ಕೇಪು ಅಂಗನವಾಡಿ ಕೇಂದ್ರದ ಬೆಳ್ಳಿಹಬ್ಬದ ಸಂಭ್ರಮಾಚರಣೆ- ಅಂಗನವಾಡಿ ಕೇಂದ್ರಗಳು ಪುಟಾಣಿಗಳಿಗೆ ಸಂಸ್ಕಾರ ಕೊಡುವ ಕೇಂದ್ರಗಳಾಗಿ ಮೂಡಿಬರಬೇಕು-ಎಸ್.ಅಂಗಾರ

Puttur_Advt_NewsUnder_1
Puttur_Advt_NewsUnder_1

kepuಕಡಬ: ಹಾಲುನಿಸಿ ಪ್ರೀತಿಸಿ ಬೆಳೆಸಿದ್ದು ಹೆತ್ತತಾಯಿಯಾಗಿದ್ದರೆ ಶಾಲಾಪೂರ್ವ ಶಿಕ್ಷಣದ ಜೊತೆಗೆ ಪುಟಾಣಿಗಳ ರಕ್ಷಣೆ ಸೇವೆ ಮಾಡುವ ಅಂಗನವಾಡಿ ಕಾರ‍್ಯಕರ್ತೆಯರು 2ನೇ ತಾಯಿಯಾಗಿದ್ದಾಳೆ ಇದರೊಂದಿಗೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಿ ಮೂಡಿಬರಬೇಕೆಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಅಂಗಾರರವರು ಹೇಳಿದರು.

 ಅವರು ದ. 31ರಂದು ಕುಟ್ರುಪ್ಪಾಡಿ ಗ್ರಾಮದ ಕೇಪು ಅಂಗನವಾಡಿ ಕೇಂದ್ರದಲ್ಲಿ ನಡೆದ ೨೫ನೇ ವರ್ಷದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಸಭಾ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಪುಟಾಣಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಪಾಲನೆ ಪೋಷಣೆಯೊಂದಿಗೆ ಶಾಲಾ ಪೂರ್ವ ಶಿಕ್ಷಣ ನೀಡಿ ಸಂಸ್ಕಾರಯುತರನ್ನಾಗಿ ಮಾಡುವ ಕೇಂದ್ರಗಳಾಗಿದ್ದು ಕಾರ‍್ಯಕರ್ತೆಯರು ಹಾಗೂ ಸಹಾಯಕಿಯರು ಅವಿರತ ಶ್ರಮ ಪಡುತ್ತಿದ್ದಾರೆ. ಅವರ ಸೇವೆ ಎಲ್ಲರಿಗೂ ಮಾರ್ಗದರ್ಶನವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿರವರು ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬ ಮಾತಿನಂತೆ ಇಲ್ಲಿಯ ಪುಟಾಣಿಗಳ ಚಟುವಟಿಕೆಗಳನ್ನು ಗಮನಿಸಿದಾಗ ಇವರ ಮುಂದಿನ ನಡೆ ನಮಗೆ ಅರ್ಥವಾಗುತ್ತಿದೆ. ಇವರು ಇಷ್ಟು ಒಳ್ಳೆಯ ಪ್ರತಿಭಾನ್ವಿತರಾಗಲು ಇಲ್ಲಿಯ ಕಾರ‍್ಯಕರ್ತೆಯರೇ ಕಾರಣರಾಗಿದ್ದಾರೆ. ಇನ್ನು ಹೆಚ್ಚಿನ ಪ್ರೋತ್ಸಾಹ ಅವರಿಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ  ತಾ.ಪಂ.ಅಧ್ಯಕ್ಷೆ ಪುಲಸ್ತ್ಯಾ ರೈ ಮಾತನಾಡಿ, ಕೇಪು ಅಂಗನವಾಡಿಯಲ್ಲಿ ನಡೆಯುವ ಬೆಳ್ಳಿಹಬ್ಬದ ಕಾರ‍್ಯಕ್ರಮ ಗಮನಿಸಿದಾಗ ಇದು ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ‍್ಯಕ್ರಮವೆಂದು ಭಾಸವಾಗುತ್ತಿದೆ.  ಪುಟಾಣಿಗಳು ನಯ ವಿನಯದಿಂದ ಒಗ್ಗಟ್ಟಾಗಿ ಅನ್ಯೋನ್ಯತೆಯಿಂದ ಕೂಡಿ ಬಾಳುವುದನ್ನು ನಾವು ಗಮನಿಸಿದರೆ ಸಮಾಜದಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಪುಟಾಣಿಗಳಿಂದಲೇ ಸಾಧ್ಯವೆಂದು ಹೇಳಿದರು.

