ಹಿರೇಬಂಡಾಡಿ:ದಿ.ನಾಗರಾಜ್ ರಿಗೆ ಸಂತಾಪ ಸೂಚಕ ಸಭೆ

ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾಮದ ಸಿಂಕ್ರಕೊಡಂಗೆ  ದಿ.ನಾಗರಾಜ್‌ರವರಿಗೆ  ಸಂತಾಪಸೂಚಕ ಸಭೆ ಜ.7ರಂದು ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷ ಶೌಖತ್ ಆಲಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಂಗಳೂರು ಭಜರಂಗದಳದ ಸಂಚಾಲಕ ಮುರಳೀಕೃಷ್ಣ ಹಂಸತಡ್ಕ ಮಾತನಾಡಿ ಮನುಷ್ಯನಿಗೆ ಹುಟ್ಟು ಸಾವು ಅನಿವಾರ‍್ಯ. ಹುಟ್ಟಿದ ಮೇಲೆ ಸಮಾಜದಲ್ಲಿ ಗುರುತಿಸುವ ವ್ಯಕ್ತಿಯಾಗಿ ಬಾಳಬೇಕು ಎಂದು ಅವರು ಹೇಳಿದರು. ಕುಟುಂಬಕ್ಕೆ ಹಿರೇಬಂಡಾಡಿಯ ಗ್ರಾಮಸ್ಥರು ಯಾವುದೇ ಜಾತಿ ಮತ ಬೇಧವಿಲ್ಲದೆ ತಮ್ಮಿಂದಾದ ಸಹಾಯಧನ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಾಗರಾಜ್ ಅವರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚವನ್ನು ಅವರ ಕುಟುಂಬದವರು ಬಯಸಿದರೆ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ನಿರ್ವಹಿಸಲಿದೆ ಎಂದು ಘೋಷಿಸಲಾಯಿತು. ವೇದಿಕೆಯಲ್ಲಿ ಜನಾರ್ಧನ ಗೌಡ ಶಾಂತಿತ್ತಡ್ಕ ಉಪಸ್ಥಿತರಿದ್ದರು. ಸಂಗ್ರಹವಾದ ರೂ.99,960ರಲ್ಲಿ ರೂ.23,500ನ್ನು ಅಂಬುಲೆನ್ಸ್‌ಗೆ ಹಾಗೂ ಉಳಿದ 75,560 ನ್ನು ಒಕ್ಕಲಿಗ ಗೌಡ ಸೇವಾ ಸಹಕಾರಿ ಸಂಘದಲ್ಲಿ FD ಇಟ್ಟು ಅದರ ಬಾಂಡನ್ನು ನಾಗರಾಜ್ ಪತ್ನಿಗೆ ನೀಡಲಾಯಿತು. ವೇದಿಕೆಯಲ್ಲಿ ಗ್ರಾ.ಪಂ.ಮಾಜಿ ಸದಸ್ಯ ಶಿವಚಂದ್ರ ನಿಡ್ಡೆಂಕಿ ಉಪಸ್ಥಿತರಿದ್ದರು. ಸೋಮೇಶ್ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.