ಏಕದೇವಾರಾಧನೆಯಿಂದ ಮನುಷ್ಯನ ಸಕಲ ಸಮಸ್ಯೆಗಳಿಗೆ ಪರಿಹಾರ: ಮುಜಾಹಿದ್ ಬಾಲುಶ್ಯೇರಿ

Puttur_Advt_NewsUnder_1
Puttur_Advt_NewsUnder_1

Salafi Kabaka Photoಪುತ್ತೂರು: ಕರ್ನಾಟಕ ಸಲಫಿ ಅಸೋಸಿಯೇಷನ್ ವತಿಯಿಂದ  ಜ.6 ರಂದು ಕಬಕದಲ್ಲಿ ಜರಗಿದ ಸಲಫಿ ಧಾರ್ಮಿಕ ಪ್ರವಚನದಲ್ಲಿ ವಾಗ್ಮಿ ಮುಜಾಹಿದ್ ಬಾಲುಶ್ಯೇರಿಯವರು “ಮಾನವರಲ್ಲಿ ಮಹೋನ್ನತರಾದ ಪ್ರವಾದಿ ಮುಹಮ್ಮದ್ (ಸ. ಅ.)” ಎಂಬ ವಿಷಯದಲ್ಲಿ ಪ್ರವಚನ ನೀಡಿದರು.

ಏಕದೇವಾರಾಧನೆ ಮನಷ್ಯನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮನಷ್ಯರು ಪರಸ್ಪರ ಅಸೂಯೆ, ವಂಚನೆ, ತಾರತಾಮ್ಯದಿಂದ ಬಾಳುವ ಈ ಕಾಲಘಟ್ಟದಲ್ಲಿ ಅದೆಲ್ಲವನ್ನು ಬಿಟ್ಟು ಐಕ್ಯ ಹಾಗೂ ಸೌಹಾರ್ದದಿಂದ ಇರಲು ಎಲ್ಲಾ ಧರ್ಮ ಗ್ರಂಥಗಳು(ಭಗವದ್ಗೀತೆ, ಬೈಬಲ್, ಕುರ್‌ಆನ್) ಸ್ಪಷ್ಟವಾಗಿ ಪ್ರದಿಪಾದಿಸಿದ ಏಕದೇವತ್ವವು ಪರಿಹಾರವಾಗಿದೆ ಎಂದು ಅವರು ಸಾರಿದರು. ಪ್ರವಾದಿ (ಸ. ಅ.) ರವರ ಹೆಸರಲ್ಲಿ ಮುಸ್ಲಿಂ ಸಮುದಾಯದಲ್ಲಿ ನಡೆಯುವ ಅನಾಚಾರವನ್ನು ವಿವರವಾಗಿ ಹೇಳುತ್ತಾ, ಇದುವೇ ಪ್ರವಾದಿ ಪ್ರೇಮವೆಂದು ನಂಬುವ ಈ ಸಮಯದಲ್ಲಿ ನಿಜವಾದ ಪ್ರವಾದಿ (ಸ. ಅ.) ಪ್ರೇಮವು ಅವರ ಚರ‍್ಯೆಯನ್ನು ಜೀವನದಲ್ಲಿ ಅಳವಡಿಸುವುದಾಗಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಸಹಸ್ರಾರು ಮಂದಿ ಭಾಗವಹಿಸಿದರು. ಶಾಕೀರ್ ಉಳ್ಳಾಲರವರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.