ಸಹಭಾಗಿತ್ವವಿಲ್ಲದ ಸಮಾರಂಭಗಳು

Puttur_Advt_NewsUnder_1
Puttur_Advt_NewsUnder_1

ಒಂದು ಕಾಲವಿತ್ತು,ನಿಮ್ಮಲ್ಲಿ ಯಾವೊಂದೇ ಕಾರ್ಯಕ್ರಮವಿದ್ದರೆ ಒಂದು ಹತ್ತು ಹದಿನೈದು ದಿನಗಳ ಮೊದಲೇ ನಿಮ್ಮ ಮನೆಗೆ ನಿಮ್ಮ ಸಮಾಜದ ಗುರಿಕಾರನೋ ಅಥವಾ ಗ್ರಾಮಣಿಯೋ ಆಗಮಿಸುತ್ತಿದ್ದರು.ಮನೆಯ ಯಜಮಾನನೊಂದಿಗೆ ಕಾರ್ಯಕ್ರಮದ ಸ್ವರೂಪದ ಕುರಿತು ಚರ್ಚಿಸುತ್ತಿದ್ದರು.ಎಷ್ಟು ಜನರ ಏರ್ಪಾಟು,ಚಪ್ಪರ ಹೇಗಿರಬೇಕು,ಪಾಕಶಾಲೆ ಎಲ್ಲಿರ‍್ಬೇಕು? ಎಂಬಿತ್ಯಾದಿ ವಿಷಯಗಳ ಕುರಿತು ಅ ಚರ್ಚೆಯಲ್ಲಿ ನಿರ್ಧರಿಸಲಾಗುತ್ತಿತ್ತು. ಸಮಾರಂಭದ ಆಮಂತ್ರಣ ಪತ್ರಿಕೆ ನೀಡುತ್ತಲೇ ಬಂಧುಮಿತ್ರರು, ‘ನಮ್ಮಿಂದೇನಾಗಬೇಕು ಹೇಳಿ?”ಎಂದು ಸಹಾಯಹಸ್ತ ಚಾಚುತ್ತಿದ್ದರು.ಅಂತೆಯೇ ಸಮಾರಂಭದ ಒಂದೆರಡು ದಿನ ಮೊದಲೇ ಸಮೀಪದ ಬಂಧುಮಿತ್ರರು ನಿಮ್ಮ ಮನೆಗೆ ಆಗಮಿಸಿ ಕಾರ್ಯಕ್ರಮದ ರೂಪುರೇಶೆಗಳನ್ನು ಅಂತಿಮಗೊಳಿಸುತ್ತಿದ್ದರು.ಸಮಾರಂಭದ ಹಿಂದಿನ ದಿನ ರಾತ್ರಿಯಂತೂ ಮಾರನೇ ದಿನದ ಭೋಜನಕ್ಕೆ ಅಗತ್ಯವಾದ ತರಕಾರಿಗಳನ್ನು ಕತ್ತರಿಸಲು,ಚಪ್ಪರದ ಅಲಂಕಾರವನ್ನು ಮಾಡಲು,ನೆರೆಯವರು,ಊರವರು,ಸಮೀಪದ ನೆಂಟರಿಸ್ಟರೆಲ್ಲರೂ ಜೊತೆ ಸೇರಿ ಎಲ್ಲಾ ಸಿದ್ಧತೆಗಳನ್ನೂಮಾಡಿ ಮುಗಿಸುತ್ತಿದ್ದರು.ಮಾತ್ರವಲ್ಲ,ಮಾರನೇ ದಿನ ಸಮಾರಂಭದಂದು ಯಾರು ಯಾರು ಯಾವೆಲ್ಲಾ ಜವಾಬ್ದಾರಿ ನಿರ್ವಹಿಸಬೇಕೆಂಬುದನ್ನು ಗುರಿಕಾರರ ನೇತ್ರತ್ವದಲ್ಲಿ ನಿರ್ಧರಿಸಿ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ಹಂಚಲಾಗುತಿತ್ತು. ಈ ರೀತಿಯ ಪೂರ್ವತಯಾರಿಗೆ ಅನುಕೂಲವಾಗಲೆಂದೇ ಆ ದಿನ ಮದುರಂಗಿಶಾಸ್ತ್ರವನ್ನೋ,ಅಥವಾ ಗಣೇಶನ ಪ್ರಾರ್ಥನೆಯೆಂದೊ ಕಾರ್ಯಕ್ರಮವಿರಿಸಿಕೊಳ್ಳುತ್ತಿದ್ದರು.ಸಮಾರಂಭದ ದಿನದ ಎಲ್ಲಾ ಕೆಲಸಗಳನ್ನೂ ಇದೇ ಮಂದಿ ಅತ್ಯಂತ ಶ್ರದ್ಧೆಯಿಂದ ಹಾಗೂ ಅಷ್ಟೇ ಪ್ರೀತಿಯಿಂದ ಯಾವುದೇ ಗೊಣಗಾಟವಿಲ್ಲದೆ ಮಾಡಿಮುಗಿಸುತ್ತಿದ್ದರು.ಅತಿಥಿ ಸತ್ಕಾರದ ವೇಳೆಯೂ ಹಾಗೇನೇ ನಮ್ಮ ಮನೆಗೆ ಆಗಮಿಸಿದ ನಮ್ಮ ಅತಿಥಿಗಳನ್ನು ಯಾವ ಪ್ರೀತಿಯಿಂದ ಉಪಚರಿಸುತ್ತೇವೋ ಅಷ್ಟೇ ಪ್ರೀತಿಯಿಂದ ಅಂದಿನ ಸಮಾರಂಭದ ವ್ಯವಸ್ಥೆಯ ಜವಾಬ್ದಾರಿ ಹೊತ್ತ ಬಂದುಮಿತ್ರರು ಉಪಚರಿಸುತ್ತಿದ್ದರು. ಎಲ್ಲರೂ ಎಲ್ಲರೊಂದಿಗೂ ನಗು ನಗುತ್ತಾ  ಮಾತನಾಡುತ್ತಾ ,ಖುಷಿ ಖುಷಿಯಿಂz ಓಡಾಡುತ್ತಿದ್ದರು. ಆ ದಿನ ಸಾಕಷ್ಟು ಖುಷಿಯಿತ್ತು.ಸಂಭ್ರಮವಿತ್ತು,ಸಡಗರವಿತ್ತು,ಉಲ್ಲಾಸವಿತ್ತು.ಎಲ್ಲಕ್ಕಿಂತ ಮುಖ್ಯವಾಗಿ ಎಲ್ಲರಿಗೂ ಈ ಸಮಾರಂಭವನ್ನು ಆನಂದಿಸಲು ಸಾಕಷ್ಟು ಬಿಡುವಿತ್ತು, ಒಂದು ಸುಂದರವಾದ ಮನಸ್ಸಿತ್ತು.

