ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನ ಸರಕಾರಿ ವಾಹನ

Puttur_Advt_NewsUnder_1
Puttur_Advt_NewsUnder_1

mahalingaಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನೂತನವಾಗಿ ಸರಕಾರಿ ವಾಹನ ಜ.5ರಂದು ಆಗಮನವಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಂತೆ ಪುತ್ತೂರಿನ ಎ ಗ್ರೇಡ್ ಹೊಂದಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ವಾಹನದ ಅತಿ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ  ಶಾಸಕಿ ಶಕುಂತಳಾ ಶೆಟ್ಟಿಯವರ ಶಿಫಾರಸ್ಸಿನ ಮೇರೆಗೆ ದೇವಸ್ಥಾನಕ್ಕೆ ಬುಲೇರೋ ವಾಹನ ಲಭ್ಯವಾಗಿದೆ. ಕರ್ನಾಟಕ ಏಜೆನ್ಸಿಯ ಮಾರಾಟ ಪ್ರತಿನಿಧಿಯವರು ದೇವಳದ ಪ್ರಭಾರ ಕಾರ‍್ಯನಿರ್ವಹಣಾಧಿಕಾರಿ ಹೆಚ್. ಹರೀಶ್‌ರವರಿಗೆ ಜೀಪಿನ ಕೀ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಸಿ.ಯು.ಪೂವಪ್ಪ, ದೇವಳದ ಕಚೇರಿ ವ್ಯವಸ್ಥಾಪಕ ಜಗದೀಶ್, ಸಿಬಂದಿ ಹರೀಶ್, ಅರ್ಚಕ ಪ್ರೀತಂ ಪುತ್ತೂರಾಯರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.