ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆ : ಸುದ್ದಿ ವೇದಿಕೆಯ ಗಲಭೆ ವಿರೋಧಿ ಆಂದೋಲನಕ್ಕೆ ಬೆಂಬಲ

Puttur_Advt_NewsUnder_1
Puttur_Advt_NewsUnder_1

ನೀರಿನ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡುವಂತೆ ಸದಸ್ಯರ ಆಗ್ರಹ

ಪುತ್ತೂರು : ಪಂಚಾಯತ್‌ನಲ್ಲಿ ನೀರಿನ ಖಾತೆ ಖೋತಾವಾಗುವ ಸಂದರ್ಭ ಎದುರಾಗಿದ್ದು ಹಾಗಾಗಿ ನೀರಿನ ಬಿಲ್ ಸಕಾಲಕ್ಕೆ ಪಾವತಿಸದವರಿಗೆ ನೋಟೀಸ್ ನೀಡಿ ಸಂಪರ್ಕ ಕಡಿತ ಮಾಡುವಂತೆ ನಿರ್ಣಯ ಕೈಗೊಳ್ಳುವಂತೆ ಆರ್ಯಾಪು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ  ಸದಸ್ಯರು ಆಗ್ರಹಿಸಿದರು. ಸಭೆಯು ಗ್ರಾ.ಪಂ ಅಧ್ಯಕ್ಷೆ ಗೀತಾ ಮರಿಕೆಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಜ.7 ರಂದು ನಡೆಯಿತು.

ತಿಂಗಳಿನಲ್ಲಿ ರೂ.32,000 ಕುಡಿಯುವ ನೀರಿಗಾಗಿ ಖರ್ಚಾಗುತ್ತಿದ್ದು, ಕೇವಲ ರೂ.25000  ಮಾತ್ರ ಸಂಗ್ರಹವಾಗುತ್ತಿದೆ ಹಾಗಾಗಿ ನೀರಿನ ಖಾತೆ ಖೋತಾವಾಗುವ ಸಂದರ್ಭ ಎದುರಾಗಿದೆ ಎಂದು ಉಪಾಧ್ಯಕ್ಷ ವಸಂತ ರವರು ಮಾಹಿತಿ ನೀಡಿದರು. ನೀರಿನ ಬಿಲ್ ಪಾವತಿ ಬಗ್ಗೆ ಪಂಚಾಯತ್‌ನಿಂದ ಏನು ಕ್ರಮಕೈಗೊಂಡಿದ್ದೀರಿ, ಕಳೆದ ಸಾಮಾನ್ಯ ಸಭೆಯಲ್ಲಿ ನೀರಿನ ಬಿಲ್ ಬಾಕಿ ಇದ್ದವರಿಗೆ ನೋಟೀಸ್ ನೀಡಿ ವಸೂಲಿ ಮಾಡಲು ತಿಳಿಸಲಾಗಿದೆ. ಬಳಕೆದಾರರಲ್ಲಿ ಕೇಳಿದರೆ ನೀರಿನ ಬಿಲ್ ಕಲೆಕ್ಷನ್‌ಗೆ ಪಂಚಾಯತ್‌ನವರು ಬರುತ್ತಿಲ್ಲ ಎಂದು ಹೇಳುತ್ತಾರೆ. ಹಾಗಾಗಿ ಇನ್ನು ಮುಂದೆ ಸಾಮಾನ್ಯ ಸಭೆಯಲ್ಲ ಚರ್ಚೆ ಮಾಡಿ ಪ್ರಯೋಜನವಿಲ್ಲ, ಬಾಕಿ ಇರುವ ಬಳಕೆದಾರರಿಗೆ ನೋಟೀಸ್ ನೀಡಿ, ೭ ದಿನಗಳೊಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಸಂಪರ್ಕ ಕಡಿತ ಮಾಡುವಂತೆ ನಿರ್ಣಯ ಕೈಗೊಳ್ಳಲು ಸದಸ್ಯರೆಲ್ಲರೂ ಒಕ್ಕೊರಳಿನಿಂದ ಆಗ್ರಹಿಸಿದರು, ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ಅನುದಾನಗಳು ವಾರ್ಡ್‌ವಾರು ಹಂಚಿಕೆ : 14ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯ ಕುರಿತಾಗಿ ಚರ್ಚೆ ನಡೆದಾಗ ಕೆಲವೊಂದು ವಾರ್ಡ್‌ಗಳಲ್ಲಿ 2 ಸದಸ್ಯರು ಕೆಲವು ವಾರ್ಡ್‌ಗಳಲ್ಲಿ 4 ಸದಸ್ಯರಿರುತ್ತಾರೆ ಹಾಗಾಗಿ ವಾರ್ಡ್‌ವಾರು ಹಂಚಿಕೆ ಬೇಡ, ಸದಸ್ಯವಾರು ಹಂಚಿಕೆಯಾಗಲಿ ಎಂದು ಸದಸ್ಯ ರಮೇಶ್ ರೈ ಡಿಂಬ್ರಿ ಹೇಳಿದರು. ಸದಸ್ಯವಾರು ಹಂಚಿಕೆ ಬೇಡ ವಾರ್ಡುವಾರು ಸಮಾನವಾಗಿ ಹಂಚಿಕೆಯಾಗಬೇಕು ಎಂದು ಸದಸ್ಯ ವಿಜಯ ಬಿ.ಎಸ್, ತುಳಸಿ ದೇರಣ್ಣ ಇತರ ಸದಸ್ಯರು ಹೇಳಿದರು. ಅಂತಿಮವಾಗಿ ಅನುದಾನವನ್ನು ಸಮಾನವಾಗಿ ವಾರ್ಡ್‌ವಾರು ಹಂಚಿಕೆ ಮಾಡುವಂತೆ ನಿರ್ಣಯಿಸಲಾಯಿತು. ವಾರ್ಡ್‌ವಾರು ಹಂಚಿಕೆ ಪ್ರಕಾರ ಪ್ರತಿ ವಾರ್ಡ್‌ಗೆ ರೂ.1,46,750  ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಕಾರ್ಯದರ್ಶಿಯವರು ಮಾಹಿತಿ ನೀಡಿದರು.

