ಕೋಡಿಂಬಾಳ ವಿಶೇಷ ಗ್ರಾಮ ಸಭೆ

Puttur_Advt_NewsUnder_1
Puttur_Advt_NewsUnder_1

9ಕಡಬ: ಕಡಬ ಗ್ರಾ.ಪಂ. ವ್ಯಾಪ್ತಿಯ ಕಡಬ, ಕೋಡಿಂಬಾಳ ಗ್ರಾಮಗಳ ಮುಂದಿನ ೫ ವರ್ಷಗಳ ಅವಧಿಗೆ ಅಭಿವೃದ್ದಿ ಯೋಜನೆಗಳ ತಯಾರಿ ಮತ್ತು 2016-17ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕ್ರಿಯಾಯೋಜನೆಯ ತಯಾರಿ ಬಗ್ಗೆ ಅಂಬೇಡ್ಕರ್ ಭವನದಲ್ಲಿ ಜ.7 ರಂದು ವಿಶೇಷ ಗ್ರಾಮ ಸಭೆ ನಡೆಸಲಾಯಿತು. ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಆಗಬೇಕಾದ ಅಭಿವೃದ್ದಿಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ ಉದ್ಯೋಗ ಖಾತರಿಯಲ್ಲಿ ಎಲ್ಲರೂ ತೊಡಗಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕೆಂದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಾಹಿತಿ ನೀಡಿ ಉದ್ಯೋಗ ಖಾತರಿ ಯೋಜನೆಯಲ್ಲಿ ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳುವಲ್ಲಿ ವಿರಳವಾಗುತ್ತಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಆರ್‌ಇಜಿ ಯಲ್ಲಿ ತೊಡಗಿಸಿಕೊಂಡು ತಮ್ಮ ಭೂಮಿಯಲ್ಲಿ ವ್ಯಯಕ್ತಿಕ ಅಭಿವೃದ್ದಿ ಪಡಿಸುವುದಲ್ಲದೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾ.ಪಂ.ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ ಸಾರ್ವಜನಿಕರು ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಮುಂದೆ ಬರಬೇಕೆಂದರು. ಗ್ರಾ.ಪಂ.ಸದಸ್ಯ ಹನೀಫ್ ಕೆ.ಎಂ ಮಾತನಾಡಿ ಬೆಂಗಳೂರಿನ ಭೌಗೋಳಿಕ ಸನ್ನಿವೇಶ ಹಾಗೂ ಈ ಜಿಲ್ಲೆಯ ಬೌಗೋಳಿಕ ವ್ಯತ್ಯಾಸವಿದ್ದು ನಾವಿಲ್ಲಿಯ ವ್ಯವಸ್ಥೆಗಳಿಗೆ ಅನುಗುಣವಾಗಿ ಯೋಜನೆಯ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲದೆ ಅಲ್ಲಿಯ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿದರೆ ಜನರಿಗೆ ಪ್ರಯೋಜನವಾಗುವುದಿಲ್ಲ ಎಂದರು.
ಸದಸ್ಯ ಫಝಲ್ ಮಾತನಾಡಿ ಇದು ೫ ವರ್ಷದ ಕ್ರಿಯಾಯೋಜನೆ ಆದ ಕಾರಣ ