ಮುಂಡೂರು ಗ್ರಾ.ಪಂ. ಸಾಮಾನ್ಯ ಸಭೆ; 94ಸಿ ನಿಯಮ ಸಡಿಲಗೊಳಿಸಲು ಡಿ.ಸಿ.ಗೆ ಬರೆಯಲು ನಿರ್ಣಯ ಬಲಾತ್ಕಾರದ ಬಂದ್ ಬೇಡ; ಸುದ್ದಿ ಆಂದೋಲನ ಬೆಂಬಲಿಸಿ-ನಿರ್ಣಯ

Puttur_Advt_NewsUnder_1
Puttur_Advt_NewsUnder_1

8ನರಿಮೊಗರು: ಮುಂಡೂರು ಗ್ರಾ.ಪಂ.ನ ಸಾಮಾನ್ಯ ಸಭೆ ಜ.೫ರಂದು ಗ್ರಾ.ಪಂ. ಅಧ್ಯಕ್ಷ ಎಸ್.ಡಿ. ವಸಂತರವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣ ದಲ್ಲಿ ನಡೆಯಿತು.

94ಸಿ ನಿಯಮ ಸಡಿಲಗೊಳಿಸಲು ಡಿ.ಸಿ.ಗೆ ಬರೆಯಬೇಕು: 94ಸಿ ಯಡಿ ಅಡಿಸ್ಥಳ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ ಕೆಲವರಿಗೆ ಇನ್ನೂ ಮಂಜೂರಾತಿ ಆದೇಶ ಸಿಕ್ಕಿಲ್ಲ. ಕೆಲವರಿಗೆ ಬಿಗಿ ನಿಯಮದಿಂದ ಸಮಸ್ಯೆ ಆಗುತ್ತಿದೆ. ಇದರಿಂದ ಅರ್ಹರೂ ಸಂಕಷ್ಟ ಎದುರಿಸುವಂತಾಗಿದೆ ಎಂದು ಸದಸ್ಯ ರಾಮಚಂದ್ರ ಸೊರಕೆರವರು ಹೇಳಿದರು. ೯೪ಸಿ ಯಿಂದಾಗಿ ಬಡವರಿಗೆ ಅನುಕೂಲ ವಾಗಲಿದೆ. ಯಾರೊಬ್ಬರೂ ಬಡವರ ಜೀವನದಲ್ಲಿ ಆಟವಾಡಬಾರದು. ೯೪ಸಿ ಯಡಿ ಹಕ್ಕುಪತ್ರ ವಿತರಣೆಗೆ ತಾಲೂಕು ಕಛೇರಿ ವಿಳಂಬ ಮಾಡುತ್ತಿದೆ. ಈ ಬಗ್ಗೆ ಯಾರಲ್ಲಿ ಹೇಳಿಯೂ ಪ್ರಯೋಜನವಾಗುತ್ತಿಲ್ಲ.94ಸಿ ನಿಯಮಗಳನ್ನು ಸಡಿಲಗೊಳಿಸಲು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗುವುದು. ಈ ಬಗ್ಗೆ ನಿರ್ಣಯ ಮಾಡಿ ಕಳುಹಿಸೋಣ. ಅಗತ್ಯ ಬಿದ್ದರೆ ನಿಯೋಗ ತೆರಳೋಣ ಎಂದು ಅಧ್ಯಕ್ಷರು ಹೇಳಿದರು.
ಎನ್‌ಆರ್‌ಇಜಿಯಲ್ಲಿ ಕಾಮಗಾರಿ ಯಾಕೆ ಆಗುತ್ತಿಲ್ಲ? ಉದ್ಯೋಗ ಖಾತ್ರಿ ಯೋಜನೆಯಡಿ ಸರ್ವೆ, ಮುಂಡೂರು ಪ್ರದೇಶಗಳಲ್ಲಿ ರಸ್ತೆ, ಕಾಲುಸಂಕ ಇತ್ಯಾದಿ ಕಾಮಗಾರಿಗಳು ಯಾಕೆ ನಡೆಯುತ್ತಿಲ್ಲ ಎಂದು ಶಿವನಾಥ ರೈ ಮೇಗಿನಗುತ್ತುರವರು ಪ್ರಶ್ನಿಸಿದರು. ವೈಯಕ್ತಿಕ ಕಾಮಗಾರಿಗಳನ್ನು ನಡೆಸಲಾಗುವುದಿಲ್ಲ ಎಂದು ಪಿಡಿಓ ಸುಜಾತರವರು ಹೇಳಿದರು. ಕೇವಲ ಕ್ರಿಯಾ ಯೋಜನೆ ಮಾತ್ರ ಮಾಡಿದರೆ ಏನು ಪ್ರಯೋಜನ ಎಂದು ಶಿವನಾಥ ರೈರವರು ಪ್ರಶ್ನಿಸಿದರು. ಎನ್‌ಆರ್‌ಇಜಿ ಯೋಜನೆಗೆ ಅವರದ್ದೇ ಆದ ನಿಯಮಗಳಿವೆ. ನಿಯಮ ಮೀರಿ ಕಾಮಗಾರಿ ಮಾಡಲು ಆಗುವುದಿಲ್ಲ. ಯಾರೋ ಒಬ್ಬರು ಸದಸ್ಯರು ಹೇಳಿದ ಮಾತ್ರಕ್ಕೆ ಕೆಲಸ ಮಾಡಲೂ ಆಗುವುದಿಲ್ಲ. ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗುತ್ತದೆ. ಒಟ್ಟಾರೆ ಕೆಲಸ ಮಾಡಿದ್ರೆ ಹಣ ಎಲ್ಲಿಂದ ಕೊಡೋದು ಎಂದು ಅಧ್ಯಕ್ಷರು ಹೇಳಿದರು. ಊರಿನ ಕೆಲಸ ಮಾಡಿ ಅಂತ ನಾನು ಹೇಳಿದ್ದು. ಹಣ ಸರಕಾರ ಕೊಡುತ್ತದೆ ಅಲ್ಲವೇ ಎಂದು ಶಿವನಾಥ ರೈರವರು ಹೇಳಿದರು.
ಗ್ರಾ.ಪಂ. ನಿರ್ಣಯಕ್ಕೆ ಬೆಲೆ ಇಲ್ಲವೇ?: ಗ್ರಾ.ಪಂ.ನಲ್ಲಿ ಏನಾದರೂ ನಿರ್ಣಯ ಮಾಡಿ ಬೇರೆ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ಕಳುಹಿಸಿದ್ರೆ ಅದಕ್ಕೆ ಉತ್ತರ ಬರುವುದಿಲ್ಲ. ಹಾಗಾದ್ರೆ ಗ್ರಾ.ಪಂ. ನಿರ್ಣಯಕ್ಕೆ ಬೆಲೆಯೇ ಇಲ್ಲವೇ ಎಂದು ಎಸ್.ಡಿ. ವಸಂತರವರು ಹೇಳಿದರು. ಮುಂದೆ ಗ್ರಾ.ಪಂ.ನ ಸಾಮಾನ್ಯ ಸಭೆ ನಡೆಸದೇ ಇದನ್ನು ಪ್ರತಿಭಟಿಸಬೇಕು ಎಂದು ಸದಸ್ಯ ಬಾಬು ಕಲ್ಲಗುಡ್ಡೆರವರು ಹೇಳಿದರು. ಈ ಸಮಸ್ಯೆ ಬಗ್ಗೆ ಪತ್ರಿಕಾಗೋಷ್ಟಿ ಕರೆಯಬೇಕು ಎಂದು ಎಸ್.ಡಿ. ವಸಂತರವರು ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಸೌಮ್ಯಾ ಆರ್. ಕಂಬಳಿ, ಕಾರ್ಯದರ್ಶಿ ಶಾಲಿನಿರವರು ಉಪಸ್ಥಿತರಿದ್ದರು. ಸಭೆಯಲ್ಲಿ ಸದಸ್ಯರು ಗಳಾದ ಹೊನ್ನಮ್ಮ ತೌಡಿಂಜ, ಶೀನಪ್ಪ ನಾಯ್ಕ, ಪ್ರೇಮಲತಾ, ಸೀತಾ, ಕುಸುಮಾವತಿ, ಗೀತಾ ಮೋಹನ್, ಮೀನಾಕ್ಷಿ, ಉದಯ ರೈ, ಹಂಝ, ಸ್ವಾತಿ ಜನಾರ್ದನ್‌ರವರು ಉಪಸ್ಥಿತರಿದ್ದರು.