ಟೈಲರಿಂಗ್ ಮೆಷಿನ್ ಆಯ್ಕೆ ಪಟ್ಟಿಯ ಬಗ್ಗೆ ಕುರಿಯ ಗ್ರಾಮಕ್ಕೆ ಮಾಹಿತಿ ಇಲ್ಲ : ಜಲಾನಯನ ಇಲಾಖೆಯಿಂದ ಟೈಲರಿಂಗ್ ಮೆಷಿನ್ ಬಂದ ಬಗ್ಗೆ ಆರ್ಯಾಪು ಗ್ರಾಮದ ಸದ್ಯರಿಗೆ ಮಾಹಿತಿ ಇದೆ ಆದರೆ ಕುರಿಯ ಗ್ರಾಮದ ಸದಸ್ಯರಿಗೆ ಮಾಹಿತಿ ಯಾಕೆ ಇಲ್ಲ ಎಂದು ಕುರಿಯ ಗ್ರಾಮದ ಸದಸ್ಯರು ಪ್ರಶ್ನಿಸಿದರು. ಟೈಲರಿಂಗ್ ಮೆಷಿನ್ ಹಂಚಿಕೆಯ ಬಗ್ಗೆ ಎಲ್ಲಾ ವಾರ್ಡ್‌ನ ಒಬ್ಬೊಬ್ಬ ಸದಸ್ಯನಿಗೆ ಮಾಹಿತಿ ನೀಡಿದ್ದೇನೆ ಎಲ್ಲಾ ಸದಸ್ಯರಿಗೆ ನನ್ನ ಮೊಬೈಲ್‌ಗೆ ಕರೆನ್ಸಿ ಹಾಕಿ ಕಾಲ್ ಮಾಡಿ ಹೇಳಲು ಸಾಧ್ಯವಿಲ್ಲ ಎಂದು ಉಪಾಧ್ಯಕ್ಷ ವಸಂತ ಹೇಳಿದರು, ಉಪಾಧ್ಯಕ್ಷರಾದ ನಿಮ್ಮ ಬಾಯಿಯಲ್ಲಿ ಈ ರೀತಿಯ ಮಾತು ಬರಬಾರದು  ಎಂದು ಸದಸ್ಯ ರಮೇಶ್ ರೈ ಡಿಂಬ್ರಿ ಹೇಳಿದರು. ಟೈಲರಿಂಗ್ ಮೆಷಿನ್ ಆರ್ಯಾಪು ಗ್ರಾಮಕ್ಕೆ ಮಾತ್ರ ಬಂದಿರುವುದಾಗಿ ಕಾರ್ಯದರ್ಶಿಯವರು ಹೇಳಿದಾಗ ಕುರಿಯ ಗ್ರಾಮಕ್ಕೆ ಟೈಲರಿಂಗ್ ಮೆಷಿನ್ ಇಲ್ಲದಿದ್ದರೂ ತೊಂದರೆ ಇಲ್ಲ ಆದರೆ ಆಯ್ಕೆ ಮಾಡುವಾಗ ಎಲ್ಲಾ ಸದಸ್ಯರುಗಳಿಗೆ ತಿಳಿಸಿ ಸಭೆಯಲ್ಲಿ ವಿಷಯ ಇಟ್ಟು ಎಲ್ಲಾ ಸದಸ್ಯರ ಗಮನಕ್ಕೆ ತಂದು ಆಯ್ಕೆ ಮಾಡಿ ಎಂದು ಸದಸ್ಯರು ಹೇಳಿದರು. ನೀತಿಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದ ಕಾರಣ ತರಾತುರಿಯಲ್ಲಿ ಪಟ್ಟಿ ತಯಾರಿಸಿದ್ದೇವೆ ಎಂದು ಉಪಾಧ್ಯಕ್ಷರು ಹೇಳಿದರು. ಪಟ್ಟಿಯಲ್ಲಿ ಗೊಂದಲವಿದ್ದರೆ ಇವತ್ತಿನ ಸಭೆಯಲ್ಲಿಟ್ಟು ಸರಿ ಮಾಡಿಕೊಳ್ಳುವ ಎಂದು ಸದಸ್ಯ ವಿಜಯ ಬಿ.ಎಸ್ ಹೇಳಿದಾಗ ಚರ್ಚೆ ಮುಕ್ತಾಯವಾಯಿತು.

