Breaking News

ಭಕ್ತಕೋಡಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ-ಚಾಲಕ ಮಹಮ್ಮದ್ ಹನೀಫ್ ದಾರಿಮಿ ಅಪಾಯದಿಂದ ಪಾರು : ಆಪತ್ಭಾಂಧವರಾದ ಹಿಂದೂ ಸಂಘಟನೆ ಕಾರ್ಯಕರ್ತರು..!

Puttur_Advt_NewsUnder_1
Puttur_Advt_NewsUnder_1

bdkಚಿತ್ರ: ಯೂಸುಫ್ ರೆಂಜಲಾಡಿ

ರೆಂಜಲಾಡಿ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕಾರಿನ ಮುಂಭಾಗ ಸುಟ್ಟು ಹೋಗಿ ಸಂಭಾವ್ಯ ಅವಘಡವೊಂದು ತಪ್ಪಿರುವ ಘಟನೆ ಘಟನೆ ಜ.6ರಂದು ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಸಂಭವಿಸಿದೆ. ಪಾಪೆತ್ತಡ್ಕ ಮಸೀದಿಯ ಖತೀಬ್ ಮಹಮ್ಮದ್ ಹನೀಫ್ ದಾರಿಮಿ ಅವರು ಸವಣೂರು ಕಡೆ ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ800(ಕೆ.ಎ 19 ಎಂ.ಎಫ್ 1785) ಕಾರು ಭಕ್ತಕೋಡಿ ಜಂಕ್ಷನ್‌ಗೆ ತಲುಪಿದಾಗ ಕಾರಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಹನೀಫ್ ದಾರಿಮಿ ಅವರು ಕಾರನ್ನು ನಿಲ್ಲಿಸಿ ಇಳಿಯುವಲ್ಲಿ ಯಶಸ್ವಿಯಾಗಿದ್ದು ಅವರು ಕಾರಿನಿಂದ ಇಳಿದ ಬಳಿಕ ಕಾರು ಮುಂದಕ್ಕೆ ಚಲಿಸಿದ್ದು ರಸ್ತೆ ಬದಿಯ ಸಣ್ಣ ಹೊಂಡಕ್ಕೆ ವಾಲಿಕೊಂಡು ನಿಂತಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ. ದಾರಿಮಿ ಅವರು ಕೆಲವು ತಿಂಗಳ ಹಿಂದೆಯಷ್ಟೇ ಕಾರು ಖರೀದಿಸಿದ್ದು ಘಟನೆಯಿಂದ ಕಾರಿನ ಮುಂಭಾಗ ಸುಟ್ಟು ಹೋಗಿದೆ. ಸುಮಾರು 40 ಸಾವಿರ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

 ಆಪತ್ಬಾಂಧವರಾದ ಹಿಂದೂ ಸಂಘಟನೆ ಕಾರ್ಯಕರ್ತರು..!

ಕಾರಿನ ಮುಂಬಾಗದ ಬೋನಟ್‌ನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಹರಡುತ್ತಿದ್ದಂತೆ ಸ್ಪೋಟಗೊಳ್ಳುತ್ತದೆಂದು ಹೆದರಿದ ಹಲವರು ಸ್ಥಳದಿಂದ ಓಡಿ ಹೋಗಿದ್ದು ಈ ವೇಳೆ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಕೇಶವ ಪಾಟಾಳಿ ಹಾಗೂ ದಿನೇಶ್ ಗೌಡ ಕಡ್ಯ ಎಂಬವರು ಕಾರಿನ ಡೋರ್ ತೆಗೆದು ಬೆಂಕಿ ನಂದಿಸಲು ಹರ ಸಾಹಸ ಪಟ್ಟಿದ್ದಾರೆ. ಅದರಲ್ಲೂ ಕೇಶವ ಅವರು ಜೀವದ ಹಂಗು ತೊರೆದು ಕಾರಿನ ಬೋನೆಟ್‌ನ್ನು ತೆರೆದಿದ್ದು ಇದರಿಂದಾಗಿ ಸಂಭಾವ್ಯ ಅವಘಡವೊಂದು ತಪ್ಪಿದಂತಾಯಿತು. ಅವರ ಜೊತೆ ರೆಂಜಲಾಡಿಯ ಅಶ್ರಫ್ ಕೆ ಹಾಗೂ ಮಜೀದ್ ಅವರು ಬೆಂಕಿ ನಂದಿಸಲು ಸಹಕಾರ ನೀಡಿದರು. ಮುಸ್ಲಿಂ ಧರ್ಮ ಗುರುವೊಬ್ಬರ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರ ಕೆಲಸವು ಪ್ರಶಂಸೆಗೆ ಪಾತ್ರವಾಗುವುದರ ಜೊತೆಗೆ ಸೌಹಾರ್ದತೆಗೂ ಸಾಕ್ಷಿಯಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.