ಬಲಾತ್ಕಾರದ ಬಂದ್ ಬೇಡ: ಬಲಾತ್ಕಾರದ ಬಂದ್ ವಿರುದ್ಧ ‘ಸುದ್ದಿ ವೇದಿಕೆ’ ಆಂದೋಲನ ನಡೆಸುತ್ತಿದೆ. ಇದಕ್ಕೆ ನಾವು ಬೆಂಬಲ ಸೂಚಿಸಬೇಕು. ಬಲಾತ್ಕಾರದ ಬಂದ್ ಬೇಡ. ಸಾಂಕೇತಿಕವಾಗಿ ಪ್ರಟಿಭಟನೆ ಮಾಡಲಿ ಎಂದು ಅಧ್ಯಕ್ಷರು ಹೇಳಿದರು. ಸದಸ್ಯ ರಾಮಚಂದ್ರ ಸೊರಕೆ ಧ್ವನಿಗೂಡಿಸಿದರು. ಜನಸಾಮಾನ್ಯರಿಗೆ ತೊಂದರೆ ಕೊಡುವ ಬಂದ್ ಬೇಡ ಎಂದು ಸದಸ್ಯ ಶಿವನಾಥ ರೈ ಮೇಗಿನಗುತ್ತುರವರು ಹೇಳಿದರು. ನಿರ್ದಿಷ್ಟ ಕಾರಣಗಳಿಗಾಗಿ ಸಂಘಟನೆಗಳು ಬಂದ್‌ಗೆ ಕರೆ ನೀಡಿದರೆ ಬಂದ್‌ಗೆ ಬೆಂಬಲ ನೀಡಬೇಕು ಎಂದು ಸದಸ್ಯ ಅಶೋಕ್ ಕುಮಾರ್ ಪುತ್ತಿಲರವರು ಹೇಳಿದರು. ಬಂದ್ ಕೆಲವು ಸಂದರ್ಭ ಗಳಲ್ಲಿ ಬೇಕು ಎಂದು ಸದಸ್ಯ ಬಾಲಕೃಷ್ಣ ಪೂಜಾರಿರವರು ಹೇಳಿದರು. ಬಲಾ ತ್ಕಾರದ ಬಂದ್‌ನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.