ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ ಕಾರ್ಯಕ್ರಮದಲ್ಲಿ ರಂಜಿಸಿದ ಕನ್ನಡ ಡಿಂಡಿಮ-288

Puttur_Advt_NewsUnder_1
Puttur_Advt_NewsUnder_1

5ಪುತ್ತೂರು: ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಪುತ್ತೂರು ಇವರಿಂದ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘದ 2015-16ನೇ ಸಾಲಿನ ಮಹಾಸಭೆ ಹಾಗೂ ಮತ್ತಿತರ ಕಾರ್ಯಕ್ರಮದಲ್ಲಿ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಚಿದಾನಂದ ಕಾಮತ್ ಕಾಸರಗೋಡು ನಿರ್ದೇಶನದ ಧ್ವನಿ ಮುದ್ರಿತ ವಾದ್ಯ ಸಂಗೀತದೊಂದಿಗೆ ಬಾರಿಸು ಕನ್ನಡ ಡಿಂಡಿಮವ ಕಾರ್ಯಕ್ರಮದ 288ನೇ ಪ್ರದರ್ಶನ ಕನ್ನಡ ಭಕ್ತಿ ಭಾವಗಾನ ನೃತ್ಯ ವೈಭವದೊಂದಿಗೆ ಜ 2ರಂದು ಪುರಭವನದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ರೋಶನ್ ಶರೀಫ್ ದರ್ಬೆ, ಅಶ್ವಿನಿ ಪೈ ಪರ್ಲಡ್ಕ, ವೈಷ್ಣವಿ ಅನ್ಯಾಡಿ, ಸಮೃದ್ಧಿ ಜೆ ಶೆಟ್ಟಿ ಕೆಮ್ಮಾಯಿ, ಧೃತಿ ಕೊಡಿಪ್ಪಾಡಿ, ಮನೀಷಾ ಕೊಡಿಪ್ಪಾಡಿ, ಅನುಶ್ರೀ ಸಾಮೆತ್ತಡ್ಕ, ಪ್ರಜ್ಞಾ ಎಸ್ ಕೆ ಪಂಜಳ, ಶ್ರೀಜಲ್ ಜೆ ಪೂಜಾರಿ ಕೆಮ್ಮಾಯಿ, ಸಮೃದ್ಧಿ ಶೆಣೈ ಕೆಮ್ಮಿಂಜೆ, ಕೃತಿಕಾ ಜೆ ಆರ್ ಐತಾಳ್, ಶಮಾ ಪರ್ವಿನ್ ತಾಜ್, ಭಾಗವಹಿಸಿದರು. ಮಕ್ಕಳೊಂದಿಗೆ ಹಿರಿಯ ಗಾಯಕ ಅಶೋಕ ಆಚಾರ್ಯ ಪುತ್ತೂರು ಹಾಡಿ ರಂಜಿಸಿದರು. ಪ್ರಸಾದನದಲ್ಲಿ ಹರಿಣಾಕ್ಷಿ ಜೆ ಶೆಟ್ಟಿ ಕೆಮ್ಮಾಯಿ, ಶೀಲಾ ಜಯರಾಮ್ ಕೆಮ್ಮಾಯಿ, ಪ್ರೇಮಾ ಡಿ ನಾಯ್ಕ್ ಸಾಮೆತ್ತಡ್ಕ, ಫಾತಿಮಾ ಶರೀಫ್ ದರ್ಬೆ ಸಹಕರಿಸಿದರೆ ನೇಪಥ್ಯದಲ್ಲಿ ಸುನೀತಾ ಕೃಷ್ಣಪ್ಪ ಕೊಡಿಪ್ಪಾಡಿ, ಕುಸುಮಾ ಹರೀಶ್ ದರ್ಬೆ, ಆಶಾಲತಾ ಯು ಪೈ ಮೊಟ್ಟೆತ್ತಡ್ಕ ಸಹಕರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಅರಣ್ಯಾಧಿಕಾರಿ ಕೆ. ಕೃಷ್ಣಪ್ಪ ಅವರು ಚಿದಾನಂದ ಕಾಮತ್‌ರನ್ನು ಗೌರವಿಸಿ, ಡಿಂಡಿಮ ಪ್ರತಿಭೆಗಳನ್ನು ಅಭಿನಂದಿಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.