Breaking News

ಪೆರ್ನಾಜೆ ಶ್ರೀ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಸಂಭ್ರಮದ ಸಾಂಸ್ಕೃತಿಕ ಸ್ಪರ್ಧೆಗಳು

Puttur_Advt_NewsUnder_1
Puttur_Advt_NewsUnder_1

20160107_104405ಪುತ್ತೂರು : ನೆಟ್ಟಣಿಗೆ ಮುಡ್ನೂರು ಗ್ರಾಮದ ಶ್ರೀ ಸೀತಾರಾಘವ ಪ್ರೌಢಶಾಲೆಯ ಸುವರ್ಣ ಸಂಭ್ರಮ ಪ್ರಾರಂಭೋತ್ಸವದ ಅಂಗವಾಗಿ ಜ.7ರಂದು ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು. ಸಾಂಸ್ಕೃತಿಕ ಸೌರಭದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ತಾಲೂಕು ಪಂಚಾಯತ್ ಸದಸ್ಯ ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ ಉದ್ಘಾಟಿಸಿದರು. ಆಡಳಿತ ಸಮಿತಿ ನಿರ್ದೇಶಕಿ ಸರೋಜಿನಿ ನಾಗಪ್ಪಯ್ಯ ಸಭಾಧ್ಯಕ್ಷತೆ ವಹಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ, ಪ್ರಗತಿಪರ ಕೃಷಿಕ ರಾಘವೇಂದ್ರ ಭಟ್ ಪೆರ್ನಾಜೆ, ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯ ಮುಖ್ಯಗುರು ಕುಸುಮಾವತಿ, ಆಡಳಿತ ಸಮಿತಿ ಅಧ್ಯಕ್ಷ ಪೆರ್ನಾಜೆ ಶಂಕರನಾರಾಯಣ ಭಟ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಶೈಕ್ಷಣಿಕ ಕಾರ್ಯದರ್ಶಿ ಯು. ಶಿವಶಂಕರ ಭಟ್ ವೀಳ್ಯ ನೀಡಿ ಅತಿಥಿಗಳನ್ನು ಬರಮಾಡಿಕೊಂಡು ಪ್ರಸ್ತಾವನೆಗೈದರು. ಸುಜಾತಾ ಆಶಯ ಗೀತೆ ಹಾಡಿದರು. ಸಂಸ್ಥೆಯ ಪ್ರಾಂಶುಪಾಲ ಕೆ.ಆರ್ ಗೋಪಾಲಕೃಷ್ಣ ಸ್ವಾಗತಿಸಿ, ಉಪನ್ಯಾಸಕಿ ಡಿ. ಸುಕನ್ಯಾ ವಂದಿಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿತು.

a8b3bda3-8f0d-42a3-9ca2-b51109ed37ea

4bede956-a5c1-41e6-9b6c-3fde29fe27d7

29def2a4-8680-44b4-ab2a-512fd803cfff

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.