Breaking News

ಪಡುಮಲೆ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ನೂತನ ಆಡಳಿತಾಧಿಕಾರಿಗೆ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪಡುಮಲೆ ಕೂವೆಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತವನ್ನು ನುತನ ಆಡಳಿತಾಧಿಕಾರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪಡುಮಲೆ ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧಿಕಾರವಧಿ ಕೊನೆಗೊಂಡಿದ್ದು, ಇಲಾಖೆ ದೇವಸ್ಥಾನಕ್ಕೆ ಬಡಗನ್ನೂರು ಗ್ರಾ.ಪಂ. ಪಿಡಿಓ ಶಾರದಾರವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಆದರೆ ಆಡಳಿತಾಧಿಕಾರಿ ನೇಮಕವಾಗಿ ತಿಂಗಳುಗಳು ಕಳೆದರೂ ವ್ಯವಸ್ಥಾಪನಾ ಸಮಿತಿ ಅವರಿಗೆ ಅಧಿಕಾರ ಹಸ್ತಾಂತರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಹಿಂದೆ ಧಾರ್ಮಿಕ ದತ್ತಿ ಇಲಾಖೆಯ ಇನ್ಸ್‌ಪೆಕ್ಟರ್ ಸುಧಾಕರ ಅವರು ದೇವಸ್ಥಾನಕ್ಕೆ ಆಗಮಿಸಿ ಇಲಾಖೆ ನಿಯಮದಂತೆ ಆಡಳಿತಾಧಿಕಾರಿಯವರಿಗೆ ಅಧಿಕಾರ ಹಸ್ತಾಂತರಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಆಡಳಿತಾಧಿಕಾರಿ ನೇಮಕಗೊಳಿಸಿದ್ದ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ವ್ಯವಸ್ಥಾಪನಾ ಸಮಿತಿಯವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ  ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಆಡಳಿತಾಧಿಕಾರಿ ನೇಮಕಕ್ಕೆ ತಡೆಯಾಜ್ಞೆ ನೀಡಿತ್ತು. ಇದೀಗ ತಡೆಯಾಜ್ಞೆ ತೆರವಾದ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಇನ್ಸ್‌ಪೆಕ್ಟರ್ ಸುಧಾಕರ ಅವರು ಜ.೬ರಂದು ದೇವಸ್ಥಾನಕ್ಕೆ ತೆರಳಿ ನೂತನ ಆಡಳಿತಾಧಿಕಾರಿ, ಪಡುವನ್ನೂರು ಗ್ರಾಮಕರಣಿಕರಾದ ರವಿಯವರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರ ತೆಗೆದುಕೊಂಡಿದ್ದೇನೆರವಿ

 ಈ ಬಗ್ಗೆ ಆಡಳಿತಾಧಿಕಾರಿ ರವಿ ಅವರನ್ನು ಸಂಪರ್ಕಿಸಿದಾಗ, ‘ನಾನು ಜ.೬ರಂದು ಅಧಿಕಾರ ಸ್ವೀಕರಿಸಿದ್ದೇನೆ. ಧಾರ್ಮಿಕ ಇಲಾಖೆಯ ಇನ್ಸ್‌ಪೆಕ್ಟರ್ ಸುಧಾಕರ್‌ವರು ದೇವಸ್ಥಾನಕ್ಕೆ ಆಗಮಿಸಿ ನನಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಇದೇ ವೇಳೆ ಬೆಂಗಳೂರಿನಿಂದ ನ್ಯಾಯವಾದಿಯೊಬ್ಬರು ಇನ್ಸ್‌ಪೆಕ್ಟರ್‌ರವರಿಗೆ ಫೋನ್ ಮಾಡಿ  ಆಡಳಿತಾಧಿಕಾರಿ ನೇಮಕ ಆದೇಶಕ್ಕೆ ನ್ಯಾಯಾಲಯದಿಂದ ತೆಡೆಯಾಜ್ಞೆ ಸಿಕ್ಕಿರುವುದಾಗಿ ಹೇಳಿದ್ದರಿಂದ ಬಳಿಕ ಯಾವುದೇ ವಿಚಾರದಲ್ಲಿ ಮುಂದುವರಿಯದೆ ಹಿಂತಿರುಗಿದ್ದೇವೆ ಎಂದು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.