ಜ.9 : ಪುತ್ತೂರಿನ  ಕೆಎಸ್‌ಆರ್‌ಟಿಸಿ ಹೈ-ಟೆಕ್ ಬಸ್ ನಿಲ್ದಾಣ ಲೋಕಾರ್ಪಣೆ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿರವರಿಂದ ಉದ್ಘಾಟನೆ-ಹಲವು ಗಣ್ಯರ ಆಗಮನ

Puttur_Advt_NewsUnder_1
Puttur_Advt_NewsUnder_1

bus standವರದಿ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಹಲವು ಸಮಯಗಳಿಂದ ಉದ್ಘಾಟನೆಗೆ ದಿನಗಣನೆ ಎಣಿಸುತ್ತಿದ್ದ ಪುತ್ತೂರಿನ ಸುಂದರ, ಸುಸಜ್ಜಿತ, ಹೈ-ಟೆಕ್ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ಹಾಗೂ ವಿಭಾಗೀಯ ಕಚೇರಿ ಮತ್ತು ವಿಭಾಗೀಯ ಕಾರ್ಯಾಗಾರದ ಉದ್ಘಾಟನೆಗೆ ಕೊನೆಗೂ ದಿನ ನಿಗದಿಯಾಗಿದೆ.  ಜ.9ರಂದು ಬಸ್‌ನಿಲ್ದಾಣ ಲೋಕಾರ್ಪಣೆಗೊಳ್ಳಲಿದೆ. ಹೊಸ ವರ್ಷಕ್ಕೆ ಪುತ್ತೂರಿಗೆ ದೊಡ್ಡ ಕೊಡುಗೆಯೆನಿಸಲಿರುವ ಈ ಬಸ್‌ನಿಲ್ದಾಣವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿರವರು ಉದ್ಘಾಟಿಸಲಿದ್ದಾರೆ. ಸುಮಾರು 33 ಕೋಟಿ ರೂ. ವೆಚ್ಚದಲ್ಲಿ ಹಿಂದೂಸ್ಥಾನ್ ಪ್ರಮೋಟರ‍್ಸ್  ಮತ್ತು ಡೆವಲಪರ‍್ಸ್ ಪ್ರೈ.ಲಿಮಿಟೆಡ್ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಪುತ್ತೂರು ವಿಭಾಗದ ಸಹಭಾಗಿತ್ವದಲ್ಲಿ ಸುಂದರವಾಗಿ ಮತ್ತು ಸುವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಈ ಬಸ್‌ನಿಲ್ದಾಣ ಜಿಲ್ಲೆಯಲ್ಲೇ  ಪ್ರಥಮವಾಗಿದ್ದು ಇದು ಪುತ್ತೂರಿನ ಜನತೆಗೆ ಹರ್ಷದಾಯಕವಾಗಿದ್ದು, ಬೆಳೆಯುತ್ತಿರುವ  ಪುತ್ತೂರಿಗೆ ಇದು ಶೋಭೆಯೆನಿಸಿದೆ.

ಗಣ್ಯರ ದಂಡೇ ಪುತ್ತೂರಿಗೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿರವರು ನೂತನ ಬಸ್‌ನಿಲ್ದಾಣವನ್ನು ಉದ್ಘಾಟಿಸಲಿದ್ದು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಬಿ.ರಮಾನಾಥ ರೈರವರು ದೀಪ ಬೆಳಗಿಸಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರರವರ ಉಪಸ್ಥಿತಿಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜ್ಯ ಸಂಸದೀಯ ಕಾರ್ಯದರ್ಶಿ, ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್.ಅಂಗಾರ, ಬೆಳ್ತಂಗಡಿ ಶಾಸಕ ಕೆ.ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿ’ಸೋಜ, ಕೋಟ ಶ್ರೀನಿವಾಸ್ ಪೂಜಾರಿ, ಪ್ರತಾಪ್‌ಚಂದ್ರ ಶೆಟ್ಟಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಡಾ|ಲೋಹಿತ್ ಡಿ.ನಾಯ್ಕ, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೆಟ್ಟ ಈಶ್ವರ ಭಟ್, ತಾಲೂಕು ಪಂಚಾಯತ್ ಅಧ್ಯಕ್ಷೆ ಪುಲಸ್ತ್ಯ ರೈ, ಸ್ಥಳೀಯ ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ವಾರ್ಡ್ ೨೫ರ ನಗರಸಭಾ ಸದಸ್ಯೆ ಬಿ.ಶೈಲಾ ಪೈರವರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದರ್ ಕುಮಾರ ಕಟಾರಿಯಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಆಹ್ವಾನಿತರು: ರಾಜ್ಯ ಸರಕಾರದ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ|ಇ.ವಿ.ರಮಣ ರೆಡ್ಡಿ, ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ|ಶರಣಪ್ಪ ಎಸ್.ಡಿ.ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

