ಹಾರಾಡಿ ಬಳಿ ರೈಲಿನಿಂದ ಬಿದ್ದು ಹರಿಯಾಣದ ಯುವತಿಗೆ ಗಾಯ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನ ನಾಪತ್ತೆ

Puttur_Advt_NewsUnder_1
Puttur_Advt_NewsUnder_1
ಯುವತಿ ಬಿದ್ದಿರುವುದಾಗಿ ಹೇಳಲಾದ ಸ್ಥಳ
ಯುವತಿ ರೈಲಿನಿಂದ ಬಿದ್ದಿರುವುದಾಗಿ ಹೇಳಲಾದ ಸ್ಥಳ

monisha

ಪುತ್ತೂರು : ಹಾರಾಡಿ ರೈಲ್ವೇ ಬ್ರಿಡ್ಜ್ ಬಳಿ ಹರಿಯಾಣದ ಯುವತಿಯೋರ್ವರು ನಿಗೂಢ ರೀತಿಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡ ಘಟನೆ ಜ.೬ ರಂದು ತಡರಾತ್ರಿ ನಡೆದಿದ್ದು, ಆಕೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮುನ್ನವೇ ನಾಪತ್ತೆಯಾದ ಘಟನೆ ನಡೆದಿದೆ. ಆಕೆ ರೈಲಿನಿಂದ ಆಕಸ್ಮಿಕವಾಗಿ ಬಿದ್ದಿರುವರೇ? ರೈಲಿನಿಂದ ಹಾರಿರಬಹುದೇ ಅಥವಾ ಯಾರಾದರೂ ತಳ್ಳಿರಬಹುದೇ ಎನ್ನುವುದು ಖಚಿತವಾಗಿಲ್ಲ.

ಹರಿಯಾಣ ಸೂಣಿಪಥ್ ಕಾಲಿಪುರ ನಿವಾಸಿ ರಾಜೇಂದ್ರರವರ ಪುತ್ರಿ ಮೊನೀಷ (18 ವ) ಗಾಯಗೊಂಡವರು. ರಾತ್ರಿ ಬೆಂಗಳೂರಿಗೆ ಹೋಗುವ ರೈಲಿನಿಂದ ಈಕೆ ಬಿದ್ದಿದ್ದರು. ರಾತ್ರಿ ಸುಮಾರು ೧೧.೪೦ಕ್ಕೆ ಹಾರಾಡಿ ರೈಲ್ವೇ ಹಳಿಯ ಬಳಿ ಅಸ್ವಸ್ಥಗೊಂಡು ಬಿದ್ದಿದ್ದ ಆಕೆಯನ್ನು ನೋಡಿದ ಸಾರ್ವಜನಿಕರು ರಿಕ್ಷಾದಲ್ಲಿ ತಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರ ಗಾಯಗೊಂಡಿದ್ದ ಆಕೆಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲೆಂದು ೧೦೮ ಆಂಬುಲೆನ್ಸ್ ಬಂದ ಸಮಯ ಆಕೆಗೆ ಪ್ರಜ್ಞೆ ಬಂದಿತ್ತು. ಈ ವೇಳೆ ಆಕೆ ನನ್ನ ಮೇಲೆ ಪಯ್ಯನೂರಿನಲ್ಲಿ ಗ್ಯಾಂಗ್ ರ‍್ಯಾಪ್ ಆಗಿದೆ. ನಾನು ರೈಲಿನಿಂದ ಬಿದ್ದಿದ್ದೇನೆ ಎಂದಷ್ಟೆ ಹೇಳಿಕೆ ನೀಡಿ ತನ್ನ ವಿಳಾಸ ತಿಳಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಅಲ್ಲಿಂದ ಆಕೆಯನ್ನು ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆ ಚಿಕಿತ್ಸೆಗೆ ಒಳಗಾಗಲು ತಿರಸ್ಕರಿಸಿದ್ದು ಅಲ್ಲಿಂದ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಘಟನೆ ವಿವರ: ಜ.5ರಂದು ಪಯ್ಯನ್ನೂರು ರೈಲು ನಿಲ್ದಾಣದಲ್ಲಿ ಯುವತಿಯೋರ್ವರು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಯುವತಿಯನ್ನು ಕಂಡ ಪೊಲೀಸರು ಅಲ್ಲೇ ಸಮೀಪದ ಅಭಯ ಕೇಂದ್ರಕ್ಕೆ ತಲುಪಿಸಿದ್ದರು. ಬಳಿಕ ಆಕೆಯನ್ನು ಪೆರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಪರಿಕ್ಷೆ ನಡೆಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಆಸ್ಪತ್ರೆಯವರು ತಿಳಿಸಿದ್ದರು. ಬಳಿಕ ಆಸ್ಪತ್ರೆ ಅಧಿಕಾರಿಗಳು ನೀಡಿದ ದೂರಿನಂತೆ ಪಯ್ಯನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಆ ಯುವತಿ ಆಸ್ಪತ್ರೆಯಿಂದ ನಾಪತ್ತೆಯಾಗಿದ್ದರು. ಜ.೬ರಂದು ತಡ ರಾತ್ರಿ ಪುತ್ತೂರು ಹಾರಾಡಿ ರೈಲ್ವೇ ಹಳಿ ಸಮೀಪ ಆಕೆ ಅಸ್ವಸ್ಥಗೊಂಡು ಬಿದ್ದಿದ್ದರು. ಸಾರ್ವಜನಿಕರು ಆಕೆಯನ್ನು ಪುತ್ತೂರು ಆಸ್ಪತ್ರೆಗೆ ಸೇರಿಸಿದ್ದರು.  ನನ್ನ ಮೇಲೆ ಪೊಲೀಸರು ಅತ್ಯಾಚಾರ ನಡೆಸಿದ್ದಾರೆ ಎಂದು ಪುತ್ತೂರು ಆಸ್ಪತ್ರೆಯಲ್ಲಿ ಆಕೆ ಹೇಳಿಕೆ ನೀಡಿದ್ದರು. ಮತ್ತೊಮ್ಮೆ ನನ್ನ ಮೇಲೆ ಗ್ಯಾಂಗ್ ರೇಪ್ ನಡೆದಿದೆ ಎಂದು ನರಳಿಕೊಂಡು ಹೇಳಿ ಕೊಳ್ಳುತ್ತಿದ್ದಳು ಎಂದು ದೃಶ್ಯ ಮಾಧ್ಯಮದಲ್ಲಿ ವರದಿಯಾಗಿತ್ತು.  ಆಕೆಯ ಹೇಳಿಕೆ ಎಷ್ಟು ಸತ್ಯ ಎಂಬುದು ತನಿಖೆ ವೇಳೆಯೇ ತಿಳಿಯಬೇಕಾಗಿದೆ. ಆದರೆ ಆಕೆ ಆಸ್ಪತ್ರೆಯಿಂದಲೇ ನಾಪತ್ತೆಯಾಗಿದ್ದರಿಂದ ಪೊಲೀಸ್ ತನಿಖೆಗೆ ತೊಂದರೆ ಆಗಿದೆ. ಘಟನೆಗೆ ಸಂಬಂಧಿಸಿ ಪ್ರಸ್ತುತ ರೈಲ್ವೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ಎಂದು ತಿಳಿದು ಬಂದಿದೆ. ಈಕೆಯ ಕುರಿತು ಯಾರಿಗಾದರೂ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ತಿಳಿಸಿದ್ದಾರೆ.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.