ಪಂಚಾಯತ್‌ಗೆ ಮಾಹಿತಿ ಇಲ್ಲದೆ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿದೆ : ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕರ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿದ್ದು ಆದರೆ ಯಾಕೆ ರದ್ದಾಗುತ್ತಿದೆ, ಕಾರಣ ಏನೆಂಬುದಾಗಿ ಪಂಚಾಯತ್‌ಗಾಗಲೀ ಸದಸ್ಯರಿಗಾಗಲೀ ಮಾಹಿತಿ ಇಲ್ಲ ಎಂದು ಸದಸ್ಯರು ಅಧಿಕಾರಿಗಳಲ್ಲಿ ಪ್ರಶ್ನಿಸಿದರು, ಇದಕ್ಕೆ ಉತ್ತರಿಸಿದ ಅಧಿಕಾರಿಯವರು ಯಾವುದೇ ಕಾರಣಕ್ಕೂ ಪಂಚಾಯತ್‌ನಿಂದ ಬಿಪಿಎಲ್ ಕಾರ್ಡ್ ರದ್ದಾಗುತ್ತಿಲ್ಲ, ಆಹಾರ ಇಲಾಖೆಯವರು ಮೆಸ್ಕಾಂ, ಆರ್‌ಟಿಒ ಇಲಾಖೆಯಿಂದ ಕಾರ್ಡುದಾರರ ಮಾಹಿತಿ ಸಂಗ್ರಹಿಸಿ ಆಹಾರ ಇಲಾಖೆಯವರೇ ಸರಕಾರದ ಆದೇಶದನ್ವಯ ರದ್ದು ಮಾಡುತ್ತಿದ್ದಾರೆ. ಇದರ ಬಗ್ಗೆ ಪಂಚಾಯತ್‌ಗೆ ಯಾವುದೇ ಮಾಹಿತಿ ಬರುವುದಿಲ್ಲ ಎಂದು ಹೇಳಿದರು.

