ಸವಣೂರು ಗ್ರಾ.ಪಂ ಸಾಮಾನ್ಯ ಸಭೆ – ಸುದ್ದಿ ಅಭಿಯಾನಕ್ಕೆ ಬೆಂಬಲ

Puttur_Advt_NewsUnder_1
Puttur_Advt_NewsUnder_1

83ee900b-cf5c-4cfc-84fe-8257cce1fea0

ಪುತ್ತೂರು :ಬಲಾತ್ಕಾರದ ಬಂದ್ ವಿರೋಧಿ ಸುದ್ದಿ ಆಂದೋಲನವನ್ನು ಬೆಂಬಲಿಸುವ ಕುರಿತು ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯು ಗ್ರಾ.ಪಂ.ಸಭಾಂಗಣದಲ್ಲಿ ಅಧ್ಯಕ್ಷೆ ಬಿ.ಕೆ.ಇಂದಿರಾ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಎಂ.ಎ.ರಫೀಕ್ ,ಸುದ್ದಿ ಅಭಿಯಾನ ಎಲ್ಲಾ ಗ್ರಾ.ಪಂ.ಗಳು ಬೆಂಬಲ ಸೂಚಿಸಿದೆ.ನಮ್ಮ ಗ್ರಾ.ಪಂ.ನಲ್ಲೂ ನಿರ್ಣಯ ಕೈಗೊಳ್ಳಿ.ಬಂದ್ ನಿಂದ ಜನಸಾಮಾನ್ಯರಿಗೆ ಆಗುವ ತೊಂದರೆ ಅಷ್ಟಿಷ್ಟಲ್ಲ.ಆದರಿಂದ ಬಂದ್ ವಿರೋದಿ ನಿರ್ಣಯ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಸತೀಶ್ ಅಂಗಡಿಮೂಲೆ ಬಲಾತ್ಕಾರದ ಬಂದ್‌ಗೆ ಯಾರೂ ಬೆಂಬಲ ನೀಡುವುದಿಲ್ಲ.ಆದರೂ ಕೆಲವೊಮ್ಮೆ ಸರಕಾರವನ್ನು ಎಚ್ಚರಿಸುವ ಸಲುವಾಗಿ ಬಂದ್ ಅನಿವಾರ್ಯ.ಪತ್ರಿಕೆ ಕೇವಲ ಬಂದ್ ಕುರಿತು ಆಂದೋಲನ ನಡೆಸಿದರೆ ಸಾಲದು ಸಮಾಜದ ಮುಂದಿರುವ ಜಠಿಲ ಸಮಸ್ಯೆಗಳ ಕುರಿತು, ಎತ್ತಿನಹೊಳೆ ಯೋಜನೆಯ ಸಾಧಕ ಬಾಧಕಗಳ ಕುರಿತು ಆಂದೋಲನ ನಡೆಸಲಿ. ಸದಸ್ಯರಾದ ಸತೀಶ್ ಬಲ್ಯಾಯ ,ಪ್ರಕಾಶ್ ಕುದ್ಮನಮಜಲು ದ್ವನಿಗೂಡಿಸಿದರು.

 ಬಿಪಿಎಲ್ ಪಡಿತರ ಚೀಟಿಯು ಸದ್ದಿಲ್ಲದೆ ಎಪಿಎಲ್ ಆಗಿ ಪರಿವರ್ತನೆಯಾಗುತ್ತಿದ್ದು ಇದರಿಂದ ಪಡಿತರಚೀಟಿದಾರರು ತೊಂದರೆಯಾಗುತ್ತಿದೆ ಈ ಕುರಿತು ಆಹಾರ ಸರಬರಾಜು ಇಲಾಖೆಯಿಂಸ ಸ್ಪಷ್ಟ ಮಾಹಿತಿ ನೀಡುವಂತೆ ಬರೆದುಕೊಳ್ಳುವಂತೆ ಸದಸ್ಯ ಸತೀಶ್ ಬಲ್ಯಾಯ ಒತ್ತಾಯಿಸಿದರು.ಇಲಾಖೆಯ ಈ ರೀತಿಯ ಕ್ರಮದಿಂದ ಅಮಾಯಕ ಜನರಿಗೆ ತೊಂದರೆಯಾಗುತ್ತದೆ.ಈ ಕುರಿತು ಇಲಾಖೆ ಜನತೆಗೆ ಸರಿಯಾದ ಮಾಹಿತಿ ನೀಡಬೇಕು ಈ ಕುರಿತು ಇಲಾಖೆಗೆ ಬರೆದುಕೊಳ್ಳುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಮಡಿದ ಸೈನಿಕರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಉಳಿದಂತೆ ಪ್ರಮುಖ ನಿರ್ಣಯ

