ಕಡಬದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ-ಸನ್ಮಾನ, ಸಾಂಸ್ಕೃತಿಕ ಕಾರ‍್ಯಕ್ರಮ

Puttur_Advt_NewsUnder_1
Puttur_Advt_NewsUnder_1

sathyanarayana poojeಭಾರತೀಯ ಸಂಸ್ಕೃತಿಯಲ್ಲಿ ಅಡಗಿದೆ “ಸಹಿಷ್ಣುತೆ”-ಒಡಿಯೂರು ಶ್ರೀ

ಮನುಷ್ಯ ಇಂದು ದ್ವಂದ್ವ ಮನಸ್ಸಿನಲ್ಲಿ ಸಿಲುಕಿಕೊಂಡಿದ್ದಾನೆ-ಡಾ| ಎಂ. ಪದ್ಮನಾಭ ಮರಾಟೆ

ಕಡಬ: ಇತ್ತೀಚ್ಚೆಗೆ ದೇಶದಲ್ಲಿ ಸಹಿಷ್ಣುತೆ, ಅಸಹಿಷ್ಣುತೆ ಬಗ್ಗೆ ಚರ್ಚೆ ನಡೆಯುತ್ತಿದೆ, ಆದರೆ ಭಾರತೀಯ ಸಂಸ್ಕೃತಿಯಲ್ಲಿಯೇ ಹಿಂದಿನಿಂದಲೂ ಸಹಿಷ್ಣುತೆ ಅಡಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

ಅವರು ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ ವತಿಯಿಂದ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಜ.5 ರಂದು ರಾತ್ರಿ ನಡೆದ 33ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ, ನಾವು ಸಹಿಷ್ಣುತ ಮನೋಭಾವದವರಾಗಿದ್ದರಿಂದಲೇ ನಮ್ಮ ದೇಶದಲ್ಲಿ ಎಲ್ಲರನ್ನು ಬದುಕಲು ಬಿಟ್ಟು ಅವರೊಂದಿಗೆ ಬೆರೆತು ಬಾಳುತ್ತಿದ್ದೆವೆ, ಇಲ್ಲಿ ಅಸಹಿಷ್ಣುತೆ ಪ್ರಶ್ನೆ ಉದ್ಭವಿಸುವುದಿಲ್ಲ, ಆತ್ಮೋನ್ನತಿ ಸಂಸ್ಕೃತಿಯಿಂದ ಧರ್ಮ ಉನ್ನತಿಯಾಗುತ್ತದೆ, ಧರ್ಮೊನ್ನತಿಯಿಂದ ಸಮಾಜದ ಉನ್ನತಿಯಾಗುತ್ತದೆ, ಆತ್ಮೋನ್ನತಿ ಪಡೆಯಲು ಭಜನೆ ಸಹಕಾರಿಯಾಗುತ್ತದೆ. ಭಕ್ತಿಗೆ ಬಲ ಬರಬೇಕಾದರೆ ಮನುಷ್ಯನಿಗೆ ವೈರ‍್ಯಾಗ್ಯ ಬರಬೇಕು, ನಮಗೆ ಅರಿವು ಮೂಡಿದಾಗ ಮಾತ್ರ ನಮ್ಮ ಬದುಕಿಗೆ ಒಲಿತಾಗುತ್ತದೆ ಎಂದ ಅವರು ತಿಳುವಳಿಕೆ ಕೊರತೆಯಿಂದ ಅನ್ಯೋನ್ಯತೆ ತಪ್ಪುತ್ತಿದೆ, ಇತ್ತೀಚ್ಚಿನ ದಿನಗಳಲ್ಲಿ ನಮ್ಮ ಗೀತೆ, ರಾಮಾಯಣಗಳನ್ನು ಅವಹೇಳನ ಮಾಡಲಾಗುತ್ತಿದ್ದು ಇದು ಒಳ್ಳೆಯದಲ್ಲ, ನಾವು ಪ್ರಕೃತಿಯನ್ನು ನಾಶ ಮಾಡಲು ಹೊರಟಿದ್ದೇವೆ ಇದರ ವಿರುದ್ಧ ಎಲ್ಲರೂ ಜಾಗರೂಕರಾಗಿರಬೇಕು, ಸಂದರ್ಭ ಬಂದರೆ ಹೋರಾಟ ಮಾಡಲು ಸಿದ್ದರಿರಬೇಕು ಎಂದು ಅವರು ಹೇಳಿದರು.

ಮನುಷ್ಯ ಇಂದು ದ್ವಂದ್ವ ಮನಸ್ಸಿನಲ್ಲಿ ಸಿಲುಕಿಕೊಂಡಿದ್ದಾನೆ-ಡಾ| ಎಂ. ಪದ್ಮನಾಭ ಮರಾಟೆ

ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನದ ಪ್ರಾಂಶುಪಾಲ ಡಾ| ಎಂ. ಪದ್ಮನಾಭ ಮರಾಟೆ ಧಾರ್ಮಿಕ ಉಪನ್ಯಾಸ ನೀಡಿ, ಮನುಷ್ಯ ಇಂದು ಧರ್ಮದ ದಾರಿಯಲ್ಲಿ ನಡೆಯದೆ ದ್ವಂದ್ವದಲ್ಲಿ ಸಿಲುಕಿದ್ದಾನೆ, ಆರ್ಥಿಕ ಸಮೃದ್ದಿ ಇದ್ದರೂ ಆತನಿಗೆ ತೃಪ್ತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಧರ್ಮದ ದಾರಿಯಲ್ಲಿಯೇ ನಡೆಯದೆ ಇರುವುದು, ಇಂದು ಮೌಲ್ಯಯುತ ಶಿಕ್ಷಣ ಸಿಗದಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಮನುಷ್ಯ ಇಂದು ಪ್ರಕೃತಿಯೊಂದಿಗೆ ಹೊಂದಿ ಬಾಳುವುದನ್ನು ಬಿಟ್ಟು ಪ್ರಕೃತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ,ಇದರಿಂದ ಪ್ರಕೃತಿಯಲ್ಲಿ ಏರುಪೇರುಗಳಾಗಿವೆ. ಇಂತಹ ಬೆಳವಣಿಗೆಗೆ ಪಾಶ್ಚಿಮಾತ್ಯ ಸಂಸ್ಕೃತಿಯೇ ಕಾರಣವಾಗಿದೆ. ಇಂದು ಯುವ ಜನತೆ ಹಿಂದೂ ಧರ್ಮ ಸಂಸ್ಕೃತಿಯಿಂದ ದೂರ ಸರಿಯುತ್ತಿರುವುದರಿಂದ ಸಮಾಜದಲ್ಲಿ ಅಪರಾಧಗಳು ನಡೆಯುತ್ತಿದೆ. ಎಲ್ಲರಿಗೂ ಪುಣ್ಯದ ಫಲ ಬೇಕು ಆದರೆ ಪುಣ್ಯದ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತಾರೆ, ಅಂತೆಯೇ ಪಾಪದ ಫಲ ಯಾರಿಗೂ ಬೇಡ, ಆದರೆ ಪಾಪ ಮಾಡುತ್ತಿದ್ದಾರೆ. ಭಜನೆ, ಪೂಜೆಯಿಂದ ಆ ಪರಿಸರದಲ್ಲಿ ವಿಶೇಷ ಶಕ್ತಿ ಉತ್ಪತ್ತಿಯಾಗುತ್ತದೆ ಇದು ವೈಜ್ಞಾನಿಕವಾಗಿ ತಿಳಿದುಕೊಂಡಿರುವ ಸತ್ಯ ಆದುದರಿಂದ ಎಲ್ಲರೂ ನಮ್ಮ ಧರ್ಮ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಅವರು ಹೇಳಿದರು.

ಶ್ರಿ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಮಾತನಾಡಿ, ನಾಡಿನ ಜನರನ್ನು ಧಾರ್ಮಿಕ ಕಾರ‍್ಯದ ಮೂಲಕ ಒಂದೂಗೂಡಿಸಿ ಧಾರ್ಮಿಕ ವಿಚಾರಧಾರೆಯನ್ನು ಕೊಡಿಸುವ ಕೆಲಸ ಮಾಡುತ್ತಿರುವ ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ‍್ಯ ಶ್ಲಾಘನೀಯ, ಇನ್ನು ಮುಂದೆಯೂ ಇಂತಹ ಕಾರ‍್ಯ ನಡೆದು ನಮ್ಮ ಸಂಸ್ಕೃತಿ ಧರ್ಮ ಉಳಿಯುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು.

ಸಂಜೆ ವೇದಿಕೆಯಲ್ಲಿ ದೀಪ ಪ್ರಜ್ವಳನ ಮಾಡಿದ ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆಯವರು ಮಾತನಾಡಿ, ನಾವು ಇಂದು ಟಿ.ವಿ. ಮಾಧ್ಯಮಗಳ ಪ್ರಭಾವದಿಂದ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರಗಳನ್ನು ಮರೆಯುತ್ತಿದ್ದೆವೆ, ಆದರೆ ಕಡಬ ದುರ್ಗಾಂಬಿಕಾ ಭಜನಾ ಮಂಡಳಿ ಭಜನೆ ಮೂಲಕ ಧರ್ಮ ಸಂರಕ್ಷಣಾ ಕಾರ‍್ಯದಲ್ಲಿ ತೊಡಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆಡಳಿತಾಧಿಕಾರಿ ನವ್ಯ ಉಪಸ್ಥಿತರಿದ್ದರು. ಭಜನಾ ಮಂಡಳಿಯ ಸದಸ್ಯರಾದ ಕಮಲಾಕ್ಷ, ಸಚಿನ್, ಪ್ರಜೀತ್, ದಯಾನಂದ ಅತಿಥಿಗಳಿಗೆ ಹೂ ಗುಚ್ಚ ನೀಡಿ ಗೌರವಿಸಿದರು. ಭಜನಾ ಮಂಡಳಿಯ ಕಾರ‍್ಯದರ್ಶಿ ಮನೋಹರ್ ರೈ ಸ್ವಾಗತಿಸಿ, ಅಧ್ಯಕ್ಷ ಸೋಮಪ್ಪ ನೈಕ್ ವಂದಿಸಿದರು. ದಯಾನಂದ ಆಚಾರ್ ಕಾರ‍್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿ ಜತೆ ಕಾರ‍್ಯದರ್ಶಿ ದಿನೇಶ್ ಶೆಟ್ಟಿ ಕಳಾರ, ಉಪಾಧ್ಯಕ್ಷ ಯಶೋಧರ ಪೂವಳ, ಸದಸ್ಯರಾದ ಬಾಲಕೃಷ್ಣ, ವೆಂಕಟೇಶ್ ಆರಿಗ, ಹರಿಪ್ರಸಾದ್ ರೈ, ರಂಜೀತ್ ರೈ, ಮಹೇಶ್, ಸುಖೇಶ್, ರಾಕೇಶ್ ಸಹಕರಿಸಿದರು.

ವಿವಿಧ ಸಾಧಕರಿಗೆ ಸನ್ಮಾನ:

ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗಾಗಿ ಗಂಗಾಧರ ಶೆಟ್ಟಿ ಶ್ರೀನಿಧಿ ಮಂಗಳೂರು, ನಿವೃತ್ತ ಲೋಕಾಯುಕ್ತ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣ ಮಣಿಯಾಣಿ, ಭಜನಾ ಸೇವೆಗಾಗಿ ಯೇನೆಕಲ್ಲು ಶ್ರೀ ಆದಿಶಕ್ತಿ ಭಜನಾ ಮಂಡಳಿಯ ಮಾಧವ ಯೇನೆಕಲ್ಲು, ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೆಜರ್ ವಿಮಲ ರೈ ಕೇನ್ಯ, ನೆಲ್ಯಾಡಿ ಶ್ರೀ ಕಾಳಿಕಾಂಬ ಭಜನಾ ಮಂಡಳಿಯ ಜೆ. ಮಾಧವ ಆಚಾರ‍್ಯ, ಸುಂಕದಕಟ್ಟೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಗೋವಿಂದ ಗೌಡ ಓಟೆಕಜೆ, ಭೂತ ನರ್ತನ ಸೇವೆಗಾಗಿ ತಾಲೂಕು ದೈವರಾಧನೆ ಸಮಿತಿಯ ಅಧ್ಯಕ್ಷ ಕಿಟ್ಟು ಕಲ್ಲುಗುಡ್ಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ಬಿ. ಪುರಂದರ ರೈ ಪಿಜಕಳರವರನ್ನು ಸನ್ಮಾನಿಸಲಾಯಿತು.

ಪೂಜಾ ಕಾರ‍್ಯಕ್ರಮ:

ಮಧ್ಯಾಹ್ನ ಶ್ರೀ ಕಂಠಸ್ವಾಮಿ ಮತ್ತು ಶ್ರೀ ಮಹಾಗಣಪತಿ ದೇವರಿಗೆ ವಿಶೇಷ ಮಹಾಪೂಜೆ ನಡೆಯಿತು. ಸಂಜೆ ಕಲಶ ಪ್ರತಿಷ್ಠೆಗೊಂಡು ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಸಂಜೆ ವೇದಿಕೆಯಲ್ಲಿ ಕಡಬ ಠಾಣಾಧಿಕಾರಿ ಉಮೇಶ್ ಉಪ್ಪಳಿಕೆಯವರಿಂದ ದೀಪ ಪ್ರಜ್ವಳನ, ರಾತ್ರಿ ಸತ್ಯನಾರಾಯಣ ದೇವರ ಪೂಜೆ, ಬಳಿಕ ಶ್ರೀ ದುರ್ಗಾಂಬಿಕಾ ಅಮ್ಮನವರಿಗೆ ಮಹಾಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ‍್ಯಕ್ರಮ:

ರಾತ್ರಿ ಪ್ರಶಸ್ತಿ ವಿಜೇತ ಮಸ್ಕಿರಿ ಕುಡ್ಲ ತಂಡದಿಂದ ದೀಪಕ್ ರೈ ಪಾಣಾಜೆ, ರಾಜೇಶ್ ಮುಗುಳಿ, ಜೆ.ಎ. ತುಳಿನಾಡು, ಜಯಪ್ರಕಾಶ್, ದಿನೇಶ್ ಅಭಿನಯದಲ್ಲಿ “ತೆಲಿಕೆ ಬಂಜಿನಿಲಿಕೆ” ಬಳಿಕ ಲ| ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಲಕುಮಿ ತಂಡದ ಕುಸಲ್ದ ಕಲಾವಿದರು ಅಭಿನಯಿಸುವ ತುಳಸಿದಾಸ್ ಮಂಜೇಶ್ವರ ರಚಿಸಿರುವ ನಾದಬ್ರಹ್ಮ ನಾಗಾರ್ಜುನ ಮಂಗಲ್ಪಾಡಿ ಸಂಗೀತ ಸಂಯೋಜಿಸಿರುವ ಸುಂದರ್ ರೈ ಮಂದಾರ, ಅರವಿಂದ ಬೋಳಾರ್ ಅಭಿನಯದ ತುಳು ಹಾಸ್ಯಮಯ ನಾಟಕ “ಬದ್‌ಕೆರೆಗಾದ್ ಸೈಪಿನಕ್ಲು” ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.