ಮರಿಕೆಯಲ್ಲಿ ಕಾಳಿಂಗ ಸರ್ಪದ ಹಾವಳಿ : ಆರ್ಯಾಪು ಗ್ರಾಮದ ಮರಿಕೆ ಪ್ರದೇಶದಲ್ಲಿ ದಿನಂಪ್ರತಿ ಕಾಳಿಂಗ ಸರ್ಪವೊಂದು ಕಾಣಸಿಗುತ್ತಿದ್ದು, ಈ ಪ್ರದೇಶದ ಜನರು ಭಯಭೀತರಾಗಿದ್ದಾರೆ. ಇದರಿಂದಾಗಿ ಸಾಕು ಪ್ರಾಣಿಗಳಿಗೆ, ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಆ ಪ್ರದೇಶದ ಜನರು ಪಂಚಾಯತ್‌ಗೆ ಮನವಿ ಮಾಡಿರುವ ಬಗ್ಗೆ ವಿಷಯ ಪ್ರಸ್ತಾಪವಾಯಿತು. ಈ ಬಗ್ಗೆ ಅರಣ್ಯ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಬರೆಯಲು ನಿರ್ಣಯಿಸಲಾಯಿತು.

ಕುರಿಯ ಶಾಲೆಯಲ್ಲಿ ಈಗಿರುವ ಅಧ್ಯಕ್ಷರೇ ಮುಂದುವರಿಯಲಿ : ಕುರಿಯ ಸರಕಾರಿ ಪ್ರಾಥಮಿಕ ಶಾಲೆಯ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರ ಆಯ್ಕೆ ವಿಚಾರ ಏನಾಯಿತು ಎಂಬುದಾಗಿ ಶಿಕ್ಷಣಾಧಿಕಾರಿಯವರು ಮನವಿ ಮಾಡಿರುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಕುರಿಯ ಶಾಲೆಯಲ್ಲಿ ಈಗಾಗಲೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಿವರಾಮ ರವರನ್ನೇ ಅಧ್ಯಕ್ಷರಾಗಿ  ಮುಂದುವರಿಸುವ ಬಗ್ಗೆ ಸದಸ್ಯರೆಲ್ಲರೂ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿ ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

