Breaking News

ಉಪ್ಪಿನಂಗಡಿ ದುರ್ಗಾಗಿರಿ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ಜ. 23 ರವರೆಗೆ  ನಗರ ಭಜನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ದುರ್ಗಾಗಿರಿ ಶ್ರೀ ದುರ್ಗಾ ಭಜನಾ ಮಂದಿರದ ಆಶ್ರಯದಲ್ಲಿ ನಗರ ಭಜನೆಯ ದಶಮಾನೋತ್ಸವ ಮತ್ತು ಭಜನಾ ಮಂದಿರದ ಹದಿಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದ್ದು, ದುರ್ಗಾಗಿರಿ ಭಜನಾ ಮಂದಿರದಲ್ಲಿ ಜ. 7 ರಿಂದ 23ರವರೆಗೆ  ನಗರ ಭಜನೆ ನಡೆಯಲಿದೆ.

14 ದಿನಗಳಲ್ಲಿ ಒಟ್ಟು 250 ಮನೆಗಳಲ್ಲಿ ನಗರ ಭಜನೆ ಸೇವೆ ನಡೆಯಲಿದೆ.  ಪ್ರತಿ ದಿನ  ಸಂಜೆ ಗಂಟೆ 7:೦೦ಕ್ಕೆ ನಗರ ಭಜನೆಯು  ಭಜನಾ ಮಂದಿರದಿಂದ ಪ್ರಾರಂಭಗೊಂಡು  ದಿನ ಕೊನೆಯ ಭಕ್ತಾದಿಯ  ಮನೆಯಲ್ಲಿ ಭಜನಾ ಸೇವೆಯ ಮಂಗಳ ನಡೆದು, ಸೇರಿರುವ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಜ. 24ರಂದು ನಗರ ಭಜನೆ ದಶಮಾನೋತ್ಸವ, ಭಜನಾ ಮಂದಿರದ ಹದಿಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಜ. 24ರಂದು ರಾತ್ರಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಜ್ರದೇಹಿ ಮಠ ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರು  ಆಶೀರ್ವಚನವನ್ನು ನೀಡಲಿದ್ದಾರೆ. ಧನ್ಯಕುಮಾರ್ ರೈ ಬಿಳಿಯೂರು ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.