ಬಸ್ ನಿಲ್ದಾಣಕ್ಕೆ ಶಾಸಕಿ ಭೇಟಿ-ವೀಕ್ಷಣೆ

Puttur_Advt_NewsUnder_1
Puttur_Advt_NewsUnder_1

bus shasakiಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ, ಪುತ್ತೂರು ವಿಭಾಗ ಮತ್ತು ಹಿಂದೂಸ್ಥಾನ್ ಪ್ರಮೋಟರ‍್ಸ್ ಮತ್ತು ಡೆವಲಪರ‍್ಸ್ ಪ್ರೈ.ಲಿಮಿಟೆಡ್‌ರವರ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಹೈ-ಟೆಕ್ ಬಸ್‌ನಿಲ್ದಾಣದ ಉದ್ಘಾಟನೆ ಪೂರ್ವಭಾವಿಯಾಗಿ ರಾಜ್ಯ ಸಂಸದೀಯ ಕಾರ್ಯದರ್ಶಿ, ಪುತ್ತೂರಿನ ಶಾಸಕಿ ಶಕುಂತಳಾ ಟಿ.ಶೆಟ್ಟಿರವರು ಜ.7ರಂದು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ವೀಕ್ಷಣೆ ನಡೆಸಿದರು. ಶಾಸಕಿ ಶಕುಂತಳಾ ಶೆಟ್ಟಿರವರು ಹಿಂದೂಸ್ಥಾನ್ ಪ್ರಮೋಟರ‍್ಸ್  ಮತ್ತು ಡೆವಲಪರ‍್ಸ್ ಪ್ರೈ.ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ|ಮುಹಮ್ಮದ್ ಇಬ್ರಾಹಿಂ ಮತ್ತು ಕೆಎಸ್‌ಆರ್‌ಟಿಸಿ ಸಿ.ಎಮ್.ಇ ಮಲ್ಲಿಕಾರ್ಜುನ್  ರವರೊಂದಿಗೆ ಉದ್ಘಾಟನಾ ಕಾರ್ಯಕ್ರಮದ ರೂಪು-ರೇಷೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕಿರವರು ಪುತ್ತೂರು ಬಸ್ ನಿಲ್ದಾಣವು ಪಿಪಿಪಿ ಮಾದರಿಯಲ್ಲಿ ಕರ್ನಾಟಕದಲ್ಲೆ ಪ್ರಥಮವೆನಿಸುವ ಹೈ-ಟೆಕ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಾಗಿದೆ ಎಂಬುದನ್ನು ಹೇಳಲು ಹೆಮ್ಮೆಯೆನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಂ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ಡಾ|ರಘು ಬೆಳ್ಳಿಪ್ಪಾಡಿ, ನಗರಸಭಾ ಸದಸ್ಯರಾದ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ನವೀನ್ ಚಂದ್ರ ನಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಆರ್ಶದ್ ದರ್ಬೆ, ಮಾಜಿ ಅಧ್ಯಕ್ಷ ಶ್ರೀರಾಂ ಪಕ್ಕಳ, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಪಟ್ಟಣ ಆಶ್ರಯ ಸಮಿತಿಯ ರಾಮಕೃಷ್ಣ ಕೇಪುಳು, ಇಸಾಕ್ ಸಾಲ್ಮರ, ಜಯಕರ್ನಾಟಕ ತಾಲೂಕು ಕಾರ್ಯದರ್ಶಿ ರಫೀಕ್ ಎಂ.ಕೆ, ಸದಸ್ಯರಾದ ಗಂಗಾಧರ್ ಎಲಿಕ, ಧೀರಜ್ ಗೌಡ, ಚಂದ್ರಶೇಖರ ಪಾಟಾಳಿ, ಯುವ ಬಂಟರ ಸಂಘದ ಅಧ್ಯಕ್ಷ ರೋಶನ್ ರೈ ಬನ್ನೂರು, ಪ್ರಮುಖರಾದ ಸಾರ್ಥಕ್ ರೈ ಅರಿಯಡ್ಕ, ಅವಿನಾಶ್ ರೈ ಕುಡ್ಚಿಲ, ಮಹೇಶ್ ರೈ ಅಂಕೋತ್ತಿಮಾರು, ಮನಮೋಹನ್ ರೈ, ಸುಧಾಕರ್ ರೈ, ಹಿಂದೂಸ್ಥಾನ್ ಪ್ರಮೋಟರ‍್ಸ್  ಮತ್ತು ಡೆವಲಪರ‍್ಸ್ ಪ್ರೈ.ಲಿಮಿಟೆಡ್‌ನ ಇಂಜಿನಿಯರ್ ಲಕ್ಷ್ಮಿನಾರಾಯಣ, ಸಿಬ್ಬಂದಿಗಳಾದ ಹರೀಶ್ ಸಂಟ್ಯಾರು, ಮುಹ್‌ಸಿನ್ ಮುಹಮ್ಮದ್, ರಾಜ್ ಕುಮಾರ್ ಕೆ., ಇಬ್ರಾಹಿಂ ಕನ್ಯಾನರವರು ಉಪಸ್ಥಿತರಿದ್ದರು.

ನಾಳೆ ಸಾರಿಗೆ ಸಚಿವ ಕಾಂಗ್ರೆಸ್ ಕಚೇರಿಗೆ ಭೇಟಿ: ಜ.೯ರಂದು ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿರವರು ಹಿಂದೂಸ್ಥಾನ್ ಕಾಂಪ್ಲೆಕ್ಸ್‌ನಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದು ಸದಸ್ಯರು ಉಪಸ್ಥಿತರಿರಬೇಕಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲಲ್ ರಹೀಂರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.