94ಸಿಸಿ ಗೊಂದಲ ಸರಿಪಡಿಸಿ: ಸರಕಾರದ 94ಸಿಸಿ ಯೋಜನೆಯಲ್ಲಿ ಗ್ರಾಮದ ಗ್ರಾಮ ಲೆಕ್ಕಿಗರು ಎಲ್ಲರಿಂದಲೂ ಅರ್ಜಿ ತೆಗೆದುಕೊಂಡಿದ್ದಾರೆ ಆದರೆ ಇನ್ನೂ ಕೆಲವರಿಗೆ ಹಕ್ಕು ಪತ್ರ ಸಿಗದೇ ಅಲೆದಾಡುತ್ತಿದ್ದಾರೆ ಹಾಗಾಗಿ ಗೊಂದಲ ಸರಿಪಡಿಸುವಂತೆ ಕಂದಾಯ ಇಲಾಖೆಗೆ ಬರೆಯಲು ನಿರ್ಣಯ ಕೈಗೊಳ್ಳುವಂತೆ ಸದಸ್ಯ ವಿಜಯ ಬಿ.ಎಸ್ ಒತ್ತಾಯಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ಅಂಬೇಡ್ಕರ್ ವಸತಿ ಯೋಜನೆಯಲ್ಲಿ 19  ಮನೆ : ಅಂಬೇಡ್ಕರ್ ವಸತಿ ಯೋಜನೆಯಲ್ಲಿ 19  ಮನೆ ಬಂದಿದ್ದು, ಅದರಲ್ಲಿ 2 ಮಾತ್ರ ಸಾಮಾನ್ಯಕ್ಕೆ ಮೀಸಲಿದ್ದು ಫಲಾನುಭವಿಗಳ ಅರ್ಜಿ ಸ್ವೀಕರಿಸಿ ಆಯ್ಕೆ ಪ್ರಕ್ರಿಯೆ ಕೂಡಲೇ ಆಗಬೇಕೆಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಾಮಾನ್ಯಕ್ಕೆ ಮಿಸಲಿರುವ 2 ಮನೆಗಳನ್ನು ನಾನು ಎಂಎಲ್‌ಎ ಬಳಿ ಹೋಗಿ ನಾನು ಆಯ್ಕೆ ಮಾಡಿಸಿಕೊಂಡು ಬಂದಿದ್ದೇನೆ ಎಂದು ಸದಸ್ಯ ಜಯಂತ ಶೆಟ್ಟಿ ಸಭೆಗೆ ತಿಳಿಸಿದಾಗ ಸದಸ್ಯರೊಳಗೆ ಗೊಂದಲ ಉಂಟಾಯಿತು. ಎಂಎಲ್‌ಎ ಆಯ್ಕೆ ಮಾಡಿದಕ್ಕೆ ನನ್ನ ವಿರೋಧವಿದೆ, ಸಾಮಾನ್ಯದ ಪಟ್ಟಿಯನ್ನು ಎಂಎಲ್‌ಎ ಆಯ್ಕೆ ಮಾಡುವುದಾದರೆ ಎಸ್‌ಟಿಎಸ್‌ಸಿಯ ಆಯ್ಕೆಯನ್ನು ಅವರೇ ಮಾಡಲಿ ಎಂದು ಸದಸ್ಯ ಸೂರ್ಯನಾರಾಯಣ ಪ್ರಭು ಹೇಳಿದರು. ಸಾಮಾನ್ಯ ಪಟ್ಟಿಗೆ ಆಯ್ಕೆಯಾಗಿರುವ ಫಲಾನುಭವಿಗಳು ಗ್ರಾಮ ಸಭೆಯಲ್ಲಿ ಅರ್ಜಿ ಕೊಟ್ಟಿದ್ದಾರ ಎಂದು ಸದಸ್ಯರಾದ ವಿಜಯ ಬಿ.ಎಸ್, ತುಳಸಿ ದೇರಣ್ಣ ಅಧಿಕಾರಿಯವರಲ್ಲಿ ಪ್ರಶ್ನಿಸಿದರು. ಜಯಂತ ಶೆಟ್ಟಿಯವರು ಬೇರೆ ಕಡೆ ಹೋಗಿದ್ದ 2 ಸಾಮಾನ್ಯ ಸ್ಥಾನದ ಮನೆಯನ್ನು ಹೆಚ್ಚುವರಿಯಾಘಿ ನಮ್ಮ ಎಂಎಲ್‌ಎ ಮೂಲಕ ನಮ್ಮ ಪಂಚಾಯತ್‌ಗೆ ತಂದಿದ್ದಾರೆ ಎಂದು ಉಪಾಧ್ಯಕ್ಷರು, ಅಧಿಕಾರಿಗಳು ಸಭೆಗೆ ತಡವಾಗಿ ಮಾಹಿತಿ ನೀಡಿದಾಗ ಗೊಂದಲಕ್ಕೆ ತೆರೆ ಬಿತ್ತು, ಕೊನೆಗೆ ಸದಸ್ಯ ಜಯಂತ ಶೆಟ್ಟಿಯವರಿಗೆ ಹೆಚ್ಚುವರಿ 2 ಮನೆಗಳನ್ನು ತರಿಸಿದಕ್ಕಾಗಿ ಸದಸ್ಯರಿಂದ ಅಭಿನಂದನೆ ಕೂಡ ಕೇಳಿ ಬಂತು.

