ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

noojibalthila g.pಕಡಬ: ನೂಜಿಬಾಳ್ತಿಲ ಗ್ರಾ.ಪಂ.ನಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗಾಮ ಸಭೆಯು ಜ.6 ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಪಿ.ಪಿ.ವರ್ಗೀಸ್‌ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರು ಉದ್ಯೋಗ ಖಾತರಿ ಯೋಜನೆಯಲ್ಲಿ ತೊಡಗಿಸಿಕೊಂಡು ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಉದ್ಯೋಗ ಖಾತರಿ ಯೋಜನೆ ತಾಲೂಕು ಸಹಾಯಕ ನಿರ್ದೇಶಕರಾದ ರಾಜಣ್ಣನವರು ಉದ್ಯೋಗ ಖಾತರಿ ಸಾಮಾಜಿಕ ಲೆಕ್ಕ ಪರಿಶೋಧನ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ್ದರು. ಕಾಮಗಾರಿ ಪ್ರಗತಿ ಬಗ್ಗೆ ಪರಿಶೀಲಿಸಿ ಫಲಾನುಭವಿಗಳು ಇನ್ನು ಹೆಚ್ಚಿನ ರೀತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿಸುವುದರ ಮೂಲಕ ಯೋಜನೆಯಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.

ಸದಸ್ಯರಾದ ಸದಾನಂದ ಗೌಡ ಸಾಂತ್ಯಡ್ಕರವರು ಮಾತನಾಡಿ ಯಾವುದೇ ಸರಕಾರಿ ಸವಲತ್ತು ಇರುವುದು ಜನರಿಗಾಗಿ, ಕಾನೂನು ಇರುವುದು ಜನರಿಗಾಗಿ, ಆದರೆ ಕಾನೂನಿಗಾಗಿ ಜನರಿಲ್ಲ. ಯಾಕೆಂದರೆ ಈ ಉದ್ಯೋಗ ಖಾತರಿ ಯೋಜನೆ ಸರಕಾರ ಜಾರಿಗೆ ತಂದಿರುವ ಉದ್ದೇಶವೇ ಬಡ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಜಿಲ್ಲೆ ರಾಜ್ಯ ಬಿಟ್ಟು ಎಲ್ಲೆಲ್ಲಿಗೂ ಕೂಲಿಗಾಗಿ ಅಲೆದಾಡುವುದು ಬೇಡ. ಏನಿದ್ದರೂ ತಮ್ಮ ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಅಥವಾ ತಮ್ಮ ಭೂಮಿಯಲ್ಲಿ ಕೃಷಿ ಅವಲಂಬಿತರಾಗಿ ದುಡಿದು ಸಂಪಾದಿಸಿ ಕೃಷಿ ಅಭಿವೃದ್ಧಿ ಮಾಡಿ ಋಣಮುಕ್ತ ಸತ್ಪ್ರಜೆಗಳಾಗಿ ಬಾಳಬೇಕೆಂಬುದೇ ಸರಕಾರದ ಮಹದಾಸೆಯಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿ ಜನರಿಗೆ ಸಹಕರಿಸಬೇಕೇ ಹೊರತು ಅಧಿಕಾರ ಪ್ರಯೋಗಿಸಿ ಜನರನ್ನು ಸವಲತ್ತುಗಳಿಂದ ವಂಚಿತರನ್ನಾಗಿ ಮಾಡಲು ಅಲ್ಲ ಎಂದು ಹೇಳಿದ ಅವರು ಅಧಿಕಾರಿಗಳು ಪ್ರಾಮಾಣಿಕ ನೆಲೆಯಲ್ಲಿ ಗ್ರಾ.ಪಂ.ಗೊಳಪಟ್ಟ ಪ್ರತಿಯೊಬ್ಬರ ಸ್ಥಳ ಹಾಗೂ ಅವರ ಸಂಕಷ್ಟಗಳನ್ನು ಅರಿತುಕೊಂಡು ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ ಧ್ಯೇಯವಾಗಿರಬೇಕು ಎಂದರು. ಇದಕ್ಕೆ ಉತ್ತರಿಸಿ ಮಾತನಾಡಿದ ನೋಡೆಲ್ ಅಧಿಕಾರಿ ರಾಜಣ್ಣನವರು ತಮ್ಮ ಬೇಡಿಕೆ ಹಾಗೂ ವಿಚಾರ ಸತ್ಯವಾಗಿದ್ದು ಸರಕಾರದ ಸ್ಪಷ್ಟ ನಿಲುವು ಇದೇ ಆಗಿದೆ ಎಂದ ಅವರು ಯಾವುದೇ ಅಧಿಕಾರಿ ಯಾ ಸಿಬ್ಬಂದಿಗಳಿಂದ ತೊಂದರೆ ಆಗಿದ್ದಲ್ಲಿ ಕೂಡಲೇ ನೇರವಾಗಿ ತನ್ನನ್ನು ಸಂಪರ್ಕಿಸಲು ಸೂಚಿಸಿದರು. ಉಪಾಧ್ಯಕ್ಷೆ ಭವಾನಿ ಕೊಪ್ಪ, ಸದಸ್ಯರಾದ ರಜಿತಾ ಪದ್ಮನಾಭ, ಕೆ.ಜೆ.ತೋಮಸ್, ಪುಷ್ಪಲತಾ, ರಾಮಚಂದ್ರ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ದಿನೇಶ್ ಸಾಲಿಯಾನ್ 2015-16ನೇ ಸಾಲಿನ ಎರಡನೇ ಹಂತದ ಕಾಮಗಾರಿಗಳ ವಿವರ ನೀಡಿದರು.

ಈ ಸಂದರ್ಭದಲ್ಲಿ ಹೊಸ ಬಿಪಿಎಲ್ ಫಲಾನುಭವಿಗಳಿಗೆ ಪಡಿತರ ಚೀಟಿ ಹಾಗೂ ವಸತಿ ಯೋಜನೆಯ ಸಾಲದ ಋಣಮುಕ್ತ ತಿಳುವಳಿಕೆ ಪತ್ರವನ್ನು ಅಧ್ಯಕ್ಷ ಪಿ.ಪಿ.ವರ್ಗೀಸ್‌ರವರು ಫಲಾನುಭವಿಗಳಿಗೆ ವಿತರಿಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.