ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಗೆ ವಿವೇಕರಥ ಆಗಮನ, ಸಭೆ

Puttur_Advt_NewsUnder_1
Puttur_Advt_NewsUnder_1

IMG_20160108_133917ನಿಡ್ಪಳ್ಳಿ: ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ನೂರು ವರ್ಷ ತುಂಬಿದ ಸಂಭ್ರಮಾಚರಣೆ ಪ್ರಯುಕ್ತ ವಿವೇಕಾನಂದ ಜಯಂತಿಯಂದು ನಡೆಯುವ ಕಾರ‍್ಯಕ್ರಮದ ಅಂಗವಾಗಿ ಹೊರಟ ವಿವೇಕಾನಂದ ರಥ ಜ.8 ರಂದು ಮಧ್ಯಾಹ್ನ ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆಗೆ ಆಗಮಿಸಿತು.

ರೆಂಜ ಶ್ರೀರಾಮ ನಗರ ಅಯ್ಯಪ್ಪ ಭಜನಾ ಮಂದಿರದಿಂದ ಪೂರ್ಣಾಕುಂಭ ಸ್ವಾಗತದೊಂದಿಗೆ ಮೆರವಣಿಗೆಯೊಂದಿಗೆ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ‍್ಯಕ್ರಮದಲ್ಲಿ ಪೆರ್ಲಂಪಾಡಿ ಶ್ರೀ ಷಣ್ಮುಖ ಫ್ರೌಢಶಾಲೆಯ ಅಧ್ಯಾಪಕ ಲೋಕಯ್ಯ.ಡಿ ಮಾತನಾಡಿ, ಭಾರತೀಯ ಸಂಸ್ಕೃತಿಯೊಂದಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದರೊಂದಿಗೆ ಆರಂಭವಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ನೂರರ ಸಂಭ್ರಮಾಚರಣೆ ಸಡಗರದಿಂದ ಆಚರಿಸುತ್ತಿರುವ ಮಹತ್ವದ ಬಗ್ಗೆ ತಿಳಿಸಿ ಜ.12ರಂದು ನಡೆಯುವ ಕಾರ‍್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ತಿಳಿಸಿದರು.

ರಥಕ್ಕೆ ಪುಷ್ಪಾರ್ಚನೆ ಮಾಡಿದ ಹಿರಿಯರಾದ ವೆಂಕಟ್ರಾವ್. ಬಿ ಕಾರ‍್ಯಕ್ರಮಕ್ಕೆ ಶುಭಹಾರೈಸಿದರು.

ಶಾಲಾ ಸಂಚಾಲಕ ಶಶಿಕುಮಾರ್ ಬೈಲಾಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಾಥ ರೈ ಗುತ್ತು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮುರಳಿ.ಎಚ್.ಕಜೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ವಂದಿಸಿದರು. ಶಿಕ್ಷಕರು, ಮಕ್ಕಳು, ಪೋಷಕರು ಪಾಲ್ಗೊಂಡರು.

IMG_20160108_134439

IMG_20160108_134846

IMG-20160108-WA0026

20160108001906

20160108001905 20160108001904

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.