ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕಮ್ಮಾಡಿಯವರ ನೇತೃತ್ವದ ಕಮ್ಮಾಡಿ ಹಾಸ್ಟಿಟಲ್ ಗೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1

188ea2f5-7c47-41da-9564-5256f31abd1f

ಕಮ್ಮಾಡಿ ಆಸ್ಪತ್ರೆ ಉತ್ತಮ ಆರೋಗ್ಯವನ್ನು ನೀಡುವ ಕೇಂದ್ರವಾಗಲಿ: ರಮಾನಾಥ ರೈ

*ಬಡವರನ್ನು ಬೆಳಗಿಸುವ ಬೆಳಕಾಗಲಿ:ನಳಿನ್

*ಜಗತ್ತಿಗೆ ಬೆಳಕು ನೀಡುವ ಆರೋಗ್ಯ ಕೇಂದ್ರವಾಗಲಿ: ಶಕುಂತಳಾ ಶೆಟ್ಟಿ

*ಕಮ್ಮಾಡಿ ಹಾಜಿಯವರ ಸೇವೆ ಶ್ಲಾಘನೀಯ: ಸೀತಾರಾಮ ರೈ

*ಭೇದ ಬಾವವಿಲ್ಲದೆ ವಿಶ್ವಾಸದ ಕೇಂದ್ರವಾಗಲಿ: ಡಾ.ಗೌರಿ ಪೈ

*ಬಹುಜನರ ಹೃದಯದಲ್ಲಿ ಪ್ರೀತಿವಿಶ್ವಾಸ ಕಾಣುವಂತಾಗಲಿ:ರೆ|ವಿಜಯ ಹಾರ್ವಿನ್

*ಪ್ರಗತಿಪಥದತ್ತ ಸಾಗಲಿ: ಡಾ.ಶ್ಯಾಂ

*ಹೈಟೆಕ್ ಆಸ್ಪತ್ರೆಯಾಗಿ ಮೂಡಿ ಬರಲಿ: ಸುಧಾಕರ ಶೆಟ್ಟಿ

*ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪೂರಕ: ಎಂ.ಎಸ್.ಮುಹಮ್ಮದ್

*ಸುಸಜ್ಜಿತ ಆಸ್ಪತ್ರೆಯಾಗಿ ಮೂಡಿ ಬರಲಿದೆ: ಹುಸೈನ್ ದಾರಿಮಿ

ಪುತ್ತೂರು: ನಾವೆಲ್ಲರೂ ಒಂದೇ ರೀತಿಯ ಸಾಮರಸ್ಯದಲ್ಲಿ ನಡೆದಾಗ ಒಳ್ಳೆಯ ವಾತಾವರಣ ಮೂಡಲು ಸಾಧ್ಯವಿದೆ. ಸರ್ವರ ಸಹಕಾರದಿಂದ ಕಮ್ಮಾಡಿ ಇಬ್ರಾಹಿಂ ಹಾಜಿಯವರ ನೇತೃತ್ವದಲ್ಲಿ ಮೂಡಿ ಬರುವ ಕಮ್ಮಾಡಿ ಆಸ್ಪತ್ರೆಯು ಎಲ್ಲರ ಆರೋಗ್ಯ ಕೇಂದ್ರವಾಗಿ ಮೂಡಿಬರಲಿ ಎಂದು ಕರ್ನಾಟಕ ಸರ್ಕಾರದ ಅರಣ್ಯ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಜ.7ರಂದು ಪುತ್ತೂರು ಸಂಪ್ಯ ಕಮ್ಮಾಡಿಯಲ್ಲಿ ಸ್ಥಾಪನೆಗೊಳ್ಳುವ ಕಮ್ಮಾಡಿ ಆಸ್ಪತ್ರೆಯ ಶಿಲಾನ್ಯಾಸ ಕಾರ‍್ಯಕ್ರಮದ ನಾಮಫಲಕದ ಅನಾವರಣಗೊಳಿಸಿ ಮಾತನಾಡಿದರು. ಇಲ್ಲಿ ನಿರ್ಮಾಣಗೊಳ್ಳುವ ಕಮ್ಮಾಡಿ ಆಸ್ಪತ್ರೆಯು ಶರವೇಗದಲ್ಲಿ ಮುಂದುವರಿದು ಎಲ್ಲಾವರ್ಗದ ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಹಾರೈಸಿದ ಅವರು, ಈ ಆಸ್ಪತ್ರೆಯ ನಿರ್ಮಾಣದ ಮೂಲಕ ಪ್ರೀತಿ, ಪ್ರೇಮ, ಸಂಬಂಧ ಶಾಶ್ವತವಾಗಿ ಇರಲಿ ಎಂದು ಅವರು ಹೇಳಿದರು. ಪುತ್ತೂರು ಮುದರ್ರಿಸ್ ಅಲ್ ಹಾಜಿ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್‌ರವರು