ಆ-ನಂದದ ಬೆಳಕು

Puttur_Advt_NewsUnder_1
Puttur_Advt_NewsUnder_1

narayana kukkuvalli

ಮನದ ಒಳಗೂ ಕತ್ತಲು…

ಮನದ ಹೊರಗೂ ಕತ್ತಲು…

ಯಾರಿಗೆ??

ಎಲ್ಲ ಕತ್ತಲೆಂದು ಬಗೆದವರಿಗೆ…

ಎಲ್ಲೆಲ್ಲೂ ಬರಿಯ ಕಗ್ಗತ್ತಲು…

ಮನದ ಕತ್ತಲ ಕಳೆವ ಬೆಳಕಿಗಾಗಿ

ತಡಕಾಡಿ… ಹುಡುಕಾಡಿ…

ಕಾಡಿ-ಬೇಡಿ… ಕೈ-

ಸೇರದಾಗ… ಮತ್ತದೇ ಕತ್ತಲು…

ಬರಿಯ ಕಗ್ಗತ್ತಲು…||

ನಮ್ಮೆದೆಯಲಿ ಶಾಂತಿ-ನೀತಿ..

ಪ್ರೀತಿ ಸೌಹಾರ್ದತೆಯ…

ಸಾಹಿತ್ಯ-ಕಲೆ-ಸಂಸ್ಕೃತಿಯ

ಅಮೃತ ಹರಿದು ಹೊಳೆಯಾದಾಗ..

ಕತ್ತಲ ಕೊಳೆ ಕಳೆಯುವುದು…

ಸುಜ್ಞಾನದ ಬೆಳಕು ಮೂಡುವುದು..

ಆಗ-

ಮನದ ಒಳಗೂ ಬೆಳಕು…

ಮನದ ಹೊರಗೂ ಬೆಳಕು

ದೀಪಾವಳಿಯ

ಸಾಲು… ಸಾಲು… ಹಣತೆ

ಗೂಡು ದೀಪಗಳ

ಆ-

ನಂದದ ಬೆಳಕಿನಂತೆ

ನಾರಾಯಣ ರೈ ಕುಕ್ಕುವಳ್ಳಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.