ಕೋಡಿಂಬಾಡಿ ಗ್ರಾ. ಪಂ. ಮಟ್ಟದ ಬಾಲಮೇಳ

Puttur_Advt_NewsUnder_1
Puttur_Advt_NewsUnder_1

balaಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ಮಟ್ಟದ ಬಾಲಮೇಳ ಕಾರ್ಯಕ್ರಮ ಜ.7ರಂದು ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರ ವ್ಯಾಪ್ತಿಯ ಪುಟಾಣಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಕಾರ್ಯಕ್ರಮ ನಡೆಯಿತು.

ಅಪರಾಹ್ನ ಗ್ರಾ.ಪಂ. ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ ಕೈಲಾಜೆರವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಿತು. ತಾ.ಪಂ. ಸದಸ್ಯೆ ನೇತ್ರಾವತಿ.ಪಿ. ಗೌಡ, ಗ್ರಾ.ಪಂ. ಉಪಾಧ್ಯಕ್ಷ ಬಾಬು ಗೌಡ ಭಂಡಾರದಮನೆ, ಸದಸ್ಯರಾದ ಮನೋಹರ ಗೌಡ ಡಿ.ವಿ, ರಾಮಚಂದ್ರ ಪೂಜಾರಿ ಶಾಂತಿನಗರ, ಜಗನ್ನಾಥ ಶೆಟ್ಟಿ ನಡುಮನೆ, ಲಿಂಗಪ್ಪ ಕಾಪಿಕಾಡು, ಭವ್ಯ ವಿದ್ಯಾಪ್ರಸಾದ್ ಶೆಟ್ಟಿ, ಯಶೋಧಾ ಬಾಲಕೃಷ್ಣ ಕಾಪು, ಯಮುನಾ ಕುಶಾಲಪ್ಪ ಪೂಜಾರಿ ಶಾಂತಿನಗರ ಮತ್ತು ಪಿಡಿಓ ದಾಮೋದರ ಗೌಡ ಶುಭ ಹಾರೈಸಿದರು. ಬೀರಿಗ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಅರುಣಾ.ಡಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.