ಆದರೆ ಇಂದೇನಾಗಿದೆ? ನೇತ್ರಾವತಿಯಲ್ಲಿ ಬಹಳಷ್ಟು ನೀರು ಹರಿದುಹೋಗಿದೆ.ಮೊದಲನೆಯದಾಗಿ ಬಹುತೇಕ ಸಮಾರಂಭಗಳು ಇಂದು ಮನೆಗಳಲ್ಲಿ ನಡೆಯುತ್ತಿಲ್ಲ.ಇದಕ್ಕೆಂದೇ ಕಲ್ಯಾಣಮಂಟಪಗಳು ಬಾಡಿಗೆಗೆ ದೊರೆಯುತ್ತವೆ.ಅಲ್ಲಿನ ಸ್ಥಳ,ಜನ,ವಸ್ತುಗಳು, ಎಲ್ಲವೂ ಹಿಂದಿನ ದಿನದ ತನಕವೂ ನಮಗೆ ಸೇರಿದ್ದಲ್ಲ.ಸಮಾರಂಭದ ದಿನ ೩ ಘಂಟೆಯೊಳಗೆ ಜಾಗ ಖಾಲಿಮಾಡಬೇಕೆಂದು ಕಲ್ಯಾಣಮಂಟಪದವರ ಕಟ್ಟಪ್ಪಣೆ ಬೇರೆ ಇದೆ.ಹೀಗಾಗಿ ಸಾಕಷ್ಟು ದಿನಗಳ ಮೊದಲೇ ಆಗಮಿಸಿ ಆತಿಥೇಯರಿಗೆ ನೆರವಾಗುವ ಅವಕಾಶವೂ ಇಲ್ಲ.ಕಾರ್ಯಕ್ರಮ ಮುಗಿದ ಬಳಿಕ ಅವರೊಂದಿಗಿದ್ದು ಅವರ ಭಾವನೆಗಳನ್ನು ಹಂಚಿಕೊಳ್ಳುವಂತೆಯೂ ಇಲ್ಲ.

