Breaking News

ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆ : ಬಲಾತ್ಕಾರದ ಬಂದ್ ವಿರುದ್ಧದ ಸುದ್ದಿ ಆಂದೋಲನಕ್ಕೆ ಬೆಂಬಲ

Puttur_Advt_NewsUnder_1
Puttur_Advt_NewsUnder_1

5737654c-79a8-4c8c-9b77-d46e2a29f038

 

 

 

 

 

 

 

ಸಾಮಾನ್ಯ ಸಭೆ

ಪ್ರಮುಖ ನಿರ್ಣಯ

*ಪಂಚಾಯತ್ ಛಾವಣಿಗೆ ಸೋಲಾರ್ ಪ್ಯಾನೇಲ್ ಅಳವಡಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದು.

*ಪ.ಜಾ ಮತ್ತು ಪ.ಪಂ.ದವರಿಗೆ 94 ಸಿ ಯೋಜನೆಯಲ್ಲಿ ಅರ್ಜಿಗೆ ಶುಲ್ಕ ವಿನಾಯಿತಿ ನೀಡುವ ಕುರಿತು ಕಂದಾಯ ಇಲಾಖೆಗೆ ಬರೆದುಕೊಳ್ಳುವುದು.

*ಪಂಚಾಯತ್ ಕಟ್ಟಡಕ್ಕೆ “ಅಟಲ್ ಜೀ” ಹೆಸರು ನಾಮಕರಣ

*ಬೀದಿ ದೀಪಗಳ ಸಮರ್ಪಕ ನಿರ್ವಹಣೆಗೆ ಕ್ರಮಕೈಗೊಳ್ಳುವುದು

*ತಾ.ಪಂ.ಡೈರಿಗೆ ಗ್ರಾ.ಪಂ.ನಿಂದ ಜಾಹಿರಾತು ನೀಡಿರುವದರಿಂದ ಎಲ್ಲಾ ಸದಸ್ಯರಿಗೂ ಡೈರಿ ನೀಡುವ ಕುರಿತು ತಾ.ಪಂ.ಗೆ ಬರೆದುಕೊಳ್ಳುವುದು.

ನಿಡ್ಪಳ್ಳಿ: ಜನಸಾಮಾನ್ಯರಿಗೆ ಅನ್ಯಾಯವಾದಾಗ ಅದನ್ನು ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಬಲಾತ್ಕಾರದ ಬಂದ್ ಮತ್ತು ಕೋಮು ಅಥವಾ ಯಾವುದೇ ಗಲಭೆ ವಿರುದ್ಧದ ಸುದ್ದಿ ಆಂದೋಲನಕ್ಕೆ ಬೆಂಬಲ ನೀಡಲು ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು ಎಂದು ಅಭಿಪ್ರಾಯ ವ್ಯಕ್ತವಾಯಿತು.

ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆ ಪಂಚಾಯತ್ ಅಧ್ಯಕ್ಷೆ ಉಮಾವತಿಯವರ ಅಧ್ಯಕ್ಷತೆಯಲ್ಲಿ ಜ.6 ರಂದು ನಡೆಯಿತು.

*ರೆಂಜಕ್ಕೆ ಹೊಸ ಕೊಳವೆಬಾವಿ ರಚನೆಗೆ ನಿರ್ಣಯ: ರೆಂಜ ಪರಿಸರದಲ್ಲಿ ಕುಡಿಯುವ ನೀರಿಗೆ ಒಂದು ಬೋರ್‌ವೇಲ್‌ನ ಅವಶ್ಯಕತೆ ಇದೆ ಎಂದು ಸದಸ್ಯರು ಪ್ರಸ್ತಾವಿಸಿದಾಗ ರಚನೆಗೆ ನಿರ್ಣಯಿಸಲಾಯಿತು.

*ಕುಮ್ಕಿ ಭೂಮಿಯನ್ನು ರೈತರಿಗೆ ನೀಡಲು ಒತ್ತಾಯ:  ಕುಮ್ಕಿ ಭೂಮಿಯ ಹಕ್ಕನ್ನು ಅದರಲ್ಲಿ ಕೃಷಿ ಮಾಡಿದ ರೈತರಿಗೆ ನೀಡಬೇಕು. ಅದನ್ನು ಸರಕಾರ ವಶಪಡಿಸಿಕೊಂಡರೆ ಕೃಷಿ ಮಾಡಿ ಜೀವನ ಮಾಡುತ್ತಿದ್ದ  ರೈತರಿಗೆ ಅನ್ಯಾಯವಾಗುತ್ತದೆ. ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಲು ಸರಕಾರಕ್ಕೆ    ಬರೆಯುವಂತೆ ನಿರ್ಣಯಿಸಲಾಯಿತು.

