Breaking News

ಸವಣೂರಿನಲ್ಲಿ ಹಿಂದೂ ರುದ್ರ ಭೂಮಿಯ ಲೋಕಾರ್ಪಣೆ

Puttur_Advt_NewsUnder_1
Puttur_Advt_NewsUnder_1

20160106212004

ಸಮಾಜದ ಅಭಿವೃದ್ಧಿಯೇ ನಮ್ಮ ಕಾರ‍್ಯ –ಅಂಗಾರ

ಪುತ್ತೂರು: ಸಮಾಜದ ಅಭಿವೃದ್ಧಿಗಾಗಿ ಜನಪ್ರತಿನಿಧಿಗಳು ಕೆಲಸವನ್ನು ಮಾಡಬೇಕು, ಸರಕಾರವನ್ನು ಕಾಯದೇ ಊರಿನವರು ಜಾಗೃತರಾಗಿ ಉತ್ತಮ ಯೋಜನೆಗಳನ್ನು ರೂಪಿಸಬೇಕೆಂದು ಶಾಸಕ ಎಸ್. ಅಂಗಾರ ಹೇಳೀದರು. ಅವರು ಜ.7 ರಂದು ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಸವಣೂರು ಇದರ ವತಿಯಿಂದ ಕನ್ನಡಕುಮೇರು ಎಂಬಲ್ಲಿ ಸುಮಾರು 15 ಲಕ್ಷ ರೂ ವೆಚ್ಚದಲ್ಲಿ  ನಿರ್ಮಿಸಲಾದ ಹಿಂದೂ ರುದ್ರಭೂಮಿ ಲೋಕಾರ್ಪಣೆ ಮತ್ತು ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ, ಮಾತನಾಡಿ ಈ ಹಿಂದೂ ರುದ್ರಭೂಮಿ ಕಟ್ಟಡವನ್ನು  ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ತಾ.ಪಂ ಉಪಾಧ್ಯಕ್ಷ ದಿನೇಶ್ ಮೆದು ರವರು ಇದಕ್ಕಾಗಿ ತುಂಬಾ ಶ್ರಮ ವಹಿಸಿದ್ದಾರೆ ಎಂದು ಪ್ರಶಂಶಿಸಿದರು.

ಮುಖ್ಯ ಅತಿಥಿ ಜಿ.ಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡರವರು ಮಾತನಾಡಿ ಹಿಂದೂ ರುದ್ರಭೂಮಿಯಲ್ಲಿ ಮುಂದಿನ ಹಂತವಾಗಿ ಅಡಿಕೆ ತೋಟವನ್ನು ನಿಮಾಣ ಮಾಡುವಾಗ  ಪ್ರತಿಯೊಬ್ಬರು ಒಂದು ಅಡಿಕೆ ಗಿಡವನ್ನು ದಾನ ಮಾಡುವ ಮೂಲಕ ಇದರ ಆಬಿವೃದ್ಧಿಗೆ ಕೈಜೋಡಿಸಬೇಕೆಂದು ಹೇಳಿದರು.

ಪುತ್ತೂರು ತಾ.ಪಂ ಅಧ್ಯಕ್ಷೆ ಪುಲಸ್ಯ ರೈ ಮಾತನಾಡಿ ಸವಣೂರಿನಲ್ಲಿ ನಿರ್ಮಾಣವಾಗಿರುವ ಹಿಂದೂ ರುದ್ರಭೂಮಿಯು ಉತ್ತಮ ವ್ಯವಸ್ಥೆಯ ಮೂಲಕ ಮಾದರಿಯಾಗಿದೆ ಎಂದರು.

ಜಿ.ಪಂ ಸದಸ್ಯೆ ಪುಷ್ಪಾವತಿ ಗೌಡ ಕಳುವಾಜೆರವರು ಮಾತನಾಡಿ  ಜಿ.ಪಂ, ಸದಸ್ಯೆಯಾಗಿ  ನನಗೆ ಬಂದ ಅನುದಾನವನ್ನು ಪ್ರತಿ ಗ್ರಾಮಕ್ಕೆ ಸಮಾನವಾಗಿ ಹಂಚಿದ್ದೇನೆ ಎಂದರು.

ಪುತ್ತೂರು ತಾ.ಪಂ ಉಪಾಧ್ಯಕ್ಷ ದಿನೇಶ್ ಮೆದುರವರು ಮಾತನಾಡಿ ಹಿಂದೂ ರುದ್ರಭೂಮಿ ಜಾಗದಲ್ಲಿ ಕೊಳವೆ ಬಾವಿಯನ್ನು ತೋಡಲಾಗುವುದು, ಜೊತೆಗೆ ಇಲ್ಲಿ ಅಡಿಕೆ ಮತ್ತು ತೆಂಗು  ಕೃಷಿ ಮಾಡಲಾಗುವುದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1.50 ಲಕ್ಷ ರೂ. ಸಹಾಯಧನ ದೊರೆತಿದೆ ಎಂದರು. ಹಿಂದೂ ರುದ್ರಭೂಮಿ ಆಗಲು ಸವಣೂರು ಯುವಕ ಮಂಡಲದ ಪ್ರಯತ್ನ ಇದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಕಿಶೋರಿ ರೈರವರು ಮಾತನಾಡಿ ಹಿಂದೂ ರುದ್ರಭೂಮಿಯ ಅವಶ್ಯಕತೆಯನ್ನು ಮನಗಂಡ ಇದಕ್ಕಾಗಿ ಶ್ರಮಿಸಿದ ಎಲ್ಲರೂ ಧನ್ಯರು ಎಂದರು

ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ಬಿ.ಕೆರವರು ಮಾತನಾಡಿ ಹಿಂದೂ ರುದ್ರಭೂಮಿ ಸುಂದರವಾಗಿ ಸವಣೂರಿನಲ್ಲಿ ನಿರ್ಮಾಣವಾಗಿರುವುದು ಸಂತೋಷದ ವಿಚಾರ ಎಂದರು.

ಸವಣೂರು ಗ್ರಾ.ಪಂ, ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿರವರು ಸ್ವಾಗತಿಸಿ, ಮಾತನಾಡಿ ಇಲ್ಲಿ ಹಿಂದೂ ರುದ್ರಭೂಮಿಯಾಗಲು ತಾ.ಪಂ, ಉಪಾಧ್ಯಕ್ಷ ದಿನೇಶ್ ಮೆದುರವರು ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದಾರೆ.ಗುತ್ತಿಗೆದಾರ ಪ್ರಜ್ವಲ್ ಕೆ.ಆರ್ ಕೋಡಿಬೈಲುರವರು ಅಚ್ಚುಕಟ್ಟಾಗಿ ಕಾಮಗಾರಿಯನ್ನು ನಿರ್ಮಿಸಿ ಕೊಟ್ಟಿದ್ದಾರೆ ಎಂದು ಪ್ರಶಂಶಿಸಿ, ಮುಂದಿನ ಹಂತವಾಗಿ ಅಡಿಕೆ ಮತ್ತು ತೆಂಗು ತೋಟವನ್ನು ಮಾಡುವ ಮೂಲಕ ಹಿಂದೂ ರುದ್ರಭೂಮಿಯ ನಿರ್ವಹಣೆ ಮಾಡುವ ಯೋಜನೆ ಇದ್ದು, ಈ ಬಗ್ಗೆ ಎಲ್ಲರೂ ಸಹಕಾರವನ್ನು ನೀಡುವಂತೆ ವಿನಂತಿಸಿದರು.

ಪುತ್ತೂರು ಎಪಿಎಂಸಿ ಸದಸ್ಯ ಸೋಮನಾಥ, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷ ಧರ್ಮಪ್ರಕಾಶ್ ರೈ ಪುಣ್ಚಪ್ಪಾಡಿ, ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಬಿಜೆಪಿ ಸವಣೂರು ಗ್ರಾ.ಪಂ,ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಸವಣೂರು ಸಿ.ಎ.ಬ್ಯಾಂಕ್ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡ, ಸವಣೂರು ಶ್ರೀ.ಕ್ಷೇ.ಧರ್ಮಸ್ಥಳ ಗ್ರಾ.ಯೋಜನೆಯ ಪ್ರಗತಿ ಬಂಧು ಒಕ್ಕೋಟದ ಅಧ್ಯಕ್ಷ ರಾಘವ ಗೌಡ ಸವಣೂರು, ಸವಣೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಸುಭಾಷ್ಚಂದ್ರ ಮಲ್ಲಣ್ಣವರ್, ಸದಸ್ಯೆ ಗಾಯತ್ರಿ ಬರೆಮೇಲುರವರುಗಳು ಅತಿಥಿಗಳನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ವಾಸ್ತು ತಜ್ಞ ವೀರಪ್ಪ ಗೌಡ ಕರಂಬಾರು ಮತ್ತು ಗುತ್ತಿಗೆದಾರ ಪ್ರಜ್ವಲ್ ಕೆ.ಆರ್‌ರವರನ್ನು ಗೌರವಿಸಲಾಯಿತು..

ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯರವರು ಕಾರ‍್ಯಕ್ರಮ ನಿರೂಪಿಸಿ, ವಂದಿಸಿದರು, ಈ ಸಂದರ್ಭದಲ್ಲಿ ಸವಣೂರು-ಬೆಳ್ಲಾರೆ ರಸ್ತೆಯ 1.5 ಕಿ.ಮೀ ರಸ್ತೆಯ 1 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಕಾಮಗಾರಿ ಉದ್ಘಾಟನೆ, ಮಂಜುನಾಥನಗರದಲ್ಲಿ ರಸ್ತೆ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ ಸಹಿತ ಅನೇಕ ಕಾಮಗಾರಿಗಳ ಉದ್ಘಾಟನೆ ಈ ಸಂದರ್ಭದಲ್ಲಿ ಜರಗಿತು.

ಚಿತ್ರ / ವರದಿ : ಉಮಾಪ್ರಸಾದ್ ರೈ ನಡುಬೈಲು

f9c5cc10-6424-40c8-aa05-796c7a4c16f6

20160106212559

20160106211509

20160106204818

20160106205335

20160106205342

20160106205550

20160106212345

20160106212405

20160106212513

20160106212513 (1)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.