ಬೊಳುವಾರು ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ: ಜ.11 ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಜ.18 ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Puttur_Advt_NewsUnder_1
Puttur_Advt_NewsUnder_1

IMG_2505

IMG_2507

IMG_2504

20160105211240

20160105211241 (1)

ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಲ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ನವೀಕರಣಗೊಂಡು ಜ.19ರಿಂದ ಜ.14ರ ವರೆಗೆ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ಜ.5ರಂದು ರಾತ್ರಿ ನಡೆಯಿತು.
ಬ್ರಹ್ಮಕಲಶೋತ್ಸವ ಅಧ್ಯಕ್ಷ ಗೋಪಾಲಕೃಷ್ಣ ಹೇರಳೆ ಮಾತನಾಡಿ ಬ್ರಹ್ಮಕಲಶೋತ್ಸವಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈಗಾಗಲೇ ನಿಗದಿಪಡಿಸಿದ ವಲಯದವರು, ಸಮಿತಿಯವರು ಆಮಂತ್ರಣ ಪತ್ರವನ್ನು ಪ್ರತಿ ಮನೆಗೂ ತಲುಪುವಂತೆ ಮಾಡಬೇಕು ಎಂದರು. ವಾಸ್ತುಶಿಲ್ಪಿ ಎನ್.ಕೆ. ಜಗನ್ನೀವಾಸ ರಾವ್, ಸಮಿತಿ ಉಪಾಧ್ಯಕ್ಷ ಬಿ.ಜೆ. ಸುವರ್ಣ, ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿ ರಂಗನಾಥ ರಾವ್, ಕ್ಷೇತ್ರಾಭಿವೃದ್ಧಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಯೋಗೀಶ್ ಕಾಮತ್, ಪ್ರಚಾರ ಸಮಿತಿಯ ಪೂರ್ಣೇಶ್ ಮತ್ತಿತರು ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಜ.11 ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ, ಜ.18 ಹಸಿರು ಹೊರೆಕಾಣಿಕೆ ಮೆರವಣಿಗೆ: ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಆಮಂತ್ರಣ ಪತ್ರ ಬಿಡುಗಡೆಗೊಂಡಿದ್ದು, ಜ.11ರಂದು ಪುತ್ತೂರು ಪೇಟೆಯಲ್ಲಿ ಆಮಂತ್ರಣ ಪತ್ರ ವಿತರಣೆ ಮಾಡಲಾಗುವುದು ಹಾಗೂ ಜ.18ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ಮಾಡುವುದೆಂದು ಸಮಿತಿಯಲ್ಲಿ ನಿರ್ಧಾರವಾಯಿತು.
ಪುರಸಭಾ ಸದಸ್ಯ ವಿಶ್ವನಾಥ ಗೌಡ ಅಂಬುಲ, ವಿಶ್ವ ಪುಂಡಿತ್ತೂರು, ಕುಂಜಾರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುರಳಿಕೃಷ್ಣ ಹಸಂತಡ್ಕ, ಸಮಿತಿ ಪದಾಧಿಕಾರಿಗಳು, ವಲಯ ಸಮಿತಿ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು.
ಕರಸೇವೆಗೆ ಅವಕಾಶ: ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದಂತೆ ಕರಸೇವೆ ಮಾಡಲು ಅವಕಾಶವಿದ್ದು, ಭಕ್ತಾದಿಗಳು ಶಂಕರ್ ಮಲ್ಯ ಬೊಳುವಾರು (7760917797), ಸನತ್ ಬೊಳುವಾರು (9483893885)ರವರನ್ನು ಸಂಪರ್ಕಿಸುವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.