Breaking News

ಶ್ರೀದುರ್ಗಾಂಬ ಪದವಿ ಪೂರ್ವ ವಿದ್ಯಾಲಯದ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

padavi

ಆಲಂಕಾರು:  ಇಲ್ಲಿನ ಶ್ರೀದುರ್ಗಾಂಬ ಪದವಿ ಪೂರ್ವ ವಿದ್ಯಾಲಯ ವಾರ್ಷಿಕೋತ್ಸವು ಡಿ.2ರಂದು ನಡೆಯಿತು.  ಧ್ವಜಾರೋಹಣದ ನಡೆದ ನಂತರ ಎಸ್.ಪಿ ಸೇಷಪ್ಪ ಶೆಟ್ಟಿ ಸುರುಳಿ ರವರು ದೀಪಬೆಳಗಿಸುವುದರೊಂದಿಗೆ ಸಭಾ ಕಾರ್ಯ ಪ್ರಾರಂಭಗೊಂಡಿತು. ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುನಂದಾ ಬಾರ್ಕೊಳಿ ವಹಿಸಿ ಶುಭ ಹಾರೈಸಿದರು.  ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಮುಖ್ಯ ಗುರು ಶ್ರೀಧರ್ ರೈರವರು ಮಾತನಾಡಿ ಶುಭ ಹಾರೈಸಿದರು.

ಇನ್ನೋರ್ವ ಅತಿಥಿ ಉಮೇಶ್ ಎಂ. ಕರ್ಕೇರವರು ಮಾತನಾಡಿ, ಪಾಲಕರು, ಆಡಳಿತ ಮಂಡಳಿ, ಶಿಕ್ಷಕರು, ಸಮರ್ಪಣಾ ಭಾವದಿಂದ ಗುಣಾತ್ಮಕ ಶಿಕ್ಷಣ ನೀಡಿದರೆ ವಿದ್ಯಾ ಸಂಸ್ಥೆಗಳು ಬೆಳಗಲು ಸಾಧ್ಯವಿದೆ ಎಂದರು.

ದುರ್ಗಾಂಬ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ಮನವಳಿಕೆರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  ಶಾಲಾ ಶೈಕ್ಷಣಿಕ ವರದಿಯನ್ನು ಪ್ರಾಂಶುಪಾಲರಾದ ಸತ್ಯನಾರಾಯಣ ಭಟ್ ವಾಚಿಸಿದರು. ಶಿಕ್ಷಕರಾದ ಜಯಕರ ರೈ, ನೀಲಪ್ಪ ಗೌಡ, ಆಶಾರವರು ಬಹುಮಾನದ ಪಟ್ಟಿಯನ್ನು ವಾಚಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ, ರಾಮರಾಜ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಗೋಪಾಲ ಕೃಷ್ಣ ಭಟ್, ಹಾಗೂ ಶಿಕ್ಷಕಿ ಶಶಿಕಲಾರವರು ಅತಿಥಿಗಳನ್ನು ಸ್ವಾಗತಿಸಿದರು. ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ಆಡಳಿತ ಮಂಡಳಿಯ ಸದಸ್ಯರಾದ ದಯಾನಂದ ಗೌಡ ಆಲಡ್ಕ, ವಿಜಯ ಕುಮಾರ್ ರೈ ಮನವಳಿಕೆ, ತಾರಾನಾಥ ರೈ ನಗ್ರಿ ನೀಡಿದರು. ಪ್ರಾರ್ಥನೆಯನ್ನು ಚೈತನ್ಯ ಭಟ್, ಗಾಯತ್ರಿ ಜ್ಯೋತಿ ಭಟ್, ಕಾಂತಿ ಭಟ್ ನೆರವೇರಿಸಿದರು. ಕಾರ್ಯಕ್ರಮವನ್ನು ರೂಪಾರವರು ನಿರೂಪಿಸಿ,  ಆಡಳಿತ ಮಂಡಳಿಯ ಕಾರ್ಯದರ್ಶಿ ಈಶ್ವರ ಗೌಡ ಪಜ್ಜಡ್ಕ ವಂದಿಸಿದರು.

ವೇದಿಕೆಯಲ್ಲಿ ಸಂಚಾಲಕರಾದ ಉಮೇಶ್ ರೈ ಮನವಳಿಕೆ, ಇಂದುಶೇಖರ ಭಟ್, ಉಪಸ್ಥಿತರಿದ್ದರು. ಶಿಕ್ಷಕ ಶಿಕ್ಷಕಿಯರಾದ ನವೀನ್ ಕುಮಾರ್ ರೈ, ವನಿತಾ, ಪದ್ಮಶ್ರೀ, ನಾರಾಯಣ ಗೌಡ, ಸರಸ್ವತಿ ದೇವಿ, ಗಂಗಪ್ಪ ಗೌಡ, ಶ್ರೀಪತಿ ರಾವ್, ನಿವ್ಯ, ರಶ್ಮಿತಾ, ಹುಕ್ರ, ನಾರಾಯಣ, ಉದಯ ಚಂದ್ರಿಕ, ಜಯಶ್ರೀ ಸಹಕರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರಣ್ಯ ಕಲ್ಲೇರಿ, ಪಂಚಾಯತ್  ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಫೀರ್‌ಮುಹಮ್ಮದ್ ಸಾಹೇಬ್, ನಿಂಗರಾಜು, ಜಯಪ್ರಕಾಶ್ ರೈ ಜಿ.ಪಿ, ನಾಗಪ್ಪ ಗೌಡ, ಯದುಶ್ರೀ ಆನೆಗುಂಡಿ, ಸುಧಾಕರ ರೈ ಮನವಳಿಕೆ, ರಾಮಚಂದ್ರ ಭಟ್, ನಿವೃತ ಮುಖ್ಯ ಗುರು ರಮಾನಾಥ ರೈ, ದಯಾನಂದ ಗೌಡ ಬಡ್ಡಮೆ, ಶಶಿಧರ್ ರೈ ಮನವಳಿಕೆ ಮೊದಲಾದವರು  ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.