ಕುಮ್ಕಿ ಹಕ್ಕು ಸೌಲಭ್ಯ ನೀಡದೆ ರಾಜ್ಯ ಸರಕಾರದಿಂದ ರೈತರಿಗೆ ವಂಚನೆ-ಕಿಸಾನ್ ಸಂಘ

Puttur_Advt_NewsUnder_1
Puttur_Advt_NewsUnder_1

20160108_104540

 

 

 

 

 

 

 

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಕೃಷಿಕರು ಅನುಭವಿಸಿಕೊಂಡು ಬರುತ್ತಿರುವ ಕುಮ್ಕಿ, ಕಾನಬಾನೆ ಸೌಲಭ್ಯವನ್ನು ನೀಡದೆ ರಾಜ್ಯ ಸರಕಾರ ರೈತರಿಗೆ ವಂಚನೆ ಮಾಡುತ್ತಿದೆ ಎಂದು  ಭಾರತೀಯ ಕಿಸಾನ್ ಸಂಘದ ಕುಮ್ಕಿ ಹಕ್ಕು ಹೋರಾಟ ಸಮಿತಿಯ ಎಂ.ಜಿ.ಸತ್ಯನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಹಿಂದಿನ ಸರಕಾರ ಕುಮ್ಕಿ ಮತ್ತು ಕಾನಬಾಣೆ ಹಕ್ಕನ್ನು ನೀಡುವ ಸಿದ್ಧತೆಯನ್ನು ಕೊನೆಯ ಹಂತದಲ್ಲಿ ಮಾಡಿತ್ತು. ಆದರೆ ಅದು ಸಫಲವಾಗಲಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕುಮ್ಕಿ ಮತ್ತು ಕಾನಬಾಣೆಯ ಸ್ಥಳವನ್ನು ರೈತರಿಗೆ ಕೊಡುವುದಾಗಿ ಭರವಸೆ ನೀಡಿತ್ತು. ಪ್ರಸ್ತುತ ಅದೂ ಕೂಡಾ ವಿಫಲವಾಗಿದೆ ಎಂದರು.  ಪ್ರಾರಂಭದಲ್ಲಿ ಕಂದಾಯ ಸಚಿವರು ಕುಮ್ಕಿ ಮತ್ತು ಕಾನಾಬಾಣೆ ಕೃಷಿಕರಿಗೆ ಅಗತ್ಯವಿದೆ ಎಂದು ಒಪ್ಪಿದ್ದರು. ಈಗ ಸಚಿವರು ಭೂ ರಹಿತರಿಗೆ ಭೂಮಿ ನೀಡಲು ಸರಕಾರಿ ನಿವೇಶನದ ಕೊರತೆಯಿದೆ. ಆದ ಕಾರಣ ಕುಮ್ಕಿ ಮತ್ತು ಕಾನಾಬಾಣೆ ಹಕ್ಕನ್ನು ನೀಡಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೆ ರಾಜ್ಯ ಸರಕಾರ ಸರ್ವೋಚ್ಛ ನ್ಯಾಯಾಲಯಕ್ಕೂ ಅಫಿದಾವಿತ್ ಸಲ್ಲಿಸಿ ಕುಮ್ಕಿ ಮತ್ತು ಕಾನಾಬಾಣೆ ಹಕ್ಕನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ. 2004  ರ ತನಕ ಕೃಷಿಕರು ತಮ್ಮ ಕುಮ್ಕಿ ಮತ್ತು ಕಾನಾಬಾಣೆ ಜಮೀನಿನ ಕುರಿತು ಭೂ ಕಂದಾಯ ತೀರ್ವೆ ಪಾವತಿಸುತ್ತಾ ಬಂದಿದ್ದರು. ಈಗ 2004  ರಿಂದ ತೀರ್ವೆ ಸ್ವೀಕರಿಸುತ್ತಿಲ್ಲ. ರಾಜ್ಯ ಸರಕಾರಕ್ಕೆ ಕುಮ್ಕಿ ಮತ್ತು ಕಾನಾಬಾಣೆ ಭೂಮಿಯಿಂದ ವರ್ಷಕ್ಕೆ 1,400  ಕೋಟಿ ರೂ. ತೀರ್ವೆ ಮೂಲಕ ಕಂದಾಯ ಜಮೆಯಾಗುತ್ತಿತ್ತು. ಆದರೆ ಸರಕಾರ ತೀವ್ರೆ ವಸೂಲಿಯನ್ನು ನಿಲ್ಲಿಸಿ ಹಂತ ಹಂತವಾಗಿ ರೈತರಿಂದ ಕುಮ್ಕಿ ಹಕ್ಕನ್ನು ಪಡೆಯುವ ಮೂಲಕ ವಂಚನೆ ನಡೆಸುತ್ತಿದೆ ಎಂದು ಹೇಳಿದರು.