27 ಬಸ್ ನಿಲುಗಡೆಗೆ ಅವಕಾಶ: ಒಟ್ಟು 2.98 ಎಕರೆ ಭೂಮಿಯಲ್ಲಿ 33 ಕೋಟಿ ರೂಪಾಯಿ ವೆಚ್ಚದಲ್ಲಿ ಪುತ್ತೂರಿನಲ್ಲಿ ಪಿ.ಪಿ.ಪಿ. ಯೋಜನೆಯಲ್ಲಿ 2.40 ಎಕರೆ ವಿಸ್ತೀರ್ಣದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು ಏಕಕಾಲದಲ್ಲಿ ಒಟ್ಟು 27 ಬಸ್ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಸೌಲಭ್ಯಗಳು: ಬಸ್ ನಿಲ್ದಾಣವು ಮೂರು ಎ,ಬಿ,ಸಿ ವಿಭಾಗಗಳನ್ನು ಹೊಂದಿದ್ದು ಮೊದಲನೇ ‘ಎ’ ಮತ್ತು ಎರಡನೇ ‘ಬಿ’ ವಿಭಾಗದಲ್ಲಿ ಬಸ್ ನಿಲ್ದಾಣದ ಆಡಳಿತ ಕಚೇರಿ, ಅವಶ್ಯಕ ವಾಣಿಜ್ಯ ಮಳಿಗೆ,  ಸಂಚಾರಿ ನಿಯಂತ್ರಕರ ಕೊಠಡಿ, ಆರಕ್ಷಕ ಕೊಠಡಿ, ಮಹಿಳಾ ಪ್ರಯಾಣಿಕರ ತಂಗುದಾಣ, ಮುಂಗಡ ಟಿಕೆಟ್ ಬುಕ್ಕಿಂಗ್, ಲಗೇಜ್ ಕೊಠಡಿ, ಮಾಹಿತಿ ಮತ್ತು ವಿಚಾರಣೆ ಕೇಂದ್ರ, ಮಹಿಳೆಯರಿಗೆ, ಪುರುಷರಿಗೆ, ವಿಕಲಚೇತನರಿಗೆ ಶೌಚಾಲಯ ವ್ಯವಸ್ಥೆ, ಚಾಲಕ-ನಿರ್ವಾಹಕರ ವಿಶ್ರಾಂತಿ ಗೃಹ, ವಿಕಲಚೇತನರ ರ‍್ಯಾಂಪ್, ದ್ವಿಚಕ್ರ ಮತ್ತು ಕಾರುಗಳ ವಿಶಾಲವಾದ ಪಾರ್ಕಿಂಗ್, ಲಿಫ್ಟ್ ಸೌಲಭ್ಯ, ಸಿಸಿ ಕ್ಯಾಮೆರಾ, ಮಾಹಿತಿ ಫಲಕ, ಎರಡು ಬೋರ್‌ವೆಲ್‌ನ ವ್ಯವಸ್ಥೆ, ಮಾರ್ಗ ಸೂಚನಾ ಫಲಕ, ಸ್ವಯಂಚಾಲಿತ ಧ್ವನಿಮುದ್ರಿತ ಉದ್ಘೋಷಣಾ ವ್ಯವಸ್ಥೆ, ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, ಆಧುನಿಕ ಸೌಲಭ್ಯವುಳ್ಳ ವಸತಿ ಗೃಹ, ಜಲಶುದ್ದೀಕರಣ ಘಟಕ, ಪ್ರಯಾಣಿಕರ ಪ್ರವೇಶ ದ್ವಾರ, ಶುದ್ಧ ಕುಡಿಯುವ ನೀರು, ವಿದ್ಯುತ್‌ಜನಕ ಸೌಲಭ್ಯ, ಒಂದು ಲಕ್ಷ ಲೀ. ಸಾಮರ್ಥ್ಯದ ನೆಲಮಟ್ಟದ ನೀರಿನ ಟ್ಯಾಂಕ್, ೬೩೦ ಕಿಲೋ ವ್ಯಾಟ್ ವಿದ್ಯುತ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್, ಸ್ನಾನ ಗೃಹ, ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್‌ಗಳು, ಮೂರು ಸ್ಟೇರ್‌ಗೇಸ್‌ಗಳು, ಮಾತ್ರವಲ್ಲದೆ  ಮೆಡಿಕಲ್ ವ್ಯವಸ್ಥೆಯೂ ಬರಲಿದೆ ಮತ್ತು ‘ಸಿ’ ವಿಭಾಗದಲ್ಲಿ ಬಹುದ್ಧೇಶಿತ ವಾಣಿಜ್ಯ ಸಂಕೀರ್ಣಗಳಿವೆ.