ಕೇಪು ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಲಲಿತಾ ಪುತ್ರಬೈಲ್, ಕೇಪು ಶಾಲಾ ಮುಖ್ಯ ಶಿಕ್ಷಕ ಹರಿಪ್ರಸಾದ್, ಅಂಗನವಾಡಿ ಕಾರ‍್ಯಕರ್ತೆ ಸಹಾಯಕಿಯರ ಸಂಘದ ಅಧ್ಯಕ್ಷೆ ಮೇರಿ ಮತ್ತಾಯಿ, ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಜಾನಕಿ, ತಾ.ಪಂ.ಸದಸ್ಯೆ ದಿವ್ಯಾ ಬಾಲಕೃಷ್ಣ, ಸಿಡಿಪಿಒ ಶಾಂತಿ ಟಿ.ಹೆಗಡೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿ ಪಾರ್ವತಿಯವರನ್ನು ಶಾಸಕರು ಶಾಲು ಹೊದಿಸಿ ಗೌರವಿಸಲಾಯಿತು. ಸಹಾಯಕಿಯರಾಗಿ ಸೇವೆ ಸಲ್ಲಿಸಿದ ಮೀನಾಕ್ಷಿ ಸಾಂತಪ್ಪ ಗೌಡ, ಸಾರಮ್ಮ ಕೇಪು ಹಾಗೂ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿರುವ ಜಯಂತಿ ಬಾಲಕೃಷ್ಣ ರೈ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯರಾಗಿದ್ದು ಕೇಪು ಅಂಗನವಾಡಿಯ ಸಮನ್ವಯ ಸಮಿತಿ ಅಧ್ಯಕ್ಷರಾಗಿ ಬೆಳ್ಳಿಹಬ್ಬದ ಆಚರಣಾ ಸಮಿತಿ ಅಧ್ಯಕ್ಷರಾಗಿ ಯಶಸ್ವಿ ಕಾರ‍್ಯಕ್ರಮ ನಿರ್ವಹಿಸಿದ ಶಿವಪ್ರಸಾದ್ ಮೈಲೇರಿ ಹಾಗೂ ಕಾರ‍್ಯದರ್ಶಿ ಜಿತೇಶ್ ನಾಲೂರುರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.

 ಅಂಗನವಾಡಿ ನಿರ್ಮಾಣಕ್ಕೆ ಸಹಾಯಕರಾದ ಅಂದಿನ ಮಂಡಲ ಪಂಚಾಯತ್ ಸದಸ್ಯ ದುಗ್ಗಣ್ಣ ಗೌಡ ಪರವಾಗಿ ಅವರ ಮಗ ಕುಸುಮಾಧರ ದೇಂತಾರು ಸಹಕರಿಸಿದ ಪೂವಪ್ಪ ಗೌಡ ನಾಲೂರು ಪರವಾಗಿ ಅವರ ಪತ್ನಿ ಹೊನ್ನಮ್ಮರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕುಸುಮಾವತಿ, ಪುಲಸ್ತ್ಯಾ ರೈ ಅಂಗನವಾಡಿ ಸ್ಥಳ ಆರ್‌ಟಿಸಿ ಮಾಡುವಲ್ಲಿ ಪ್ರಯತ್ನ ಮಾಡಿದ ಶಿವರಾಮ ಶೆಟ್ಟಿ ಕೇಪು ಇವರನ್ನು ಗೌರವಿಸಲಾಯಿತು.   ಬಾಲಚಂದ್ರ ಗೌಡ ಬಜತ್ತಡ್ಕ, ಚಂದ್ರಮ್ಮ, ರೀಟಾ ವರ್ಗೀಸ್, ಗೋಪಾಲ ಗೌಡ ಮರುವಂತಿಮಾರ್, ಸುನಂದ ಕೋಡಿಬೈಲ್, ಶಿಕ್ಷಕಿ ದೇವಕಿ, ಯಶೋಧ ಶೆಟ್ಟಿ, ಗಿರಿಜ, ಹರೀಶ್ ರೈ, ಗುಡ್ಡಪ್ಪ ಗೌಡ, ಸುಮಾ, ಜಯಂತಿ, ಪರ್ವಿನ್, ,ಮೈಮುನಾ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಪ್ರಮುಖರಾದ ಸಿಎ ಬ್ಯಾಂಕ್ ಅಧ್ಯಕ್ಷ ಸೀತಾರಾಮ ಗೌಡ, ಸರಸ್ವತಿ ವಿದ್ಯಾ ಸಂಸ್ಥೆಯ ಸಂಚಾಲಕ ವೆಂಕಟರಮಣ ರಾವ್, ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ರಾವ್ ಕೋಡಿಬೈಲ್, ಕಡಬ ಜೆಸಿ ಅಧ್ಯಕ್ಷ ಜಯರಾಮ ಆರ್ತಿಲ, ನೂಜಿಬಾಳ್ತಿಲ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಕಿಟ್ಟು ಕೆ, ನೂಜಿಬಾಳ್ತಿಲ ಶಾಲಾ ಶಿಕ್ಷಕಿ ಶ್ರೀಲತಾ, ಕೇಪು ಐಡಿಯಲ್ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಹರೀಶ್ ಕೋಡಿಬೈಲ್, ಕುಟ್ರುಪ್ಪಾಡಿ ಗ್ರಾ.ಪಂ.ಮಾಜಿ ಸದಸ್ಯರಾದ ಸುರೇಶ್ ದೇಂತಾರು, ಶಿವಪ್ರಸಾದ್ ಕೊಡಿಂಕಿರಿ ಮತ್ತಿತರರು ಉಪಸ್ಥಿತರಿದ್ದರು.

ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ಸ್ವಾಗತಿಸಿ, ಕಾರ‍್ಯದರ್ಶಿ ಜಿತೇಶ್ ನಾಲೂರು ವಂದಿಸಿದರು. ಅಂಗನವಾಡಿ ಕಾರ‍್ಯಕರ್ತೆ ಪಾರ್ವತಿ ವರದಿ ವಾಚಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಭವಾನಿ ಕಾರ‍್ಯಕ್ರಮ ನಿರೂಪಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.