ಕಮ್ಮಾಡಿ ಆಸ್ಪತ್ರೆಯ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳುರವರು ದುವಾಃ ನೆರವೇರಿಸಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಸದೀಯ ಕಾರ‍್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿಯಯವರು ಮಾತನಾಡಿ, ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಮ್ಮಾಡಿ ಆಸ್ಪತ್ರೆಯ ಕಾಮಗಾರಿ ಶೀಘ್ರದಲ್ಲಿ ಸಾಗಿ ಪುತ್ತೂರು, ಜಿಲ್ಲೆಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಬೆಳಕನ್ನು ನೀಡುವ ಆರೋಗ್ಯ ಕೇಂದ್ರವಾಗಲಿ. ಈ ಆಸ್ಪತ್ರೆಯಲ್ಲಿ ಜಾತೀಯತೆ ಇಲ್ಲದೆ, ಎಲ್ಲಾ ಬಡವರಿಗೆ ಆರೋಗ್ಯ ಸಿಗುವಂತಾಗಲಿ ಎಂದ ಅವರು ಇಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದೆ ಬಂದಿರುವ ಕಮ್ಮಾಡಿ ಇಬ್ರಾಹಿಂ ಹಾಜಿಯವರ ಸೇವೆಯು ಶ್ಲಾಘನೀಯವಾಗಿದೆ ಎಂದರು.

ಮುಖ್ಯಅತಿಥಿಗಳಾಗಿ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್‌ರವರು ಮಾತನಾಡಿ, ಕತ್ತಲೆಯನ್ನು ತೊಡೆದುಹಾಕಿ ಬೆಳಕನ್ನು ನೀಡುವ ಕಮ್ಮಾಡಿ ಆಸ್ಪತ್ರೆಯ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ರೀತಿಯಲ್ಲಿ  ಸೇವೆ ಸಿಗುವಂತಾಗಬೇಕು ಎಂದರು. ಶಿಕ್ಷಣ, ಆರೋಗ್ಯ, ಅನ್ನದಾನ, ಇವು ವ್ಯಾಪಾರೀಕರಣವಾಗದೆ ಬಡವರನ್ನು ಬೆಳಗಿಸುವ ಬೆಳಕಾಗಲಿ ಎಂದು ಅವರು ಹೇಳಿದರು.

ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಮಾತನಾಡಿ, ಆರೋಗ್ಯವೇ ಭಾಗ್ಯವೆಂಬಂತೆ ಪ್ರತಿಯೊಬ್ಬರಿಗೂ ಆರೋಗ್ಯ ನೀಡುವ ಸಲುವಾಗಿ ಪುಣ್ಯದ ಕೆಲಸಕ್ಕೆ ಹೊರಟಿರುವ ಕಮ್ಮಾಡಿ ಹಾಜಿಯವರ ನೇತೃತ್ವದಲ್ಲಿ ಪ್ರಾರಂಭಗೊಳ್ಳುವ ಕಮ್ಮಾಡಿ ಆಸ್ಪತ್ರೆಯ ಮೂಲಕ ಎಲ್ಲರೂ ಆರೋಗ್ಯವಂತರಾಗಿ ಮೂಡಿ ಬರಲಿ ಎಂದರು. ಇಂದು ಹಲವಾರು ಮಂದಿ ಆರ್ಥಿಕ ಸುಸ್ಥಿತಿಯಲ್ಲಿದ್ದರೂ, ಇಂತಹ ಕಾರ‍್ಯದಲ್ಲಿ ಯಾರೂ ಮುಂದೆ ಬರದ ಈ ಸಂದರ್ಭದಲ್ಲಿ ಕಮ್ಮಾಡಿ ಹಾಜಿಯವರು ಇಂತಹ ಜನಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಈ ಆಸ್ಪತ್ರೆಯ ಮೂಲಕ ಕಡಿಮೆ ಖರ್ಚಿನಲ್ಲಿ ಎಲ್ಲರಿಗೂ ಆರೋಗ್ಯ ದೊರಕಲಿ ಎಂದರು.

ಸಂಪ್ಯ ಆನಂದಾಶ್ರಮದ ಅಧ್ಯಕ್ಷರಾದ ಡಾ.ಪಿ.ಗೌರಿ ಪೈ ರವರು ಮಾತನಾಡಿ, ವೈದ್ಯರು ಮತ್ತು ರೋಗಿಗಳ ಸಂಬಂಧವೆಂದರೆ ತಾಯಿ ಮಕ್ಕಳ ಸಂಬಂಧದಂತೆ. ಹಿಂದೆ ರೋಗಿಗಳನ್ನು ಮುಟ್ಟಿ ಪರೀಕ್ಷಿಸಿ ಅವರಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಪಡಿಸಲಾಗುತ್ತಿತ್ತು. ಆದರೆ ಇಂದು ಕೆಲವು ಕಡೆಗಳಲ್ಲಿ ರಿಪೋರ್ಟ್ ನೋಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ಕಮ್ಮಾಡಿ ಆಸ್ಪತ್ರೆಯಲ್ಲಿ ಬೇದ ಭಾವವಿಲ್ಲದೆ ಪ್ರೀತಿ ವಿಶ್ವಾಸದ ಕೇಂದ್ರವಾಗಿ, ಉತ್ತಮ ತರಹದ ಚಿಕಿತ್ಸೆ ನೀಡುವಂತಾಗಲಿ. ಕಮ್ಮಾಡಿ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವಂತಹ ವ್ಯವಸ್ಥೆ ಸಿಗಲಿದೆ ಎನ್ನುವುದು ನನ್ನ ನಂಬಿಕೆ ಮತ್ತು ಭಾವನೆಯಾಗಿದೆ ಎಂದರು. ಸಂಪ್ಯ ಆನಂದಾಶ್ರಮದಲ್ಲಿ ಎಲ್ಲಾ ವರ್ಗದ ಜನರಿಗೆ ಫಿಸಿಯೋಥೆರಪಿ ಚಿಕಿತ್ಸೆಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು.

ಸುದಾನ ದೇವಾಲಯದ ಧರ್ಮಗುರು ರೆ|ವಿಜಯ ಹಾರ್ವಿನ್ ಮಾತನಾಡಿ, ಕಮ್ಮಾಡಿ ಇಬ್ರಾಹಿಂ ಹಾಜಿಯವರು ದೇವರನ್ನು ಸಂಪ್ರೀತಿಗೊಳಿಸುವ ದೃಷ್ಟಿಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದಲ್ಲಿ  ಮೌಲ್ಯಭರಿತ ಶಿಕ್ಷಣ ಕೇಂದ್ರಗಳು, ಆರೋಗ್ಯ ನೀಡುವ ಆರೋಗ್ಯ ಕೇಂದ್ರಗಳು ಮತ್ತು ವಿವಿದ ರೀತಿಯಲ್ಲಿ ಸೇವಾ ಮನೋಭಾವವನ್ನು ಹೊಂದಿರುವ ಕಮ್ಮಾಡಿ ಹಾಜಿಯವರು ಶಿಸ್ತು ಬದ್ಧ ಜೀವನಕ್ಕೆ ಹೆಸರುವಾಸಿಯಾಗಿದ್ದರೂ, ಅವರ ಮುಖ ಗಂಭೀರತೆಯಿಂದ ಕೂಡಿದ್ದರೂ ಹೃದಯ ಮಾತ್ರ ಮೃದು ಸ್ವಭಾವದಿಂದ ಕೂಡಿದ್ದಾಗಿದೆ. ಅವರ ಆಸ್ಪತ್ರೆಯ ಕನಸು ಶಿಘ್ರ ನೆರವೇರಲಿ ಮತ್ತು ಸಾರ್ವಜನಿಕ ಸೇವೆಗೆ ಲಭಿಸುವಂತಾಗಲಿ, ಆ ಮೂಲಕ ಬಡಜನತೆಯ ಹೃದಯದಲ್ಲಿ ಪ್ರೀತಿ ವಿಶ್ವಾಸ ಕಾಣುವಂತಾಗಲಿ ಎಂದರು.