ಅರ್ಕೆಸ್ಟ್ರಾ: ಶಾಡ್ಸ್ ಮ್ಯೂಸಿಕ್ ವರ್ಲ್ಡ್ ಮಂಗಳೂರು ಇವರ ವತಿಯಿಂದ ಉದ್ಘಾಟನೆಯ ಮೊದಲು ಮತ್ತು ಉದ್ಘಾಟನೆ ಬಳಿಕವೂ ಅರ್ಕೆಸ್ಟ್ರಾ ನಡೆಯಲಿದೆ.

ಹಿಂದೂಸ್ಥಾನ್ ಡೆವಲಪರ‍್ಸ್‌ನಿಂದ ಮಹೋನ್ನತ ಕೊಡುಗೆ

muhammad

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕಟ್ಟಡ ನಿರ್ಮಾಣದ ಉದ್ಯಮ ಕ್ಷೇತ್ರದಲ್ಲಿ ಅಪ್ರತಿಮ ಕೊಡುಗೆಗಳ ಮೂಲಕ ಅಂತರಾಷ್ಟ್ರೀಯ ಖ್ಯಾತಿ ಗಳಿಸಿರುವ ಹಿಂದೂಸ್ಥಾನ್ ಪ್ರಮೋಟರ‍್ಸ್ ಮತ್ತು ಡೆವಲಪರ‍್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಮತ್ತು ಫಾತಿಮಾ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ|ಮುಹಮ್ಮದ್ ಇಬ್ರಾಹಿಂ ಪಾವೂರುರವರು ಪಿಪಿಪಿ ಯೋಜನೆಯಡಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಜೊತೆ ಸಹಭಾಗಿತ್ವದಲ್ಲಿ ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲಾ ಕೇಂದ್ರವಾಗುವ ಕನಸಿಗೆ ಪೂರಕವಾದ, ಪಿಪಿಪಿ ಮಾದರಿಯಲ್ಲಿ ಕರ್ನಾಟಕದಲ್ಲೆ ಪ್ರಥಮವೆನಿಸುವ ಹೈ-ಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಬಹುದುದ್ಧೇಶಿತ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿ ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಳ ಮೂಲಕ ಕೊಲಂಬೊ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಸಮ್ಮಾನಕ್ಕೆ ಭಾಜನರಾಗಿರುವುದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಜನಸ್ನೇಹಿ ಕೊಡುಗೆಗಳ ಮೂಲಕ ಅನನ್ಯತೆಯಿಂದ ಗುರುತಿಸಿಕೊಂಡಿರುವ ಹಿಂದೂಸ್ಥಾನ್ ಪ್ರಮೋಟರ‍್ಸ್ ಮತ್ತು ಡೆವಲಪರ‍್ಸ್‌ನ ಆಡಳಿತ ನಿರ್ದೇಶಕರಾದ ಡಾ.ಮುಹಮ್ಮದ್ ಇಬ್ರಾಹಿಂ ಪಾವೂರುರವರು ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಪುತ್ತೂರು ಕೆಎಸ್‌ಆರ್‌ಟಿಸಿ ಹೈ-ಟೆಕ್ ಬಸ್ ನಿಲ್ದಾಣವನ್ನು ನಿರ್ಮಿಸಿ ಪುತ್ತೂರಿನ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.