Breaking News

ವಿಟ್ಲ : ಟಿಪ್ಪರ್ ಲಾರಿ ಮತ್ತು ತೂಫಾನ್ ಜೀಪು ಡಿಕ್ಕಿ

Puttur_Advt_NewsUnder_1
Puttur_Advt_NewsUnder_1

07vtl2 accidnt

07vtl3 accidnt

ವಿಟ್ಲ: ಟಿಪ್ಪರ್ ಲಾರಿ ಮತ್ತು ತೂಫಾನ್ ಜೀಪು ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಲಾರಿ ರಸ್ತೆಯಲ್ಲಿ ಉರುಳಿ ಬಿದ್ದು, ತೂಫಾನ್ ಚಾಲಕನಿಗೆ ಗಂಭೀರ ಗಾಯಗೊಂಡ ಘಟನೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ಜ.6 ರಂದು  ತಡರಾತ್ರಿ ನಡೆದಿದೆ.

ಮಹಾರಾಷ್ಟ್ರ ಮೂಲದ ಮುಕ್ರಮಾಬಾದ್ ನಿವಾಸಿ ತೂಫಾನ್ ಚಾಲಕ ಭಜರಂಗ (27 ವ) ಗಾಯಗೊಂಡವರಾಗಿದ್ದಾರೆ. ಹೈದರಾಬಾದ್ ಮೂಲದ ರೇಗ್ಲೂರ್ ನಿವಾಸಿಗಳಾದ ಶಮರಿಮಲೆ ಮಾಲೆ ಧಾರಿಗಳು ಧರ್ಮಸ್ಥಳದಿಂದ ಶಬರಿಮಲೆಗೆ ತೆರಳುತ್ತಿದ್ದವರು ತೂಫಾನ್‌ನಲ್ಲಿ ಪ್ರಯಾಣಿಸುತ್ತಿದ್ದರು.

ಇವರು ಸರಿಯಾದ ಮಾರ್ಗದ ಅರಿವಿಲ್ಲದೆ ಪುತ್ತೂರು ರಸ್ತೆಯಲ್ಲಿ ಬಂದು ವಿಟ್ಲದಲ್ಲಿ ಕಾಸರಗೋಡು ಕಡೆ ತಿರುಗುವ ಸಾಲೆತ್ತೂರು ರಸ್ತೆಯಲ್ಲಿ ಚಲಿಸಲು ಮುಂದಾದಾಗ ಕಾಸರಗೋಡು ಕಡೆಯಿಂದ ಒಕ್ಕೆತ್ತೂರಿಗೆ ಹೋಗುತ್ತಿದ್ದ ಟಿಪ್ಪರ್‌ನ ಹಿಂಭಾಗದ ಚಕ್ರಕ್ಕೆ ಡಿಕ್ಕಿಯಾಗಿದೆ. ಇದರಿಂದ ತೂಫಾನ್‌ನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ಚಕ್ರಗಳೂ ಕಿತ್ತು ಬಂದಿದೆ. ಟಿಪ್ಪರ್ ಲಾರಿ ವೇಗವಾಗಿದ್ದ ಕಾರಣ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಉರುಳಿ ಬಿದ್ದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ ಮಧ್ಯೆರಾತ್ರಿಯೇ ವಾಹನಗಳ ತೆರವು ಕಾರ್ಯ ನಡೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.