Breaking News

ಹನಿ-ಮಿನಿ ಕಾವ್ಯರಂಗ

Puttur_Advt_NewsUnder_1
Puttur_Advt_NewsUnder_1

prajnaಮನದ ಮಾತು: ಅಕ್ಟೋಬರ ೨ರ ಹನಿಮಿನಿ ಕಾವ್ಯರಂಗವನ್ನು ಮೆಚ್ಚಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಜಿಡೆಕಲ್ಲು ಪುತ್ತೂರು ಇಲ್ಲಿನ ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಪ್ರಜ್ಞಾ ಕೆ. ಒಂದು ಸುದೀರ್ಘ ಪತ್ರವನ್ನೇ ಬರೆದು ಅಭಿನಂದಿಸಿದ್ದಾರೆ. ‘ನಮ್ಮ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ನಮ್ಮೆಲ್ಲರ ಪತ್ರಿಕೆಯಾಗಿ ಜನಮನ್ನಣೆ ಗಳಿಸಿರುವುದು, ಅದರ ಕ್ರೀಯಾಶೀಲ, ಸೃಜನಶೀಲ ವರದಿ ಅಂಕಣ, ಅಚ್ಚುಕಟ್ಟುತನದಿಂದ ಅಕ್ಟೋಬರ ೨ರ ಹನಿಮಿನಿ ‘ಕಾವ್ಯರಂಗ’ದಲ್ಲಿ ತಾವು ತಿಳಿಸಿಕೊಟ್ಟಿರುವ ಮಾಹಿತಿಗಳು ನಮಗೆ ತುಂಬಾನೇ ಸಂತೋಷಕೊಟ್ಟಿವೆ. ನಮ್ಮಂಥ ವಿದ್ಯಾರ್ಥಿಗಳ ಪ್ರತಿಭಾ ವಿಕಾಸಕ್ಕೆ ವೇದಿಕೆ ಕಲ್ಪಿಸಿ ಕೊಡುತ್ತಿರುವ ಮಾನ್ಯ ಸಂಪಾದಕರಿಗೆ, ವರದಿಗಾರರಿಗೆ, ಕಛೇರಿಯ ಸರ್ವರಿಗೂ ಅಭಿನಂದನೆಗಳು. ‘ನನಗೆ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದೆಂದರೆ ತುಂಬಾ ಇಷ್ಟ, ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸಿ ಗಳಿಸಿರುತ್ತೇನೆ. ಕವನಗಳನ್ನು ಬರೆಯುತ್ತೇನೆ. ಹಿರಿಯರ ಲೇಖನ-ಕವನಗಳೆಂದರೆ ತುಂಬಾ ಗೌರವ. ವಿವೇಕಾನಂದರು ನನಗೆ ಆದರ್ಶ. ನಮ್ಮ ಕಾಲೇಜಿನಲ್ಲಿ ನಮ್ಮ ಪ್ರತಿಭೆಗೆ ತುಂಬಾ ಪ್ರೋತ್ಸಾಹವಿದೆ. ತ್ರೋಬಾಲ್ ಆಟವೆಂದರೆ ಬಹಳ ಅಚ್ಚುಮೆಚ್ಚು. ಮುಂದಿನ ಫೆಬ್ರವರಿಯಲ್ಲಿ ಉಡುಪಿಯಲ್ಲಿ ನಡೆಯಲಿರುವ ಯುನಿರ್ವಸಿಟಿ ಮ್ಯಾಚ್‌ನಲ್ಲಿ ನಾನು ಭಾಗವಹಿಸುತ್ತೇನೆ. ಬಿಡುವಿನ ಸಮಯದಲ್ಲಿ ವಾಜ್, ಮ್ಯಾಟ್ ಇತ್ಯಾದಿ ಕರಕುಶಲ ವಸ್ತುಗಳನ್ನು ತಯಾರಿಸುತ್ತೇನೆ. ಸುದ್ದಿ ಬಿಡುಗಡೆಗೆ ನನ್ನ ಅಭಿನಂದನೆಗಳು. -ಪ್ರಜ್ಞಾ ಕೆ.

-ಸೋದರಿ ಪ್ರಜ್ಞಾ ಕೆ., ನಿಮ್ಮ ಮನದ ಮಾತಿಗೆ ನಾವು ಕೃತಜ್ಞರು. ನಿಮ್ಮೆಲ್ಲರ ಪ್ರತಿಭೆ ಬೆಳಗಿ, ನಾಡಿಗೇ ಬೆಳಕಾಗಲಿ, ಬರೆಯಿರಿ, ಪ್ರೋತ್ಸಾಹಿಸಿ…

ಜೀವನ

ಜೀವನ ಒಂದು

ಶಕ್ತಿ…

ನೀಡುತ್ತಿವೆ ನಮಗೆ

ನಿತ್ಯ ಉಲ್ಲಾಸ ಆಸಕ್ತಿ…

ವಿವೇಕಾನಂದರ

ಆತ್ಮಶಕ್ತಿ…

ಬೆಳಗಲಿ ನಮ್ಮೆಲ್ಲರ

ಜೀವನ ಶಕ್ತಿ…||

ಯೋಗಭಾಗ್ಯ

ನಮ್ಮ ದೇಹಕ್ಕೆ ಬೇಕು

ಯೋಗ…|

ಯೋಗ ಮಾಡಿದರೆ…

ದೂರವಾಗುವುದು

ನಾನಾ ರೋಗ…

ಯೋಗ ಮಾಡಲು ಸಮಯ ಸಿಕ್ಕರೆ

ಅದು ನಮ್ಮ ಭಾಗ್ಯ…||

ಕಿವಿಮಾತು

‘ಪ್ಲಾಸ್ಟಿಕನ್ನು ಅಳಿಸೋಣ…

ನಮ್ಮನ್ನು ನಾವು ಉಳಿಸೋಣ…

ಈ ಭೂಮಿಯನ್ನು ರಕ್ಷಿಸೋಣ…||

ಎಲ್ಲರಿಗೂ ಈ ಸಂದೇಶ ಸಾರೋಣ…||

ಹಕ್ಕಿಯ ಹಾಡು

ಆಗಸದೆತ್ತರ

ಹಾರುವ…

ಹಕ್ಕಿಗೆ

ನೂರಾರು

ಕನಸಿದೆ…

ಇಂಪಾಗಿ ಹಾಡುವ

ಕನಸು…

ರೆಕ್ಕೆ ಬಿಚ್ಚಿ ಸುತ್ತಲೂ ಹಾರುವ

ಕನಸು…

ಕೂಡಿ ಬಾಳುವ… ಸುಂದರ

ಕನಸು…

ಹೀಗೆ ಹತ್ತಾರು

ಕನಸು… ಕನಸು… ಕನಸು…

ಹಕ್ಕಿಯ ಹಾಡಿಗೆ

ಕಿವಿಯಾಗೋಣ…

ಅದರ ಕನಸಿಗೆ

ಬಣ್ಣ್ಣ ಹಚ್ಚೋಣ…

ಆದರೆ ಎಂದೂ

ರೆಕ್ಕೆ ಮುರಿಯುವ ಕೆಲಸ ಮಾತ್ರ

ಮಾಡದಿರೋಣ…||

ಪ್ರಜ್ಞಾ ಕಾವ್ಯ, ಅಂತಿಮ ಬಿ.ಕಾಂ.

ಸ.ಪ್ರ.ದ. ಕಾಲೇಜು, ಜಿಡೆಕಲ್ಲು

(ಲಕ್ಷ್ಮೀ ನಿಲಯ, ಕಾವು ಮಾಡ್ನೂರು)

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.