*ಪಂಚಾಯತ್ ಛಾವಣಿಗೆ ಸೋಲಾರ್ ಪ್ಯಾನೇಲ್ ಅಳವಡಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.

*ಪ.ಜಾ ಮತ್ತು ಪ.ಪಂ.ದವರಿಗೆ ೯೪ಸಿ ಯೋಜನೆಯಲ್ಲಿ ಅರ್ಜಿಗೆ ಶುಲ್ಕ ವಿನಾಯಿತಿ ನೀಡುವ ಕುರಿತು ಕಂದಾಯ ಇಲಾಖೆಗೆ ಬರೆದುಕೊಳ್ಳುವುದು.

*ಪಂಚಾಯತ್ ಕಟ್ಟಡಕ್ಕೆ “ಅಟಲ್ ಜೀ” ಹೆಸರು ನಾಮಕರಣ

*ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮಕೈಗೊಳ್ಳುವುದು

*ತಾ.ಪಂ.ಡೈರಿಗೆ ಗ್ರಾ.ಪಂ.ನಿಂದ ಜಾಹಿರಾತು ನೀಡಿರುವದರಿಂದ ಎಲ್ಲಾ ಸದಸ್ಯರಿಗೂ ಡೈರಿ ನೀಡುವ ಕುರಿತು ತಾ.ಪಂ.ಗೆ ಬರೆದುಕೊಳ್ಳುವುದು.

ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷ ರವಿಕುಮಾರ್ ,ಸದಸ್ಯರಾದ ಗಿರಿಶಂಕರ್ ಸುಲಾಯ,ಸತೀಶ್ ಬಲ್ಯಾಯ,ಅಬ್ದುಲ್ ರಝಾಕ್,ಎಂ.ಎ.ರಪೀಕ್ , ಪ್ರಕಾಶ್ ಕುದ್ಮನಮಜಲು, ಸುಧಾ ಎನ್ ನಿಡ್ವಣ್ಣಾಯ,ವೇದಾವತಿ ಎ,ರಾಜೀವಿ ವಿ ಶೆಟ್ಟಿ ,ಗಾಯತ್ರಿ ಬರೆಮೇಲು, ನಳಿನಾಕ್ಷೀ ಎ, ದೇವಿಕಾ ಶ್ರೀಧರ್ ,ಜಯಂತಿ ಮಡಿವಾಳ,ಚೆನ್ನು , ಮೀನಾಕ್ಷೀ ಬಂಬಿಲ, ಸತೀಶ್ ಅಂಗಡಿಮೂಲೆ ,ನಾಗೇಶ್ ಓಡಂತರ್ಯ,ದಿವಾಕರ ಬಂಗೇರ ,ವಸಂತಿ ಬಸ್ತಿ ಕಲಾಪದಲ್ಲಿ ಸಹಕರಿಸಿದರು. ಜಯಶ್ರೀ,ಜಯಾ ಬಿ.ಕೆ ನಾಡಗೀತೆ ಹಾಡಿದರು. ಅಭಿವೃದ್ದಿ ಅಧಿಕಾರಿ ಸುಭಾಶ್ಚಂದ್ರ ಮಲ್ಲಣ್ಣನವರ್ ಸ್ವಾಗತಿಸಿ,ಲೆಕ್ಕ ಸಹಾಯಕ ಎ.ಮನ್ಮಥ ವಂದಿಸಿದರು.ಪ್ರಮೋದ್ ಕುಮಾರ್ ರೈ, ದಯಾನಂದ ಮಾಲೆತ್ತಾರು ಸಹಕರಿಸಿದರು.

 ಚಿತ್ರ:  ಪ್ರವೀಣ್ ಚೆನ್ನಾವರ

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.