ಜ.8 : ಕಾಣಿಯೂರು ಏಲಡ್ಕದಲ್ಲಿ ಪ್ರತಿಷ್ಠಾ 8ನೇ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿರುವ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಾಮುಂಡಿ ದೈವ ಹಾಗೂ ಶ್ರೀ ಪರಿವಾರ ದೈವಗಳ ಪ್ರತಿಷ್ಠಾ 8ನೇ ವಾರ್ಷಿಕೋತ್ಸವ ಹಾಗೂ 48 ಕಾಯಿಯ ಶ್ರೀ ಗಣಪತಿ ಹೋಮವು ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯರ ನೇತೃತ್ವದಲ್ಲಿ ಜ.8 ರಂದು ನಡೆಯಲಿದೆ. ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದೈವತಾ ಪ್ರಾರ್ಥನೆ, ಕಲಶಾಭಿಷೇಕ, 48 ಕಾಯಿಯ ಗಣಪತಿ ಹೋಮ, ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ. ಮಧ್ಯಾಹ್ನ 12-00ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಾಧವ ಕಟ್ಟತ್ತಾರುರವರು ವಹಿಸಿಲಿದ್ದು, ಪೂರ್ಣತ್ಮರಾಮ ಈಶ್ವರಮಂಗಲರವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.