“ಬಲಾತ್ಕಾರದ ಬಂದ್‌ಗೆ ಬೆಂಬಲ ಇಲ್ಲ” ನಿರ್ಣಯ ಅಂಗೀಕಾರ

Puttur_Advt_NewsUnder_1
Puttur_Advt_NewsUnder_1

uppinangadiಉಪ್ಪಿನಂಗಡಿ: ಬಲಾತ್ಕಾರದ ಬಂದ್ ನಡೆಸುವುದರಿಂದಾಗಿ ಸಾರ್ವಜನಿಕರು, ಅಮಾಯಕರು ತೊಂದರೆ ಅನುಭವಿಸುವಂತಾಗುತ್ತದೆ, ಆರ್ಥಿಕ ಅಭಿವೃದ್ಧಿ ಕುಂಠಿತವಾಗುತ್ತಿದೆ ಈ ದಿಸೆಯಲ್ಲಿ ಬಂದ್ ಮಾಡಲು ಅವಕಾಶ ಕೊಡಬಾರದು, ಇದಕ್ಕೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ನಿರ್ಣಯ ಅಂಗೀಕರಿಸಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.  “ಬಲಾತ್ಕಾರದ ಬಂದ್ ಮತ್ತು ಕೋಮು ಗಲಭೆ ಅಥವಾ ಇತರ ಗಲಭೆ ವಿರುದ್ಧದ ಸುದ್ದಿ ಆಂದೋಲನದ” ವಿಚಾರ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯರುಗಳು ಪೂರಕವಾಗಿ ಮಾತನಾಡಿ ಬಲತ್ಕಾರದ ಬಂದ್ ಮಾಡುವುದರಿಂದ ಸಾರ್ವಜನಿಕರ ದಿನನಿತ್ಯದ ಬದುಕಿಗೆ ತೊಡಕು ಉಂಟಾಗುತ್ತದೆ ಮತ್ತು ಅಮಾಯಕರು ತೊಂದರೆಗೆ ಸಿಲುಕುವಂತಾಗುತ್ತದೆ ಅಲ್ಲದೆ ವ್ಯಾಪಾರ, ವ್ಯವಹಾರ ಸ್ಥಗಿತಗೊಂಡು ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ ಮತ್ತು ಅಭಿವೃದ್ಧಿಗೂ ಹಿನ್ನಡೆಯಾಗುತ್ತದೆ ಆದ ಕಾರಣ ನಾವುಗಳು ಇದಕ್ಕೆ ಬೆಂಬಲ ಕೊಡಬಾರದು ಎಂದರು. ಅದರಂತೆ ಸದಸ್ಯರುಗಳು ನಿರ್ಣಯ ಅಂಗೀಕಾರ ಮಾಡುವಂತೆ ಸೂಚಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಬ್ಯಾಂಕುಗಳಿಂದ ಬಡವರಿಗೆ ಕಿರುಕುಳ:  ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ನೀಡುವ ಸಲುವಾಗಿ ಬಡವರಿಗೆ ೦% ಬಡ್ಡಿಯಲ್ಲಿ ಮುದ್ರಾ ಸಾಲ ನೀಡಲು ಯೋಜನೆ ಹಾಕಿಕೊಂಡಿದೆ. ಆದರೆ ಇದನ್ನು ಪಡೆಯಲು ಬ್ಯಾಂಕ್‌ಗಳಿಗೆ ಹೋದರೆ ಅಲ್ಲಿ ಅಂತಹವರಿಗೆ ಸತಾಯಿಸುತ್ತಿದ್ದಾರೆ, ಮತ್ತು ೧೨% ಬಡ್ಡಿ ಆಗುತ್ತದೆ, ಕೊಟೇಷನ್ ಕೊಡಬೇಕು ಮೊದಲಾದ ಶರತ್ತುಗಳನ್ನು ಹೇಳಿಕೊಂಡು ಅವರನ್ನು ನಿಂದಿಸಿ ಕಳುಹಿಸುತ್ತಿದ್ದಾರೆ ಎಂದು ಸದಸ್ಯರು ಸಭೆಯ ಗಮನ ಸೆಳೆದರು. ಇಲ್ಲಿನ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಬಡವರು, ಹಿಂದುಳಿದವರು ಹೋದರಂತೂ ಒಳಗೂ ಹೋಗುವುದಕ್ಕೂ ಸಾಧ್ಯ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿದೆ, ಶ್ರೀಮಂತರು, ಉದ್ಯಮಿಗಳಿಗೆ ಮಾತ್ರ ಮಣೆ ಹಾಕುವ ಇಲ್ಲಿನ ಮೆನೇಜರ್ ಮತ್ತು ಸಿಬ್ಬಂದಿ ವರ್ಗ ಬೇರೆ ಬ್ಯಾಂಕ್‌ಗಳಿಗೆ ಎನ್.ಓ.ಸಿ. ಕೇಳಲು ಹೋದರೂ ನಿಂದಿಸಿ, ಸತಾಯಿಸುತ್ತಿದ್ದಾರೆ ಎಂದು ಸದಸ್ಯರುಗಳು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಟ್ಟಡ ಪರವಾನಿಗೆ, ಅಂಗಡಿ ಲೈಸನ್ಸ್‌ಗಳಿಗೆ ಬಂದ ಅರ್ಜಿಗಳನ್ನು ಓದಿ ಹೇಳಲಾಗಿ ಅಗತ್ಯ ಕ್ರಮಕೈಗೊಳ್ಳಲಾಯಿತು.

ಸಭೆಯಲ್ಲಿ ಸದಸ್ಯರುಗಳಾದ ಗೋಪಾಲ ಹೆಗ್ಡೆ, ಚಂದ್ರಶೇಖರ್, ಯು.ಕೆ. ಇಬ್ರಾಹಿಂ, ಸುರೇಶ್ ಅತ್ರಮಜಲು, ಯು.ಟಿ. ತೌಶೀಫ್, ರಮೇಶ್ ಭಂಡಾರಿ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರುಗಳಾದ ಉಮೇಶ್ ಗೌಡ, ಯೋಗಿನಿ, ಚಂದ್ರಾವತಿ, ಚಂದ್ರಾವತಿ ಹೆಗ್ಡೆ, ಶ್ರೀಮತಿ ಸುಶೀಲ, ಭಾರತಿ, ಕವಿತಾ, ಝರೀನ, ಜಮೀಲ ಮೊದಲಾದವರು ಉಪಸ್ಥಿತರಿದ್ದರು.  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ವಾಗತಿಸಿ, ವಂದಿಸಿದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.