ಕೆಎಸ್‌ಆರ್‌ಟಿಸಿ ನಿತ್ಯ ಪ್ರಯಾಣಿಕರ ಮಾಸಿಕ ಬಸ್ ಪಾಸ್ ದರ ಏರಿಕೆಗೆ ಅಸಮಾಧಾನ, ಇಳಿಕೆಗೆ ಸಚಿವರಿಗೆ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು, ಸುಳ್ಯ, ಮಂಗಳೂರು ಮಧ್ಯೆ ಉದ್ಯೋಗ ನಿಮಿತ್ತ ಪ್ರತಿ ನಿತ್ಯ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಾ ಮಾಸಿಕ ಪಾಸ್ ಹೊಂದಿದ್ದ ಪ್ರಯಾಣಿಕರ ಪಾಸ್ ದರವನ್ನು ಒಮ್ಮೆಗೆ 40 ಶೇಕಡಾ ಏರಿಕೆ ಮಾಡಲಾಗಿ ಪ್ರಸಕ್ತ ಇರುವ ದರದಲ್ಲಿ 800 ರೂಪಾಯಿಯನ್ನು ಏರಿಕೆ ಮಾಡಲಾಗಿದ್ದು, ಇದು ಅತ್ಯಂತ ದುಬಾರಿ ಆಗಿದೆ ಇದನ್ನು ಇಳಿಸಬೇಕು ಎಂದು ನಿತ್ಯ ಪಾಸ್ ಹೊಂದಿರುವ ಪ್ರಯಾಣಿಕರು ಪುತ್ತೂರು ಶಾಸಕರ ಮೂಲಕ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

 ಕಳೆದ ಅಕ್ಟೋಬರ್ ತನಕ ಸುಳ್ಯದಿಂದ ಮಂಗಳೂರುಗೆ ೨೦೮೦ ರೂಪಾಯಿ ಇದ್ದುದನ್ನು ಏಕಾಏಕಿಯಾಗಿ ೨೮೫೦ಕ್ಕೆ ಏರಿಕೆ ಮಾಡಲಾಗಿದೆ, ಇದು ನಿರ್ಧಿಷ್ಠ ಸಂಬಳ ಪಡೆದು ದುಡಿಯುವ ಉದ್ಯೋಗಿಗಳಿಗೆ ಹೊರೆಯಾಗಿದ್ದು, ಏರಿಕೆಯಾದ ದರವನ್ನು ಭರಿಸಲಾಗದೆ, ಬಸ್ ಪಾಸು ನವೀಕರಿಸಲಾಗದೆ ಕಡಿಮೆ ದರದಲ್ಲಿ ಕೊಂಡೊಯ್ಯುವ ಖಾಸಗಿ ಟೆಂಪೋ, ಟ್ರಕ್‌ಗಳನ್ನು ಅವಲಂಭಿಸುವಂತಾಗಿದ್ದು, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕೈಗೊಂಡು ಈ ಹಿಂದಿನ ದರವನ್ನು ನಿಗದಿ ಪಡಿಸಿ ಸಹಕರಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. ಶಾಸಕರ ಮೂಲಕ ನೀಡಲಾಗಿರುವ ಮನವಿಯಲ್ಲಿ ಮಾಜಿ ಸೈನಿಕ ಕೃಷ್ಣಪ್ಪ ಅವರನ್ನು ಒಳಗೊಂಡಂತೆ ಸುಮಾರು ೭೦ಕ್ಕೂ ಹೆಚ್ಚು ಬಸ್ಸು  ಪಾಸುದಾರರು ಸಹಿ ಹಾಕಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.