ಕಜೆ ಬೇರಿಕೆ ಅಂಗನವಾಡಿ ಕೇಂದ್ರದ ರಜತ ಮಹೋತ್ಸವ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಮಾವೇಶ ಮಕ್ಕಳ ಮೇಲೆ ಒತ್ತಡ ಹೇರಬಾರದು-ಮಹೇಶ್ ಪ್ರಸಾದ್

Puttur_Advt_NewsUnder_1
Puttur_Advt_NewsUnder_1

kaje

ಪುತ್ತೂರು: ಬನ್ನೂರು ಗ್ರಾ.ಪಂ. ವ್ಯಾಪ್ತಿಯ ಕಜೆ ಬೇರಿಕೆ ಅಂಗನವಾಡಿ ಕೇಂದ್ರದ ರಜತ ಮಹೋತ್ಸವ, ಬಾಲಮೇಳ, ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸಮಾವೇಶ ಜ.3ರಂದು ನಡೆಯಿತು.

ವಿದ್ಯಾಬ್ಯಾಸ ಬೆರೆ, ಅರ್ಹತೆ ಬೇರೆ: ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್‌ರವರು ಮಾತನಾಡಿ, ಅಂಗನವಾಡಿ ವ್ಯಕ್ತಿತ್ವ ವಿಕಸನಗೊಳ್ಳುವ ಕೇಂದ್ರ. ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರ ಅಲ್ಲ. ವಿಧ್ಯಾಬ್ಯಾಸ ಬೇರೆ ಅರ್ಹತೆ ಬೇರೆ. ಮಕ್ಕಳ ಮನಸ್ಸು ಬಿಳಿಕಾಗದ ಇದ್ದ ಹಾಗೆ ಮಕ್ಕಳ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು. ಮಕ್ಕಳ ಮೇಲೆ ತೀವ್ರವಾದ ಒತ್ತಡ ಹೇgಬಾರದು ಎಂದರು. ತಾ.ಪಂ. ಸದಸ್ಯೆ ನೇತ್ರಾವತಿ ಕೆ.ಪಿ. ಗೌಡರವರು ಮಾತನಾಡಿ, ಅಂಗನವಾಡಿ ಕೇಂದ್ರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಎಂದರು.

ಗ್ರಾ.ಪಂ.ಅಧ್ಯಕ್ಷೆ ರಮಣಿ ಡಿ. ಗಾಣಿಗರವರು ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮುಖ್ಯ. ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಉತ್ತಮ ರೀತಿಯಲ್ಲಿ ದೊರಕಿದರೆ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ನಿವೃತ್ತ ಶಿಕ್ಷಕಿ ವನಮಾಲಿನಿ ಅಮ್ಮರವರು ಮಾತನಾಡಿ, ಅಂಗನವಾಡಿ ಸ್ವಾವಲಂಬಿ ಬದುಕಿಗೆ ಅಡಿಪಾಯ. ಶಿಕ್ಷಣದ ಬುನಾದಿ. ಮಕ್ಕಳ ಪ್ರವೃತ್ತಿ ಉತ್ತಮವಾಗಿರಬೆಕು ಎಂದರು. ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಯೋಜನಾಧಿಕಾರಿ ಧರ್ಣಪ್ಪ ಮೂಲ್ಯರವರು ಮಾತನಾಡಿ, ಹೆಣ್ಣು ಅಬಲೆಯಲ್ಲ, ಆಕೆ ಸಬಲೆ. ಸ್ತ್ರೀ ಸಂಘಟನೆ ಅಗತ್ಯ. ಚಿಂತನೆಗಳು ಆಶಾದಾಯಕವಾಗಿರಬೇಕು ಎಂದರು. ಮೇಲ್ವಿಚಾರಕಿ ಜಲಜಾಕ್ಷಿರವರು ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಪ್ರೀತಿಯಿಂದಲೇ ಶಿಕ್ಷಣ ಕೊಡಬೇಕು. ಒಗ್ಗೂಡುವಿಕೆಯ ಕೆಲಸದಿಂದ ಯಶಸ್ಸು ಸಾಧ್ಯ ಎಂದರು. ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆರವರು ಮಾತನಾಡಿ, ಇಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇಲ್ಲಿನ ರಸ್ತೆ ಅಭಿವೃದ್ದಿಗೆ ಶಾಸಕಿ ಶಕುಂತಳಾ ಶೆಟ್ಟಿರವರು ರೂ.೧೫ ಲಕ್ಷ ಅನುದಾನ ಇರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಬನ್ನೂರು ಗ್ರಾ.ಪಂ. ಉಪಾಧ್ಯಕ್ಷ ಜಿನ್ನಪ್ಪ ಗೌಡರವರು ಮಾತನಾಡಿ, ಸ್ತ್ರೀ ಶಕ್ತಿ ಮಹಾಶಕ್ತಿ. ಇಲ್ಲಿನ ಅಂಗನವಾಡಿ ಕೆಂದ್ರದ ಅಭಿವೃದ್ದಿಗೆ ತಾ.ಪಂ.ನಿಂದ ಅನುದಾನಗಳು ಒದಗಿದೆ ಎಂದರು. ಬೆಳ್ಳಿಹಬ್ಬ ಸಮತಿಯ ಗೌರವಾಧ್ಯಕ್ಷ ಜನಾರ್ದನ ಭಟ್ ಸೇಡಿಯಾಪುರವರು ಮಾತನಾಡಿ, ಶಿಕ್ಷಣ ಸಂಸ್ಥೆಗಳ ಅಬಿವೃದ್ದಿಗೆ ಸದಾ ಸಹಕಾರಕ್ಕೆ ಸಿದ್ಧ, ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು. ಅಂಗನವಾಡಿಯ ಹಿರಿಯ ವಿಧ್ಯಾರ್ಥಿ, ಬಿಜಾಪುರದಲ್ಲಿ ಉಪನ್ಯಾಸಕರಾಗಿರುವ ಮಹೇಶ್ ಆರುವಾರರವರು ಸಭಾಧ್ಯಕ್ಷತೆ ವಹಿಸಿ ಸಂದರ್ಭೊಚಿತವಾಗಿ ಮಾತನಾಡಿ ಶುಭಹಾರೈಸಿದರು.

