ಕಬಕ ಗ್ರಾ.ಪಂ. ಸಾಮಾನ್ಯ ಸಭೆ; ಸುದ್ದಿ ವೇದಿಕೆಯ ಆಂದೋಲನಕ್ಕೆ ಬೆಂಬಲ ಬಲತ್ಕಾರದ ಬಂದ್ ವಿರೋಧಿಸಿ ನಿರ್ಣಯ

Puttur_Advt_NewsUnder_1
Puttur_Advt_NewsUnder_1

6ಪುತ್ತೂರು: ಸುದ್ದಿ ವೇದಿಕೆ ಹಮ್ಮಿಕೊಂಡಿರುವ ಬಲಾತ್ಕಾರದ ಬಂದ್ ವಿರೋಧಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ಹಾಗೂ ಬಲತ್ಕಾರದ ಬಂದ್‌ಗಳನ್ನು ವಿರೋಧಿಸಿ ಕಬಕ ಗ್ರಾ.ಪಂ. ಸಾಮಾನ್ಯ ಸಭೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ.
ಸಭೆಯು ಜ.೫ರಂದು ಅಧ್ಯಕ್ಷೆ ಪ್ರೀತಾರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಪಿಡಿಓ ಆಶಾ ಇ. ರವರು ಸುದ್ದಿ ವೇದಿಕೆ ಹಮ್ಮಿಕೊಂಡಿರುವ ಬಲಾತ್ಕಾರದ ಬಂದ್ ವಿರೋಧಿ ಆಂದೋಲನದ ಮನವಿ ಪತ್ರವನ್ನು ಸಭೆಯಲ್ಲಿ ಮಂಡಿಸಿದರು. ಪ್ರತಿಕ್ರಿಯಿಸಿದ ಶಾಬಾ ಮತ್ತು ವಿನಯ ಮತ್ತು ಪ್ರಶಾಂತ್‌ರವರು, ಬಲಾತ್ಕಾರದ ಬಂದ್‌ಗೆ ನಮ್ಮ ವಿರೋಧವಿದೆ. ಬಂದ್ ಸಂದರ್ಭದಲ್ಲಿ ಆಗುವ ಕಷ್ಟ ನಷ್ಟಗಳಿಗೆ ಬಂದ್‌ಗೆ ಕರೆ ಕೊಡುವವರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಅವರಿಂದಲೇ ನಷ್ಟವನ್ನು ಭರಿಸಬೇಕು ಎಂದು ಹೇಳಿದರು. ಇದಕ್ಕೆ ಇತರ ಸದಸ್ಯರು ಸಹಮತ ಸೂಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಕಲ್ಲೇಗ-ಶೇವಿರೆ ರಸ್ತೆಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಂಕ್ರಿಟೀಕರಣಗೊಳಿಸುವುದು, ಮನೆ ತೆರಿಗೆ ಪರಿಷ್ಕರಣೆ ಬಗ್ಗೆ ಪತ್ರಿಕೆಯಲ್ಲಿ ಪ್ರಕಟಿಸುವುದು, ಮಕ್ಕಳ ಗ್ರಾಮ ಸಭೆ ನಡೆಸುವುದು, ಖಾಲಿಯಾಗಿರುವ ಪಂಚಾಯತ್ ಜವಾನ ಹುದ್ದೆಯನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಲು ಪ್ರಕಟಣೆ ನೀಡುವುದು ಎಂದು ನಿರ್ಣಯಿಸಲಾಯಿತು. ೧೪ನೇ ಹಣಕಾಸಿನ ಯೋಜನೆಯ ಕ್ರಿಯಾ ಯೋಜನೆ ತಯಾರಿಸಲಾಯಿತು. ಆರೋಗ್ಯ ಇಲಾಖೆಯ ಮಾಹಿತಿ ನೀಡಿದ ಆರೋಗ್ಯ ಸಹಾಯಕಿ ಶೊಭಾರವರು, ಜ.೧೭ ಮತ್ತುಫೆಬ್ರವರಿ ೨೨ರಂದು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್‍ಯಕ್ರಮ ನಡೆಯಲಿದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು. ಕಬಕ ಅಂಗನವಾಡಿಯಲ್ಲಿ ೩೫ ಮಕ್ಕಳಿದ್ದು, ಅಲ್ಲಿ ಜಾಗದ ಕೊರತೆಯಿದೆ ಎಂದು ಕಾರ್‍ಯಕರ್ತೆ ರಾಜೇಶ್ವರಿಯವರು ಸಭೆಯ ಗಮನ ಸೆಳೆದರು. ಕಬಕಕ್ಕೆ ೧೦೮ ಆಂಬುಲೆನ್ಸ್ ಬೇಕು ಎಂದು ಸದಸ್ಯರು ಬೇಡಿಕೆ ಮಂಡಿಸಿದರು. ಈ ಬಗ್ಗೆ ಆರೋಗ್ಯ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.
ಮಂಗಳೂರು ಪಡಿ ಸಂಸ್ಥೆಯ ತಾಲೂಕು ಸಂಯೋಜಕಿ ರಶ್ಮಿತಾರವರು ಮಾತನಾಡಿ, ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಎಸ್‌ಡಿಎಂಸಿಯಿಂದ ಪ್ರತಿ ತಿಂಗಳು ವರದಿ ಪಡೆದುಕೊಳ್ಳಬೇಕೆಂದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಶಂಕರಿ ಉಪಸ್ಥಿತರಿದ್ದರು. ಸದಸ್ಯರಾದ ಭಾನುಮತಿ, ವಿಠಲ ಗೌಡ, ಮಾಲತಿ, ಬಾಲಕೃಷ್ಣ ಗೌಡ, ರೂಪ ಬಿ., ಮೋಹನ ಪಿ, ಹರಿಣಾಕ್ಷಿ,, ಆಶಾ ಕಾರ್ಯಕರ್ತೆ ವಾಣಿ ಹಾಜರಿದ್ದರು. ಪಿಡಿಓ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.