ಗುಂಡ್ಯ ಹೊಳೆಯಲ್ಲಿ ಇಚ್ಲಂಪಾಡಿಯ ಪ್ರಶಾಂತ್ ಸಂಶಯಾಸ್ಪದ ಸಾವಿನ ಪ್ರಕರಣದ ಆರೋಪಿಗಳ ಪತ್ತೆಗಾಗ್ರಹಿಸಿ ಜ.11 ಕ್ಕೆ ದಲಿತ ಸೇವಾ ಸಮಿತಿ ವತಿಯಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1


20160108_103614

ಪುತ್ತೂರು: ಗುಂಡ್ಯ ಹೊಳೆಯಲ್ಲಿ ಮುಳುಗಿ ಮೃಪಟ್ಟಿದ್ದರೆನ್ನಲಾದ ಇಚ್ಲಂಪಾಡಿಯ ಪ್ರಶಾಂತ್ ರವರ ಸಂಶಾಸ್ಪದ ಸಾವಿನ ಪ್ರಕರಣ ಆರೋಪಿಗಳ ಪತ್ತೆಗೆ ಆಗ್ರಹಿಸಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಜ.11ರಂದು ಕಡಬ  ವಿಶೇಷ ತಹಶೀಲ್ದಾರ್‌ಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಅಧ್ಯಕ್ಷ ಶೇಷಪ್ಪ ಬೆದ್ರಕಾಡು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಗುಂಡ್ಯ ಹೊಳೆ ಸುಳ್ಯಮಜಲು ಎಂಬಲ್ಲಿ 2015ನೇ ಎ.23ರಂದು ಹೊಳೆಯಲ್ಲಿ ಸ್ನಾನದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಪ್ರಶಾಂತ್‌ನ ಹೆತ್ತವರು ಇದೊಂದು ಕೋಲೆಯೋ, ಆಕಸ್ಮಿಕ ಸಾವೋ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಪರಿಶಿಷ್ಠ ಜಾತಿ ಮತ್ತು ಪಂಗಡದವರು ಸೇರಿಕೊಂಡು ದಲಿತ್ ಸೇವಾ ಸಮಿತಿ ವತಿಯಿಂದ ಜ.11ರಂದು ಕಡಬ ಗ್ರಾ.ಪಂ ನಿಂದ ಮೌನ ಮೆರವಣಿಗೆ ಮೂಲಕ ಕಡಬ ವಿಶೇಷ ತಹಶೀಲ್ದಾರ್ ಕಚೇರಿಗೆ ತೆರಳಿ ಅವರ ಮೂಲಕ ಗೃಹ ಸಚಿವರಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮೃತ ಪ್ರಶಾಂತ್‌ರವರ ಹೆತ್ತವರಾದ ಕುಸುಮಾ ಮೂಡುಜಾಲು, ಮುದರ ಮುಗೇರ, ದಲಿತ್ ಸೇವಾ ಸಮಿತಿ ಕಡಬ ಹೋಬಳಿ ಪ್ರಧಾನ ಕಾರ‍್ಯದರ್ಶಿ ಕಮಲೇಶ್ ಎನ್, ತಾಲೂಕು ಅಧ್ಯಕ್ಷ ಕೆ.ಗಿರಿಧರ ನಾಯ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.