ವಿಟ್ಲದಲ್ಲಿ ವಿದ್ಯಾರ್ಥಿಗಳ ವಾಹನಗಳ ತಪಸಣಾ ಕಾರ್ಯಾಚರಣೆ

07vtl4 police rideವಿಟ್ಲ: ವಿಟ್ಲ ಪೊಲೀಸರ ನೇತೃತ್ವದಲ್ಲಿ ವಿದ್ಯಾರ್ಥಿಗಳ ವಾಹನಗಳ ತಪಾಸಣೆ ಕಾರ್ಯಾಚರಣೆ ವಿಟ್ಲದಲ್ಲಿ ಜ.7 ರಂದು ಆರಂಭವಾಗಿದ್ದು, 19 ಕೇಸು ದಾಖಲಿಸಿಕೊಳ್ಳುವ ಮೂಲಕ 9100 ರೂ ದಂಡ ಹಾಕಿ ಮೊದಲ ದಿನವೇ ಭರ್ಜರಿ ಕಾರ್ಯಾಚರಣೆ ನಡೆದಿದ್ದು, ಪರವಾನಿಗೆ ಇಲ್ಲದೇ ಬೇಕಾಬಿಟ್ಟಿಯಾಗಿ ವಾಹನ ಚಲಾವಣೆ ಮಾಡುವ ವಿದ್ಯಾರ್ಥಿಗಳಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಅವರ ಆದೇಶದ ಮೇರೆಗೆ ಚಾಲನಾ ಪರವಾನಿಗೆ ಇಲ್ಲದ ವಿದ್ಯಾರ್ಥಿಗಳಿಗೆ ವಿಟ್ಲ ಪೊಲೀಸ್ ಠಾಣೆಯ ಎಸೈ ಪ್ರಕಾಶ್ ದೇವಾಡಿಗ ನೇತೃತ್ವದಲ್ಲಿ ಸಂಜೆ ಸಮಯ ಕಾರ್ಯಾಚರಣೆ ಆರಂಭವಾಗಿತ್ತು. ವಿದ್ಯಾರ್ಥಿಗಳು ಹಾಗೂ ಚಾಲನಾ ಪರವಾನಿಗೆ ಇಲ್ಲದೆ ಬಂದವರಿಂದ ಸುಮಾರು 6 ಬೈಕ್‌ಗಳನ್ನು ವಶಕ್ಕೆ ಪಡೆಯಲಾಯಿತು.

ನ್ಯಾಯಾಲಯದ ಮೂಲಕ ಅಥವಾ ಸ್ಥಳದಲ್ಲೇ ದಂಡ ಪಾವತಿಸುವ ಅವಕಾಶಗಳನ್ನೂ ನೀಡಲಾಯಿತು. ಹೆಚ್ಚಿನವರು ಬೈಕ್ ನೀಡಿದ ವ್ಯಕ್ತಿಗಳನ್ನು ಕರೆ ತಂದು ದಂಡ ಪಾವತಿಸಿ ಬೈಕ್ ಪಡೆದುಕೊಂಡಿದ್ದಾರೆ. ಬೈಕ್ ನೀಡಿದ ವ್ಯಕ್ತಿಗೆ 1000 ರೂ ಹಾಗೂ ಪರವಾನಿಗೆ ಇಲ್ಲದ ವಿದ್ಯಾರ್ಥಿಗೆ 500 ರೂ ದಂಡ ವಿಧಿಸಲಾಯಿತು. ಹೀಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕೆಲವೊಬ್ಬರು ಒಳ ರಸ್ತೆಗಳನ್ನು ಬಳಸಿಕೊಂಡು ಪಲಾಯನಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.