ದತ್ತುನಿಧಿ: ಬನ್ನೂರು ಗ್ರಾ,ಪಂ. ಸದಸ್ಯ ಈಶ್ವರ್ ಭಟ್ ಪಂಜಿಗುಡ್ಡೆರವರು ಪಡ್ನೂರು ಯರ್ಮುಂಜಪಳ್ಳ ಶ್ರೀ ಧೂಮಾವತಿ ಯುವಕ ಮಂಡಲ, ಅಶ್ವಥ ಕಟ್ಟೆ ದೇವತಾ ಸಮಿತಿಯ ವತಿಯಿಂದ ಅಂಗನವಾಡಿಗೆ ರೂ.೧೦,೦೦೦ ದತ್ತು ನಿಧಿಯನ್ನು ನೀಡಿದರು.

ಸನ್ಮಾನ: ತಿಮ್ಮಪ್ಪ ಮೂಲ್ಯ ಕಜೆ, ರೇವತಿ, ವೀಣಾ, ಮಾಲಕ್ಕ, ವಿಮಲ, ಅರುಣಾ ಡಿ.ರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ರಾಷ್ಟ್ರ ಮಟ್ಟ, ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹಳೆ ವಿಧ್ಯಾರ್ಥಿಗಳನ್ನು ಗೌರವಿಸಿದರು.

ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆ ಜಯಂತಿರವರು ವರದಿ ವಾಚಿಸಿದರು. ಬನ್ನೂರು ಗ್ರಾ.ಪಂ. ಸದಸ್ಯ ರತ್ನಾಕರರವರು ಸ್ವಾಗತಿಸಿದರು. ಮಾಧವ ಕುಲಾಲ್‌ರವರು ಕಾರ್ಯಕ್ರಮ ನಿರೂಪಿಸಿದರು. ಗಿರೀಶ್ ಕುಲಾ ವಂದಿಸಿದರು. ಗಿರೀಶ್, ಭಾಗ್ಯಶ್ರೀ, ಮಮತಾ, ಶೀನಪ್ಪ ಕುಲಾಲ್, ಮೀನಾಕ್ಷಿ, ಚಂದ್ರಾಕ್ಷಿ, ಶುಭ, ಅಣ್ಣು ಮೇಸ್ತ್ರಿ, ಮಾಲತಿರವರು ಅತಿಥಿಗಳನ್ನು ಗೌರವಿಸಿದರು. ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು.  ಜ. ೨೭ರಂದು ಕ್ರೀಡೋತ್ಸವ ಜರಗಿತು. ದ.ಕ.ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಬನ್ನೂರು ಗ್ರಾ.ಪಂ., ಸಮನ್ವಯ ಸಮಿತಿ  ಕಜೆ ಬೇರಿಕೆ, ಬೆಳ್ಳಿಹಬ್ಬ ಸಮಿತಿ, ಅಂಗನವಾಡಿ ಕೇಂದ್ರ ಕಜೆ ಬೇರಿಕೆ, ಪೋಷಕರು, ವಿದ್ಯಾರ್ಥಿಗಳು, ಭಾಗ್ಯಶ್ರೀ, ದೇವಿಶ್ರೀ, ಪುಣ್ಯಶ್ರೀ, ಸ್ವಸಹಾಯ ಗುಂಪು, ಮುಂದುವರಿಕ ಶಿಕ್ಷಣ ಕೇಂದ್ರ ಬನ್ನೂರು ಕಜೆ, ಸೇಡಿಯಾಪು ಇವುಗಳ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆದವು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.