ಪುಣಚ : ಬಂಟರ ಸಂಘದ ಪ್ರಥಮ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

04-01-2016  PNC 1ಪುಣಚ: ಪುಣಚ ಗ್ರಾಮದ ಬಂಟರ ಸಂಘದ ಪ್ರಥಮ ವಾರ್ಷಿಕೋತ್ಸವವು ಪುಣಚ ಮಹಿಷಮರ್ದಿನಿ ದೇವಸ್ಥಾನದ ಶ್ರೀದೇವಿ ಸದನದಲ್ಲಿ ಜ.2 ರಂದು  ನಡೆಯಿತು.

ಸಂಘದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಬಳಿಕ ಮಧ್ಯಾಹ್ನ ಸಭಾ ಕಾರ್ಯಕ್ರಮ ನಡೆಯಿತು. ಬಂಟರ  ಸಂಘದ ಅಧ್ಯಕ್ಷ ದೇವರಗುಂಡಿ ರವೀಂದ್ರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾತೃ ಸಂಘದ ನಿರ್ದೇಶಕ ಕೊಲ್ಯ ಸೀತಾರಾಮ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಕಾರ್ಯದರ್ಶಿ ಮಹೇಶ್ ಶೆಟ್ಟಿ ವರದಿ ವಾಚಿಸಿದರು.

 ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ಕಾರ್ಯದರ್ಶಿ ರಂಗೋಲಿ ಚಂದ್ರಹಾಸ ಶೆಟ್ಟಿ, ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ಭಾಸ್ಕರ ಶೆಟ್ಟಿ, ನಿವೃತ್ತ ಸಹಾಯಕ ಉಪನಿಬಂಧಕ ಮಲ್ಲಿಪ್ಪಾಡಿ ಮಂಜುನಾಥ್ ನೈಕ, ಕೊಲ್ಯ ಭುಜಂಗ ಶೆಟ್ಟಿ, ಬೈಲುಗುತ್ತು ಮಾರಪ್ಪ ಶೆಟ್ಟಿ, ಸತೀಶ್ ಶೆಟ್ಟಿ, ಮುಂಡಾಳ ನವೀನ್ ಶೆಟ್ಟಿ,  ತಾಲೂಕು ಪಂಚಾಯತ್ ಸದಸ್ಯ ಮೂಡಂಬೈಲು ಹರಿಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಗೌರವ ಸಲಹೆಗಾರ ಮುರಳೀಧರ ರೈ ಸ್ವಾಗತಿಸಿ, ನಂದ ಪ್ರವೀಣ ಶೆಟ್ಟಿ ಧನ್ಯವಾದಿಸಿದರು.  ಪ್ರಸ್ತಾವನೆಯನ್ನು ವಿಶ್ವನಾಥ ಪರಿಯಾಲು ನೆರವೇರಿಸಿ, ಬೈಲುಗುತ್ತು ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.