ಕಾಣಿಯೂರು ಏಲಡ್ಕದಲ್ಲಿ ಪ್ರತಿಷ್ಠಾ 8ನೇ ವಾರ್ಷಿಕೋತ್ಸವ

Puttur_Advt_NewsUnder_1
Puttur_Advt_NewsUnder_1

20160108000404

 ಭಕ್ತಿ ಭಾವದ ಆರಾಧನೆಯಿಂದ ಮನಶಾಂತಿ ಸಾಧ್ಯಪೂರ್ಣತ್ಮರಾಮ

 ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಸಾಮೂಹಿಕ ಭಜನೆಯಿಂದ, ಭಕ್ತಿ ಭಾವದ ಆರಾಧನೆಯಿಂದ ಮನಶಾಂತಿ ಸಿಗುತ್ತದೆ, ಊರಿನ ದೇವಾಲಯಗಳು ಕ್ರಿಯಾಶೀಲವಾಗಿದ್ದರೆ, ದೈವಾನುಗ್ರಹ ಪ್ರಾಪ್ತಿಯಾಗಿ ನಿರೀಕ್ಷಿತ ಫಲ ಸಿಗುತ್ತದೆ. ದೇವಸ್ಠಾನಕ್ಕೆ ನಿತ್ಯ ದರ್ಶನಕ್ಕೆ ಹೋದರೆ ಮುಕ್ತಿ ಪ್ರಾಪ್ತಿಯಾಗುತ್ತದೆ, ದೇವರನ್ನು ಭಕ್ತಿಯಿಂದ ಪೂಜಿಸುವುದರಿಂದ ನಮ್ಮ ಮನಸ್ಸನ್ನು ಶುದ್ಧಿಯಾಗಿಸಲು ಸಾಧ್ಯ ಎಂದು ಈಶ್ವರಮಂಗಲ ಪೂರ್ಣತ್ಮರಾಮರವರು ನುಡಿದರು. ಅವರು ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪ್ರಧಾನ ತಂತ್ರಿಗಳಾದ ಬ್ರಹ್ಮಶ್ರೀ ಬಿ. ಕೇಶವ ಜೋಗಿತ್ತಾಯರ ನೇತೃತ್ವದಲ್ಲಿ ಜ 8ರಂದು ನಡೆದ ಕಾಣಿಯೂರು ಗ್ರಾಮದ ಏಲಡ್ಕ ಎಂಬಲ್ಲಿರುವ ಶ್ರೀ ಶಿರಾಡಿ ರಾಜನ್ ದೈವ ಮತ್ತು ಶ್ರೀ ಚಾಮುಂಡಿ ದೈವ ಹಾಗೂ ಶ್ರೀ ಪರಿವಾರ ದೈವಗಳ ಪ್ರತಿಷ್ಠಾ 8ನೇ ವಾರ್ಷಿಕೋತ್ಸವ ಹಾಗೂ 48 ಕಾಯಿಯ ಶ್ರೀ ಗಣಪತಿ ಹೋಮದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿ, ಭಕ್ತಿಯಿಂದ ದೇವರನ್ನು ಪೂಜಿಸಿದಾಗ ಸ್ವಾತಿಕ ಬದುಕು ನಿರ್ಮಾಣವಾಗುತ್ತದೆ. ಊರಿನಲ್ಲಿ ಶಾಂತಿ ನೆಮ್ಮದಿ ನೆಲೆಯಿರಬೇಕಾದರೆ ಭೂತರಾಧನೆ ನಡೆಯಲೇಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಣಿಯೂರು ಏಲಡ್ಕ ಶ್ರೀ ಶಿರಾಡಿ ರಾಜನ್ ದೈವಸ್ಥಾನದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಾಧವ ಕಟ್ಟತ್ತಾರು ವಹಿಸಿ ಶುಭಹಾರೈಸಿದರು. ಕಾಣಿಯೂರು ಗ್ರಾ.ಪಂ ಅಧ್ಯಕ್ಷೆ ಸೀತಮ್ಮ ಖಂಡಿಗರವರು ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಸಮಿತಿಯ ಆಡಳಿತ ಮೊಕ್ತೇಸರರಾದ ಶೀನಪ್ಪ ಗೌಡ ಪೆರ್ಲೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀನತ್ ಕೆನ್ನಾರ್,  ತಿಮ್ಮಪ್ಪ ಗೌಡ ಅನಿಲ, ಕೇಶವ ಗೌಡ ಕಟ್ಟತ್ತಾರು, ಹೇಮನಾಥ ಮೀಜೆ ಅತಿಥಿಗಳನ್ನು ಗೌರವಿಸಿದರು. ಜಿರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಲೀಲಾವತಿ ಜನಾರ್ದನ ಮಲೆಕೆರ್ಚಿ ಪ್ರಾರ್ಥಿಸಿ, ರಾಘವೇಂದ್ರ ಕೆನ್ನಾರ್ ವಂದಿಸಿದರು. ಕಾಣಿಯೂರು ಗ್ರಾ.ಪಂ ಸದಸ್ಯ ರಾಮಣ್ಣ ಗೌಡ ಮುಗರಂಜ ಕಾರ್ಯಕ್ರಮ ನಿರೂಪಿಸಿದರು.ಬೆಳಿಗ್ಗೆ ಸ್ವಸ್ತಿ ಪುಣ್ಯಾಹ ವಾಚನ, ದೈವತಾ ಪ್ರಾರ್ಥನೆ, ಕಲಶಾಭಿಷೇಕ, 48 ಕಾಯಿಯ ಗಣಪತಿ ಹೋಮ, ಪೂರ್ಣಾಹುತಿ, ಮಹಾಪೂಜೆ ನಡೆಯಿತು.ಮಧ್ಯಾಹ್ನ ಸಾರ್ವಾಜನಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.