*ಮದ್ಯದಂಗಡಿ ಪರವಾನಗಿ ನೀಡಲು ಸಾರ್ವಜನಿಕರ ಅಭಿಪ್ರಾಯ ಕೇಳುವುದು: ರೆಂಜದಲ್ಲಿ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವಂತೆ ಬಂದ ೨ ಅರ್ಜಿಗಳನ್ನು ಪರಿಶೀಲಿಸಿದ ಸಭೆ, ಈ ಬಗ್ಗೆ ಮುಂಬರುವ ಗ್ರಾಮಸಭೆ ಮುಂದೆ ಇಟ್ಟು ಸಾರ್ವಜನಿಕರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆಯೋ ಆ ರೀತಿ ಮುಂದಿನ ಕ್ರಮ ಕೈಗೊಳ್ಳುವುದೆಂದು ಸರ್ವಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದಾಗ ಅದರಂತೆ ನಿರ್ಣಯಿಸಲಾಯತು.

*ಬಿ.ಪಿ.ಎಲ್ ಪಡಿತರ ಚೀಟಿ ನೀಡಲು ಕಂದಾಯ ಇಲಾಖೆಗೆ ಬರೆಯುವುದು:

ಇತ್ತೀಚೆಗಿನ ದಿನಗಳಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ಸದಸ್ಯರು, ವಿದ್ಯುತ್ ಸರಿಯಾಗಿ ಸರಿಯಾದ ಸಮಯಕ್ಕೆ ಇಲ್ಲದೆ ಕೃಷಿಕರಿಗೆ ಬಹಳ ತೊಂದರೆಯಾಗುತ್ತಿದ್ದು, ಪವರ್ ಕಟ್ ಮಾಡುವ ನಿಗದಿತ ಸಮಯದ ವೇಳಾಪಟ್ಟಿ ಪ್ರಕಟಿಸುವುದು ಮತ್ತು ಹೆಚ್ಚು ಸಮಯ ವಿದ್ಯುತ್ ನೀಡಲು ಮೆಸ್ಕಾಂ ಇಲಾಖೆಗೆ ಬರೆಯವುದು ಎಂದು ನಿರ್ಣಯಿಸಲಾಯಿತು.

*ಕುಮ್ಕಿ, ಕಾನ, ಗೋಮಾಳದಲ್ಲಿ ವಾಸ್ತವ್ಯದ ಕಟ್ಟಡದ ಸಕ್ರಮಕ್ಕೆ 94 ಸಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಂಜೂರುಗೊಳಿಸುವಂತೆ ಸರಕಾರಕ್ಕೆ ಬರೆಯುವುದೆಂದು ನಿರ್ಣಯಿಸಲಾಯಿತು.

*ಬೆಟ್ಟಂಪಾಡಿ ಉಪ ಆರೋಗ್ಯ ಕೇಂದ್ರದಲ್ಲಿದ್ದ ಕಿರಿಯ ಆರೋಗ್ಯ ಸಹಾಯಕಿಗೆ ವರ್ಗಾವಣೆಯಾಗಿದ್ದು, ಆ ಸ್ಥಾನಕ್ಕೆ ಶೀಘ್ರ ನೇಮಕಗೊಳಿಸಲು ಆರೋಗ್ಯ ಇಲಾಖೆಗೆ ಬರೆಯುವುದು ಎಂದು ನಿರ್ಣಯಿಸಲಾಯಿತು.

*ಇರ್ದೆಯ ಮಧುವನ ಕಟ್ಟಡವನ್ನು ಪಂಚಾಯತ್‌ಗೆ ಹಸ್ತಾಂತರಿಸಲು ಜೇನು ಕೃಷಿ ಇಲಾಖೆಗೆ ಕೇಳಿಕೊಳ್ಳುವುದು ಎಂದು ನಿರ್ಣಯಿಸಲಾಯಿತು.

* ಇರ್ದೆ ಬೆಂದ್ರ್‌ತೀರ್ಥದಲ್ಲಿ ನಿರ್ಮಿಸಿದ ಪ್ರವಾಸಿಧಾಮ ಕಟ್ಟಡ ನಿರ್ಮಿಸಿ ನಾಲ್ಕು ವರ್ಷ ಕಳೆದರೂ ಅದನ್ನು ಉದ್ಘಾಟಿಸಿಲ್ಲ ಎಂಬ ವಿಷಯ ಪ್ರಸ್ತಾಪಿಸಿ, ಅದನ್ನು ಶೀಘ್ರವೇ ಉದ್ಘಾಟಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿ ಕೊಡುವಂತೆ ಪ್ರವಾಸೋದ್ಯಮ ಇಲಾಖೆಗೆ ಬರೆಯುವುದೆಂದು ನಿರ್ಣಯಿಸಲಾಯಿತು.

