ಜ.8ರಂದು ರಾಮಕುಂಜದಲ್ಲಿ ಪೇಜಾವರ ಶ್ರೀಗಳಿಗೆ ಹುಟ್ಟೂರ ನಾಗರಿಕರ ಅಭಿವಂದನೆ

Puttur_Advt_NewsUnder_1
Puttur_Advt_NewsUnder_1

pejavaraಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರ ಅಭಿವಂದನ ಸಮಿತಿ, ರಾಮಕುಂಜ ಇದರ ವತಿಯಿಂದ ದಾಖಲೆಯ 5ನೇ ಬಾರಿ ಸರ್ವಜ್ಞ ಪೀಠವೇರಲಿರುವ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಹುಟ್ಟೂರ ನಾಗರಿಕರ “ಅಭಿವಂದನ ಸಮಾರಂಭ” ಜ.8ರಂದು ಸಂಜೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲೆಯ ರಂಗಮಂದಿರದಲ್ಲಿ ನಡೆಯಲಿದೆ.

ಪುತ್ತೂರು ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನ ಆಡಳಿತ ಪಾಲುದಾರ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದು ವಿದ್ವಾಂಸ ಪಂಜ ಭಾಸ್ಕರ ಭಟ್ ಅಭಿವಂದನ ಭಾಷಣ ಮಾಡಲಿದ್ದಾರೆ. ಕಾರ‍್ಯಕ್ರಮದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.