ಆದರ್ಶ ಆಸ್ಪತ್ರೆಯ ವೈದ್ಯ ಡಾ|ಬಿ.ಶ್ಯಾಮರವರು ಮಾತನಾಡಿ, ಕಮ್ಮಾಡಿ ಇಬ್ರಾಹಿಂ ಹಾಜಿಯವರ ನೇತೃತ್ವದಲ್ಲಿ ಪ್ರಾರಂಭವಾಗಲಿರುವ ಕಮ್ಮಾಡಿ ಆಸ್ಪತ್ರೆಯು ಪ್ರಗತಿಪಥದತ್ತ ಸಾಗಲಿ ಎಂದು ಹಾರೈಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುಧಾಕರ ಶೆಟ್ಟಿಯವರು ಮಾತನಾಡಿ ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿಗೆ ಕಮ್ಮಾಡಿ ಆಸ್ಪತ್ರೆಯು ಪುತ್ತೂರಿನ ಕಿರೀಟಕ್ಕೆ ಮತ್ತೊಂದು ಗರಿ ತೊಟ್ಟಂತಾಗಿದೆ. ಇದೊಂದು ಹೈಟೆಕ್ ಆಸ್ಪತ್ರೆಯಾಗಿ ಮೂಡಿಬರಲಿ ಮತ್ತು ಬಡವರ ಪಾಲಿಗೆ ಉತ್ತಮ ಆರೋಗ್ಯ ಕೇಂದ್ರವಾಗಿ ಮೂಡಿಬರಲಿ ಎಂದರು.

ಪುತ್ತೂರು ವೈದ್ಯರಾದ ಡಾ| ನಜೀರ್ ಅಹ್ಮದ್‌ರವರು ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು. ವೇದಿಕೆಯಲ್ಲಿ ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತಿನ ಅಧ್ಯಕ್ಷರು, ಕಮ್ಮಾಡಿ ಆಸ್ಪತ್ರೆಯ  ನಿರ್ಮಾಣದ ನೇತೃತ್ವವನ್ನು ವಹಿಸಿರುವ ಹಾಜಿ ಎಸ್.ಇಬ್ರಾಹಿಂ ಕಮ್ಮಾಡಿ, ಆರ‍್ಯಾಪು ಗ್ರಾ.ಪಂ. ಅಧ್ಯಕ್ಷೆ ಗೀತಾ ಎಂ.,ಪುತ್ತೂರು ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಉಪಸ್ಥಿತರಿದ್ದರು.

ಪುತ್ತೂರು ವಲಯ ಅರಣ್ಯಾಧಿಕಾರಿ ವಿ.ಪಿ.ಕಾರಿಯಪ್ಪರವರು ಮಾತನಾಡಿ, ಇಲ್ಲಿ ಪ್ರಾರಂಭಗೊಳ್ಳುವ ಈ ಆಸ್ಪತ್ರೆಯ ಮೂಲಕ ಉತ್ತಮ ಸೇವೆ ದೊರಕಲಿ, ಸಮುದಾಯದ ಆಶೋತ್ತರಗಳನ್ನು ಈಡೇರಿಸುವಂತಾಗಲಿ ಎಂದು ಹೇಳಿದರು.

ಜಿ.ಪಂ. ಸದಸ್ಯರು, ಸಂಯುಕ್ತ ಜಮಾತಿನ ಉಪಾಧ್ಯಕ್ಷರಾದ ಎಂ.ಎಸ್ ಮಹಮ್ಮದ್‌ವರು ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರು ಕಮ್ಮಾಡಿಯಲ್ಲಿ ಇಬ್ರಾಹಿಂ ಹಾಜಿಯವರ ನೇತೃತ್ವದಲ್ಲಿ ಸ್ಥಾಪನೆಗೊಳ್ಳುವ ಕಮ್ಮಾಡಿ ಆಸ್ಪತ್ರೆಯು ಎಲ್ಲಾ ಧರ್ಮೀಯರ ಆಸ್ಪತ್ರೆಯಾಗಿದೆ. ಜಾತಿ ಧರ್ಮ ಬೇಧವಿಲ್ಲದೆ, ಎಲ್ಲಾ ವರ್ಗದವರಿಗೆ ಆರೋಗ್ಯ ನೀಡುವ ಸಲುವಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಇಬ್ರಾಹಿಂ ಹಾಜಿ ಕಮ್ಮಾಡಿಯವರು ಮುಂದೆ ಬಂದಿರುವುದು ಸಂತಸದ ವಿಚಾರವಾಗಿದೆ ಎಂದರು.

