Breaking News

ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ

Puttur_Advt_NewsUnder_1
Puttur_Advt_NewsUnder_1

IMG-20160108-WA0055ನಿಡ್ಪಳ್ಳಿ: ಬೆಟ್ಟಂಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸಾಮೂಹಿಕ ಹುಟ್ಟುಹಬ್ಬ ಆಚರಣೆಯು ಜ.8 ರಂದು ನಡೆಯಿತು.

ಮುಖ್ಯ ಅತಿಥಿಯಾದ ಮಂಗಳೂರು ಎಂ.ಆರ್.ಪಿ.ಎಲ್ ನ ಸೀತಾರಾಮ ರೈ ಕೈಕಾರ ಮಾತನಾಡಿ ಮಕ್ಕಳಲ್ಲಿ ಸರಿಯಾದ ಗುರಿ ಇರಬೇಕು. ತಮ್ಮ ಗುರುಗಳಿಗೆ ಹಾಗೂ ಹೆತ್ತವರಿಗೆ ವಿಧೇಯರಾಗಿ ಇದ್ದುಕೊಂಡು ಉತ್ತಮ ಗುಣ ನಡತೆಯೊಂದಿಗೆ ಗುರಿಯನ್ನು ಸಾಧಿಸುವ ಛಲ ಹೊಂದಿರಬೇಕು ಎಂದು ಕಿವಿಮಾತು ಹೇಳಿದರು. ಶಾಲಾ ಸಂಚಾಲಕ ಶಶಿಕುಮಾರ್ ಬೈಲಾಡಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮುರಳಿ.ಎಚ್.ಕಜೆಮೂಲೆ ಶುಭಹಾರೈಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಂಗನಾಥ ರೈ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಸುಮಾರು ೯೯ ಮಕ್ಕಳಿಗೆ ಮುಖ್ಯ ಅತಿಥಿ ಸೀತಾರಾಮ ರೈ ಕೈಕಾರ ವಿವಿಧ ಆದರ್ಶ ಪುರುಷರ ಜೀವನ ಚರಿತ್ರೆ ಹಾಗೂ ಕಥೆ ಪುಸ್ತಕಗಳನ್ನು ಕೊಡುಗೆಯಾಗಿ ವಿತರಿಸಿದರು. ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿ, ಸಹಶಿಕ್ಷಕಿ ಶ್ರೀವಿದ್ಯಾ ವಂದಿಸಿದರು. ಸಹಶಿಕ್ಷಕಿ ಸ್ವಾತಿ ಘಾಟೆ ನಿರೂಪಿಸಿದರು.

9ac6c860-7ecd-4514-ae40-9852f139caf7

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.