ಬೆಳಿಯೂರುಕಟ್ಟೆ ಬಸ್‌ಸ್ಟ್ಯಾಂಡ್ ಕಟ್ಟಡಕ್ಕೆ ಹಾನಿ – ಗ್ರಾ.ಪಂ ಅಧ್ಯಕ್ಷರಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

bustandಚಿತ್ರ: ಯೂಸುಫ್ ರೆಂಜಲಾಡಿ

ರೆಂಜಲಾಡಿ: ಬೆಳಿಯೂರು ಕಟ್ಟೆ ಜೂನಿಯರ್ ಕಾಲೇಜು ಸಮೀಪದಲ್ಲಿರುವ ಬಸ್‌ಸ್ಟ್ಯಾಂಡ್ ಕಟ್ಟಡಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಹಾನಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಟ್ಟಡದ ಹಿಂಭಾಗದ ಕಂಬದ ಕಲ್ಲುಗಳನ್ನು ಯಾವುದೋ ಆಯುಧಗಳನ್ನು ಬಳಸಿ ತೆಗೆಯಲಾಗಿದ್ದು ಇನ್ನೇನು ಕೆಲವು ಕಲ್ಲುಗಳನ್ನು ತೆಗೆಯುತ್ತಿದ್ದರೆ ಕಟ್ಟವೇ ಬೀಳುವ ಅಪಾಯದಲ್ಲಿತ್ತು. ಕಲ್ಲನ್ನು ತೆಗೆಯುತ್ತಿದ್ದ ವೇಳೆ ಸಮೀಪದ ಮನೆಯವರಿಗೆ ಶಬ್ದ ಕೇಳಿ ಬಂದಾಗ ಸ್ಥಳದಿಂದ ಕಾಲ್ಕಿತ್ತಿರುವುದಾಗಿ ತಿಳಿದು ಬಂದಿದೆ. ಕೇವಲ ವಿದ್ಯಾರ್ಥಿಗಳು ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯವೇ ಅಥವಾ ಹೊರಗಿನ ವ್ಯಕ್ತಿಗಳ ಕೈವಾಡವಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.

ಅಧ್ಯಕ್ಷೆ, ಪಿಡಿಓ ಭೇಟಿ-ಪರಿಶೀಲನೆ

ಹಾನಿಗೊಂಡ ಬಸ್‌ಸ್ಟ್ಯಾಂಡ್ ಕಟ್ಟಡವನ್ನು ಜ.7ರಂದು ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ವಿನಯ, ಪಿಡಿಒ ಶರೀಫ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸದಸ್ಯರಾದ ಇದ್ದುಕುಂಞಿ ಹಾಗೂ ಇಂದಿರಾ ಎಸ್ ಜೊತೆಗಿದ್ದರು.

 ಕಟ್ಟಡ ಬೀಳಿಸುವ ಉದ್ದೇಶ-ಪಿಡಿಓ

ಸಾರ್ವಜನಿಕ ಸೊತ್ತುಗಳನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಇಲ್ಲಿನ ಬಸ್‌ಸ್ಟ್ಯಾಂಡ್ ಕಟ್ಟಡವನ್ನು ಹಾನಿಗೊಳಿಸಿರುವ ರೀತಿಯನ್ನು ಗಮನಿಸುವಾಗ ಇದು ಉದ್ದೇಶ ಪೂರ್ವಕವಾಗಿ ಕಟ್ಟಡವನ್ನು ಬೀಳಿಸಲು ಮಾಡಿರುವ ಕೃತ್ಯದಂತೆ ಕಾಣಿಸುತ್ತಿದ್ದು ಹತ್ಯಾರ್‌ಗಳನ್ನು ಬಳಸಿ ಕಲ್ಲುಗಳನ್ನು ತೆಗೆದು ಹಾಕಿದ್ದಾರೆ ಎಂದು ಬಲ್ನಾಡು ಗ್ರಾ.ಪಂ ಪಿಡಿಒ ತಿಳಿಸಿದ್ದಾರೆ.

ತುರ್ತಾಗಿ ಸರಿಪಡಿಸಲಾಗುವುದು-ಅಧ್ಯಕ್ಷೆ

ಇಲ್ಲಿನ ತಂಗುದಾಣವು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಕಾರಿಯಾಗಿದ್ದು ಅದಕ್ಕೇ ಹಾನಿಗೊಳಿಸಿರುವುದು ಖಂಡನೀಯವಾಗಿದ್ದು ಇದನ್ನು ತುರ್ತಾಗಿ ದುರಸ್ಥಿ ಮಾಡಲಾಗುವುದು ಎಂದು ಬಲ್ನಾಡು ಗ್ರಾ.ಪಂ ಅಧ್ಯಕ್ಷೆ ವಿನಯ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಈ ಕೃತ್ಯ ಮಾಡಿದ್ದಾರೆಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾಲೇಜಿನ ಪ್ರಾಂಶುಪಾಲರ ಗಮನಕ್ಕೆ ತರಲಾಗಿದೆ. ಆದರೆ ಬಲವಾದ ಆಧಾರಗಳು ಇಲ್ಲದ ಕಾರಣ ವಿದ್ಯಾರ್ಥಿಗಳೇ ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ ಸಾರ್ವಜನಿಕ ಸೊತ್ತುಗಳನ್ನು ಯಾರು ಕೂಡಾ ಹಾನಿ ಮಾಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ವಿಚಾರಣೆ ನಡೆಸಿದ್ದೇನೆ-ಪ್ರಾಂಶುಪಾಲೆ

ಬಸ್‌ಸ್ಟ್ಯಾಂಡ್ ಕಟ್ಟಡವನ್ನು ಹಾನಿಗೊಳಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ವಿದ್ಯಾರ್ಥಿಗಳನ್ನು ವಿಚಾರಿಸಲಾಗಿದ್ದು ಕೆಲವರು ಒಪ್ಪಿಕೊಂಡಿದ್ದಾರೆ. ಅಂತಹ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ವಿಚಾರ ತಿಳಿಸಿಕೊಡಲಾಗಿದೆ ಎಂದು ಸ್ಥಳೀಯ ಕಾಲೇಜಿನ ಪ್ರಾಂಶುಪಾಲೆ ಗೀತಾಶ್ರೀ ತಿಳಿಸಿದ್ದಾರೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ ಮಾಡಿದ್ದಾರೆಂದು ನೂರಕ್ಕೆ ನೂರು ಒಪ್ಪಿಕೊಳ್ಳಲು ನಾನು ತಯಾರಿಲ್ಲ ಅದಕ್ಕೆ ಆಧಾರವೂ ಇಲ್ಲ ಎಂದು ಅವರು ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.