ಪಂಚಾಯತ್ ಉಪಾಧ್ಯಕ್ಷೆ ಭವಾನಿ ಕೆ., ಸದಸ್ಯರಾದ ಪಾರ್ವತಿ ಲಿಂಗಪ್ಪ ಗೌಡ, ರಮೇಶ್ ಶೆಟ್ಟಿ ಕೊಮ್ಮಂಡ, ರಕ್ಷಣ್ ರೈ, ಪ್ರಕಾಶ್ ರೈ ಬೈಲಾಡಿ, ದಿನೆಶ ಜಿ., ಜಗನ್ನಾಥ ರೈ ಕೊಮ್ಮಂಡ, ಮೊದು ಕುಂಞಿ ಕೋನಡ್ಕ, ವಿನೋದ್ ರೈ ಗುತ್ತು, ಬೇಬಿ ಜಯರಾಂ, ಭವಾನಿ ಪಿ., ಶಾಲಿನಿ ಘಾಟೆ, ದಿವ್ಯಾ ಪಾರ, ಪ್ರೇಮಲತಾ ಕೆ., ಪದ್ಮಾವತಿ ಡಿ., ಪುಷ್ಪಲತಾ, ಐತ್ತಪ್ಪ ಜಿ., ಪಿ.ಡಿ.ಓ ಶೈಲಜಾ ಉಪಸ್ಥಿತರಿದ್ದರು. ಕಾರ‍್ಯದರ್ಶಿ ಬಾಬು ನಾಯ್ಕ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರಾಮಣ್ಣ, ಸಂದೀಪ್, ಚಂದ್ರಾವತಿ, ಸವಿತಾ ಸಹಕರಿಸಿದರು.

ಬೆಟ್ಟಂಪಾಡಿ ಗ್ರಾ.ಪಂ. ಸಾಮಾನ್ಯ ಸಭೆ

*ರೆಂಜಕ್ಕೆ ಹೊಸ ಕೊಳವೆಬಾವಿ ಯೋಜನೆ

*ಕುಮ್ಕಿ ಭೂಮಿಯನ್ನು ರೈತರಿಗೆ ನೀಡಲು ಸರಕಾರಕ್ಕೆ ಬರೆಯುವುದು

*ಮದ್ಯದಂಗಡಿ ಆರಂಭಿಸಲು ಪರವಾನಿಗೆ ನೀಡುವುದು. ಗ್ರಾಮ ಸಭೆಯಲ್ಲಿಟ್ಟು ಮುಂದಿನ ಕ್ರಮ

*ಬಿಪಿಎಲ್ ಪಡಿತರ ಚೀಟಿ ನೀಡಲು ಕಂದಾಯ ಇಲಾಖೆಗೆ ಬರೆಯುವುದು

*ಪವರ್ ಕಟ್ ಮಾಡುವ ಸಮಯದ ವೇಳಾಪಟ್ಟಿ ನೀಡುವಂತೆ ಮೆಸ್ಕಾಂಗೆ ಬರೆಯುವುದು

*ಕುಮ್ಕಿ, ಕಾನ, ಗೋಮಾಳದಲ್ಲಿ ವಾಸ್ತವ್ಯದ ೯೪ಸಿ ಅರ್ಜಿ ನೀಡಿದವರಿಗೆ ಮಂಜೂರು

*ಬೆಟ್ಟಂಪಾಡಿಗೆ ಕಿರಿಯ ಆರೋಗ್ಯ ಸಹಾಯಕಿ ನೇಮಕಕ್ಕೆ ಆರೋಗ್ಯ ಇಲಾಖೆಗೆ ಮನವಿ ನೀಡುವುದು

*ಇರ್ದೆಯ ಮಧುವನ ಕಟ್ಟಡ ಪಂಚಾಯತ್‌ಗೆ ಹಸ್ತಾಂತರಕ್ಕೆ ಜೇನು ಇಲಾಖೆಗೆ ಬರೆಯುವುದು

*ಬೆಂದ್ರ್ ತೀರ್ಥದ ಪ್ರವಾಸಧಾಮ ಕಟ್ಟಡದ ಉದ್ಘಾಟಣೆ ಮಾಡಲು ಪ್ರವಾಸೋದ್ಯಮ ಇಲಾಖೆಗೆ ಬರೆಯುವುದು

381d222c-57fc-46a4-aea4-42b5ccfd67ba 525e8329-342a-4af7-af09-278ab5a02175

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.