ರಾಜ್ಯ ಸರಕಾರ ಕುಮ್ಕಿ ಹಕ್ಕಿಲ್ಲವೆಂದು ಹಾದಿ ತಪ್ಪಿಸುತ್ತಿದೆ:

ಪೋಳ್ಯ ಸಮೀಪ ರೈತರೋರ್ವರ ಕುಮ್ಕಿಯನ್ನು ಜಿಲ್ಲಾಧಿಕಾರಿಗಳು ದೇವಾಲಯಕ್ಕೆ ಮಂಜೂರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜ. ೪ ರಂದು ನೀಡಿದ ತೀರ್ಪಿನಲ್ಲಿ ಕುಮ್ಕಿ ಭೂಮಿಯನ್ನು ರೈತನಿಂದ ವಿರಹಿತಗೊಳಿಸಲು ಆತನಿಗೆ ಪರಿಹಾರ ನೀಡಬೇಕು. ಕುಮ್ಕಿ ಸೌಲಭ್ಯದ ಕುರಿತಂತೆ ಅದನ್ನು ಹಕ್ಕಾಗಿ ಮಂಜೂರು ಮಾಡುವಂತಿಲ್ಲ ಎಂದು ತಿಳಿಸಿದೆ. ರೈತನಿಗೆ ಕುಮ್ಕಿ ಸೌಲಭ್ಯ ಇಲ್ಲ ಎಂದು ತಿಳಿಸಿಲ್ಲ. ಆದರೂ ರಾಜ್ಯ ಸರಕಾರ ಕುಮ್ಕಿ ಹಕ್ಕು ಇಲ್ಲ ಎಂದು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಸತ್ಯನಾರಾಯಣರವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ಬಿ.ಕೆ.ರಮೇಶ್,  ನಾರಾಯಣ ಭಟ್, ಜಿಲ್ಲಾ ಕಾರ‍್ಯದರ್ಶಿ ಸುಬ್ರಾಯ, ನೆಕ್ಕಿಲ ರಾಮಚಂದ್ರ ಉಪಸ್ಥಿತರಿದ್ದರು.

ರೈತರಿಗೆ ಕೃಷಿಗೆ ಬೇಕಾದ ಪರಿಕರಗಳನ್ನು ಸಮೀಪದಲ್ಲಿ ಪಡೆಯಬೇಕೆನ್ನುವ ನಿಟ್ಟಿನಲ್ಲಿ ದೀರ್ಘಾವಧಿ ಚಿಂತನೆಯನ್ನು ಹಿಂದೆಯೇ ಮಾಡಲಾಗಿದ್ದು, ಆ ಪ್ರಕಾರ ರೈತರು ಕುಮ್ಕಿ ಜಮೀನು ಹೊಂದಿದ್ದಾರೆ. ಅಲ್ಲಿ ನೀರಾವರಿ ಬೇಸಾಯ ಮಾಡದೇ ಒಣ ಬೇಸಾಯ ಮಾಡಬೇಕಾಗುತ್ತದೆ. ಆದರೆ ಬೇಸಾಯ ಮಾಡುವವನಿಗೆ ಕುಮ್ಮಿ ಹಕ್ಕು ಇಲ್ಲವೆಂದಾಗ ಬೇಸಾಯ ಮಾಡಲು ಸಾಧ್ಯವೋ

ಎಂ.ಜಿ.ಸತ್ಯನಾರಾಯಣ,  ಕುಮ್ಕಿ ಹಕ್ಕು ಹೋರಾಟ ಸಮಿತಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. A.J.Rai

    Since Kumki right is mainly prevailing in D.K. Dist. and 3 or 4 districts govt is not bothered.Hence we have to support the people who are fighting for the Kumki rights.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.