ಸಭೆಯಲ್ಲಿ ಸದಸ್ಯರುಗಳಾದ ರಮೇಶ್ ರೈ, ಸುಧಾಮಣಿ ಜಿ ರೈ, ಕುಸುಮ, ಜಯಂತಿ, ಜಯಲಕ್ಷ್ಮೀ ಕೊಲ್ಯ, ವಿಜಯ ಬಿ.ಎಸ್, ರೇಖಾನಾಥ ರೈ, ತುಳಸಿ ದೇರಣ್ಣ, ಸರಸ್ವತಿ ವಿಶ್ವನಾಥ, ಇಸ್ಮಾಯಿಲ್ ಮಲಾರ್, ಜಯಂತ ಶೆಟ್ಟಿ, ಭಾರತಿ, ಗಣೇಶ್ ಎಂ, ವನಿತಾ ಮರಿಕೆ, ವಿಶ್ವನಾಥ ಗೌಡ, ಅಬ್ದುಲ್ ಜಬ್ಬಾರ್, ಸೂರ್ಯನಾರಾಯಣ, ನಳಿನಿ ಕಾಂತಪ್ಪ, ಸವಿತಾ, ವಿನಯ ನಾಕ್ ಉಪಸ್ಥಿತರಿದ್ದರು. ಪಿಡಿಓ ಜಗದೀಶ್ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಪದ್ಮಕುಮಾರಿ ವಂದಿಸಿದರು. ಸಿಬ್ಬಂದಿ ಹೊನ್ನಪ್ಪ ಬಿ. ಸಹಕರಿಸಿದರು.

ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆ

ಅನುದಾನಗಳು ವಾರ್ಡ್‌ವಾರು ಹಂಚಿಕೆಯಾಗಲಿ

ಟೈಲರಿಂಗ್ ಮೆಷಿನ್ ಆಯ್ಕೆ ಪಟ್ಟಿಯ ಬಗ್ಗೆ ಕುರಿಯ ಗ್ರಾಮಕ್ಕೆ ಮಾಹಿತಿ ಇಲ್ಲ

ಪಂಚಾಯತ್‌ಗೆ ಮಾಹಿತಿ ಇಲ್ಲದೆ ಬಿಪಿಎಲ್ ಕಾರ್ಡ್‌ಗಳು ರದ್ದಾಗುತ್ತಿದೆ

ಮರಿಕೆಯಲ್ಲಿ ಕಾಳಿಂಗ ಸರ್ಪ ಹಾವಳಿ

ಕುರಿಯ ಶಾಲೆಯಲ್ಲಿ ಈಗಿರುವ ಅಧ್ಯಕ್ಷರೇ ಮುಂದುವರಿಯಲಿ

94ಸಿಸಿ ಗೊಂದಲ ಸರಿಪಡಿಸಿ

ಅಂಬೇಡ್ಕರ್ ವಸತಿ ಯೋಜನೆಯಲ್ಲಿ 19  ಮನೆಬಲಾತ್ಕಾರದ ಬಂದ್‌ಗೆ ಬೆಂಬಲವಿಲ್ಲ-ನಿರ್ಣಯ

ಬಲಾತ್ಕಾರದ ಬಂದ್, ಕೋಮು ಯಾ ಇತರ ಗಲಭೆಗಳ ವಿರುದ್ದದ ಸುದ್ದಿ ಆಂದೋಲನದ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪವಾದಾಗ ಸದಸ್ಯ ವಿಜಯ ಬಿ.ಎಸ್ ಮಾತನಾಡಿ ದಯವಿಟ್ಟು ಸುದ್ದಿ ಸಂಪಾದಕೀಯವನ್ನು ನಿಲ್ಲಿಸುವುದು ಒಳ್ಳೆಯದು ಯಾಕೆಂದರೆ ದಿನಂಪ್ರತಿ ಸಂಪಾದಕೀಯ, ಬಂದ್‌ನ ವಿಷಯವನ್ನು ನೋಡಿ ಸಾಕಾಗಿ ಹೋಗಿದೆ, ನಾನು ಕೂಡ ಬಂದ್‌ನ ಬಗ್ಗೆ ಹೇಳಿಕೆ ಕೊಟ್ಟಿದ್ದೇನೆ, ಯಾವುದೇ ಸರಕಾರ ಇರಬಹುದು ಆದರೆ ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸದಿದ್ದಾಗ ಬಂದ್ ಅನಿವಾರ್ಯವಾಗುತ್ತದೆ ಎಂದರು. ಸದಸ್ಯ ಸೂರ್ಯನಾರಾಯಣ ಪ್ರಭು ಮಾತನಾಡಿ ಬಂದ್‌ನ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಜನಾಭಿಪ್ರಾಯ ಮಾತ್ರ ಪತ್ರ್ರಿಕೆಯಲ್ಲಿ ಪ್ರಕಟವಾಗಿದೆ, ಬಂದ್‌ನ ಪರ ಮಾತಾಡಿರುವವರ ವಿಚಾರವೇ ಬಂದಿಲ್ಲ ಎಂದು ಹೇಳಿದರು. ಸದಸ್ಯ ರಮೇಶ್ ರೈ ಡಿಂಬ್ರಿ ಮಾತನಾಡಿ ಬಲಾತ್ಕಾರದ ಬಂದ್‌ಗೆ ನಮ್ಮ ವಿರೋಧವಿದೆ, ಆದರೆ ಇದುವರೆಗೆ ಪುತ್ತೂರಿನಲ್ಲಿ ಬಲಾತ್ಕಾರದ ಬಂದ್ ಎಲ್ಲಿಯೂ ಆಗಿಲ್ಲ, ನಾನು ಕಳೆದ 15 ವರ್ಷಗಳಿಂದ ಹಿಂದೂ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದೇನೆ, 15  ವರ್ಷದಲ್ಲಿ ಎಲ್ಲಿಯೂ ಕೂಡ ನಾವು ಬಂದ್ ಮಾಡಿ ಅಂತ ಹೇಳಿಲ್ಲ, ಆದರೆ ನಮ್ಮ ಸಂಘಟನೆಯವರು ಬಂದ್‌ಗೆ ಕರೆ ಕೊಡುವಾಗ ಅದನ್ನು ಬೆಂಬಲಿಸಿದ್ದೇವೆ ಹೊರತು ಎಲ್ಲಿಯೂ ಕೂಡ ಬಲಾತ್ಕಾರವಾಗಿ ಬಂದ್ ಮಾಡಿಲ್ಲ ಇದು ನನ್ನ ಅನುಭವದ ಮಾತು ಎಂದು ಹೇಳಿದರು. ಸದಸ್ಯೆ ತುಳಸಿ ದೇರಣ್ಣ ಮಾತನಾಡಿ ಬಂದ್‌ಗೆ ಕರೆ ಕೊಟ್ಟಾಗ ಎಲ್ಲಿಯೂ ಕೂಡ ಸಂಘಟನೆಯವರು ಬಲಾತ್ಕಾರವಾಗಿ ಬಂದ್ ಮಾಡಿಸುವುದಿಲ್ಲ ಬದಲಾಗಿ ಬಂದ್‌ಗೆ ಕರೆ ಕೊಟ್ಟ ತಕ್ಷಣ ಪೊಲೀಸ್‌ನವರು ಸೆಕ್ಷನ್ ಜಾರಿ ಮಾಡಿ ಅವರೇ ಎಲ್ಲಾ ಕಡೆಗಳಿಗೆ ಹೋಗಿ ಬಲತ್ಕಾರವಾಗಿ ಬಂದ್ ಮಾಡುತ್ತಾರೆ, ಅವರಿಗೆ ಹೆದರಿ ಎಲ್ಲರೂ ಬಂದ್ ಮಾಡುತ್ತಾರೆ ಎಂದು ಹೇಳಿದರು. ಅಂತಿಮವಾಗಿ ಎಲ್ಲರ ಅಭಿಪ್ರಾಯದೊಂದಿಗೆ ಬಲತ್ಕಾರದ ಬಂದ್‌ಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು. )

 

 

f4f82bc2-34b3-4dc8-b0b9-9b60f8becb18

4c09b98d-dc8a-4ece-aa80-23c8140659c5

fe0a3334-6015-4ed8-9031-f6e8aa6e9f05

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.