ಸಂಯುಕ್ತ ಜಮಾತಿನ ಉಪಾಧ್ಯಕ್ಷ ಹುಸೈನ್ ದಾರಿಮಿ ರೆಂಜಲಾಡಿಯವರು ಮಾತನಾಡಿ, ಕಮ್ಮಾಡಿ ಆಸ್ಪತ್ರೆಯು ಸುಸಜ್ಜಿತ ಆಸ್ಪತ್ರೆಯಾಗಿ ಮೂಡಿಬರಲಿದ್ದು, ನಾಲ್ಕು ಅಂತಸ್ತಿನಿಂದ ಕೂಡಿದ್ದು, 75 ಬೆಡ್‌ಗಳಿಂದ ಕೂಡಿದ ಸಾರ್ವಜನಿಕ ಆಸ್ಪತ್ರೆಯಾಗಲಿದೆ. ಕಮ್ಮಾಡಿ ಹಾಜಿಯವರ ಕನಸನ್ನು ನನಸಾಗಿಸಲು ಎಲ್ಲರ ಪ್ರೀತಿ, ವಿಶ್ವಾಸ, ಮಮತೆ, ಪ್ರಾರ್ಥನೆ ಅಗತ್ಯವಾಗಿದೆ ಎಂದರು. ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತಿನ ಕಾನೂನು ಸಲಹೆಗಾರರಾದ ನ್ಯಾಯವಾದಿ ಫಝಲ್ ರಹೀಂ ಸ್ವಾಗತಿಸಿ, ಪುತ್ತೂರು ತಾಲೂಕು ಮುಸ್ಲಿಂ ಸಂಯುಕ್ತ ಜಮಾತಿನ ಉಪಾಧ್ಯಕ್ಷ ಹಾಜಿ ಮುಸ್ತಾಪ ಕೆಂಪಿ ವಂದಿಸಿದರು, ಕೆ.ಎಂ.ಎ ಕೊಡುಂಗಾಯಿರವರು ಕಾರ‍್ಯಕ್ರಮ ನಿರ್ವಹಿಸಿದರು. ಸಂಯುಕ್ತ ಜಮಾತಿನ ವಿವಿಧ ಪದಾಧಿಕಾರಿಗಳಾದ ಕೆ.ಎಂ.ಬಾವಾ ಹಾಜಿ, ಬಿ.ಎ. ಶಕೂರ್ ಹಾಜಿ, ಎಲ್ .ಟಿ.ಅಬ್ದುಲ್ ರಜಾಕ್ ಹಾಜಿ, ಅಬ್ದುಲ್ ರಹೀಮಾನ್ ಆಜಾದ್, ಅಬ್ದುಲ್ ಕರೀಂ ಸವಣೂರು, ಕಮ್ಮಾಡಿ ಆಸ್ಪತ್ರೆಯ ಕಾಂಟ್ರಾಕ್ಟರ್ ಪುತ್ತು ಬಾವಾ ಸವಣೂರು, ಅಬೂಬಕ್ಕರ್ ಮುಲಾರ್, ಓಲೆಮುಂಡೋವು ರಜಾಕ್, ಕಮ್ಮಾಡಿ ಬಶೀರ್, ಅನೀಸ್ ಅಬ್ದುಲ್ಲಾ ಕಮ್ಮಾಡಿ, ಸಿದ್ದೀಕ್ ಕೂಡುರಸ್ತೆ ಮೊದಲಾದವರು ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.

09fc4cb7-f400-4983-8859-9c602cbcd6f9

ac41cb17-8fb2-4e24-af2b-0693961b72d3

Kammadi shilanyasa

20160106212607

20160106213310

20160106213311

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.