾಟಕ ಆರೋಗ್ಯ ಇಲಾಖಾ ಇಂಜಿನಿಯರ್ ರವಿಚಂದ್ರ, ಉದಯಶಂಕರ್ ಪೂರಕ ಮಾಹಿತಿ ನೀಡಿದರು.

ಸಚಿವರೊಂದಿಗೆ ಶಾಸಕಿ ಶಕುಂತಳಾ ಶೆಟ್ಟಿ, ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್, ತಾಲೂಕು ಕೆಡಿಪಿ ಸದಸ್ಯರಾದ ಅಶ್ರಫ್ ಬಸ್ತಿಕ್ಕಾರ್, ಸೋಮನಾಥ, ಗ್ರಾಮ ಪಂಚಾಯಿತಿ ಸದಸ್ಯರಾದ ಯು.ಟಿ. ತೌಶೀಫ್, ಯು.ಕೆ. ಇಬ್ರಾಹಿಂ, ಎಪಿಎಂಸಿ ನಿರ್ದೇಶಕ ಮಾಣಿಕ್ಯರಾಜ್ ಪಡಿವಾಳ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಘುನಾಥ ರೈ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಮಹಮ್ಮದ್ ಕೆಂಪಿ, ಜಾನ್

ಕೆನ್ಯೂಟ್, ಪಕ್ಷದ ಮುಖಂಡರಾದ ನಝೀರ್ ಮಠ, ಶಬ್ಬೀರ್ ಕೆಂಪಿ, ಶಫೀಕ್ ಅರಫ, ಸಮದ್ ಸೋಂಪಾಡಿ ಮೊದಲಾದವರು ಉಪಸ್ಥಿತರಿದ್ದರು. ಉಪ್ಪಿನಂಗಡಿ  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಶಿಕಲಾ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.