Breaking News

ನೆಲ್ಯಾಡಿ: ಅಟೋ ಚಾಲಕ ಮಾಲಕರ ಸಂಘದ ಕಾರ್ಯಾಲಯ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

nelyadiನೆಲ್ಯಾಡಿ: ಅಟೋ ರಿಕ್ಷಾ ಚಾಲಕ ಮಾಲಕರ ಸಂಘ ನೆಲ್ಯಾಡಿಯ ಕಛೇರಿ  ಉದ್ಘಾಟನೆ ಸಂಘದ ಗೌರವಾಧ್ಯಕ್ಷ ನ್ಯಾಯವಾದಿ ದಿನಕರ ರೈ ಯವರ ಅಧ್ಯಕ್ಷತೆಯಲ್ಲಿ ಜ. 1ರಂದು ನಡೆಯಿತು.

 ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ, ಸಂಘವು ಅಸ್ಥಿತ್ವಕ್ಕೆ ಬಂದು ಹಲವು ವರ್ಷಗಳಾದರೂ ಕಛೇರಿ ಇಲ್ಲದೇ ಇದ್ದು ಈ ಬಗ್ಗೆ ಪಂಚಾಯತ್ ಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಪಂಚಾಯತ್ ವತಿಯಿಂದ ಕಟ್ಟಡವನ್ನು ನೀಡಲಾಗಿದೆ  ಸಂಘವು ಉತ್ತಮ ಕಾರ್ಯಗಳನ್ನು ಸಮಾಜಕ್ಕೆ ನೀಡುವ ಮೂಲಕ ಮಾದರಿ ಯಾಗಿ ಯಶಸ್ಸಿನೆಡೆಗೆ ಸಾಗಬೇಕು ಎಂದು ಶುಭಹಾರೈಸಿದರು.

  ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಮ್.ಕೆ. ಇಬ್ರಾಹಿಂ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಅಬ್ದುಲ್ ಹಮೀದ್, ನೆಲ್ಯಾಡಿ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಎಂ.ದೇವರಾಜ್, ಕೌಕ್ರಾಡಿ ಪ. ಅಭಿವೃದ್ದಿ ಅಧಿಕಾರಿ ಶಿಲ್ಪಾ ಜಿ.ಎಸ್ ನೆಲ್ಯಾಡಿ ಅಟೊ ಚಾ.ಮಾ.ಸಂಘದ ಅಧ್ಯಕ್ಷ ಟಿಪ್ಪು ಸುಲ್ತಾನ್, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ  ಉಪಸ್ಥಿತರಿದ್ದರು. ರವಿಪ್ರಸಾದ್ ಶೆಟ್ಟಿ ಗುತ್ತಿನ ಮನೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.