ಈಗೆಲ್ಲವೂ ಹೊರಗುತ್ತಿಗೆ ಆಧಾರದಲ್ಲೇ ಸಮಾರಂಭ ನಡೆಯಬೇಕಷ್ಟೆ. ಆತಿಥೇಯರ ಕರ್ತವ್ಯಗಳೆಲ್ಲವನ್ನೂ ಹೊರಗುತ್ತಿಗೆಯ ಮಂದಿಯೇ ಮಾಡಿಮುಗಿಸುತ್ತಾರೆ. ಸಮಾರಂಭದ ವಿವಿಧ ಜವಾಬ್ದಾರಿ ನಿರ್ವಹಿಸಲು,ನೆಂಟರಿಸ್ಟರಿಗಾಗಲೀ,ನೆರೆಯವರಿಗಾಗಲೀ,ಬಿಡುವೂ ಇಲ್ಲ,ಅವರ ಬಳಿ ಅಂತಹ ಮಾನವ ಸಂಪನ್ಮೂಲವೂ ಇಲ್ಲ. ಸಮಾರಂಭವಿಂದು ಬಂಧುಮಿತ್ರರ ಸಹಭಾsಗಿತ್ವವಿಲ್ಲದೆ ಢಾಳು ಢಾಳಾಗಿ ಕಾಣುತ್ತಿದೆ. ‘ಭೋಜನ ಸ್ವೀಕರಿಸಿ’ಎಂದು ತಂಬಿಗೆಯಲ್ಲಿ ನೀರಿರಿಸಿ ಅತಿಥಿಗಳನ್ನು ಆಹ್ವಾನಿಸುವ ಆ ದಿನಗಳು ಕೇವಲ ನೆನಪಾಗಿ ನಮ್ಮನ್ನು ಕಾಡುತ್ತಿವೆ. ಏಕೆಂದರೆ ಅದಕ್ಕೆ ಅವಕಾಶವೇ ನೀಡದಂತೆ,ಎಲೆ ಇರಿಸುವ ಮೊದಲೇ ಯಾತ್ರಾಸ್ಥಳದಲ್ಲೋ, ಹೋಟೇಲ್ಲಲ್ಲೋ ಊಟಕ್ಕೆ  ಸ್ಥಳ ಕಾದಿರಿಸುವ, ಈಗಾಗಲೆ ಭೋಜನ ಸ್ವೀಕರಿಸಿದವರ ಎಂಜಲೆಲೆ ಎತ್ತುವ ಮೊದಲೇ ಅಲ್ಲಿ ಊಟಕ್ಕಾಗಿ ಕಾಯುವ ಇಂದಿನ ಅತಿಥಿಗಳ ದಯನೀಯ ಸ್ಥಿತಿ ಕಂಡು ಅಯ್ಯೋ ಪಾಪ ಎಂದನಿಸುತ್ತದೆ. ಕಚೇರಿಯಿಂದಲೊ,ವ್ಯವಹಾರದ ಮಧ್ಯದಿಂದಲೋ ಓಡೋಡಿ ಸಮಾರಂಭಕ್ಕೆ ಗಡಿಬಿಡಿಯಲ್ಲಿ ಎದ್ದು ಬಿದ್ದು ಓಡೋಡಿ ಬರುವ ನಮ್ಮ ಸ್ಥಿತಿಯನ್ನು ಕಂಡು ನಮಗೇ ಮರುಕ ಹುಟ್ಟುತ್ತದೆ. ಸಮಾರಂಭದಲ್ಲಿ ಯಾರು ಸಿಕ್ತಾರೋ ಬಿಡ್ತಾರೋ,ಆದರೆ ಫೊಟೋಗ್ರಾಫರೋ ವಿಡಿಯೋಗ್ರಾಫರೋ ನಮ್ಮನ್ನು ಸೆರೆ ಹಿಡಿದರೆ ಸಾಕು,ನಾವು ಬಂದಿದ್ದಕ್ಕೆ ಇನ್ನೆನು ಸಾಕ್ಷಿ ಬೇಕು? ಅನ್ನೋ ಧೋರಣೆ ಹೆಚ್ಚಾಗ್ತಾ ಇದೆ. ಬೆಳಗ್ಗಿನ ಉಪಹಾರಕ್ಕೆ ಒಂದು ಕಡೆ, ಹೊತ್ತೇರಿದಾಗ ಮತ್ತೊಂದೆಡೆ ಜ್ಯೂಸ್,ಮಧ್ಯಾಹ್ನದ ಭೋಜನ ಮತ್ತಿನ್ನಾವುದೋ ಕಡೆ, ಅಪರಾಹ್ನ ನಾಲ್ಕನೆಯ ಕಡೆ ಐಸ್ ಕ್ರೀಂ ತಿಂದು ಎಲ್ಲಾ ಕಡೆ ಇದ್ರೂ ಎಲ್ಲೂ ಸರಿಯಾಗಿ ಭಾಗವಹಿಸಲಾಗದ ಅತಿಥಿಗಳ ಕಸರತ್ತಿನ ಕರಾಮತ್ತು ಅವರಿಗೇ ಗೊತ್ತು.

ಎಲ್ಲರ ಸಹಭಾsಗಿತ್ವದಿಂದ ಸಂಭ್ರಮೊಲ್ಲಾಸದಿಂದ ನಡೆಯುತ್ತಿದ್ದ ಸಮಾರಂಭವಿಂದು ಅದಾವುದೂ ಇಲ್ಲದೆ ಸೊರಗಿ ಹೋಗಿರುವದಂತೂ ನಿಜ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.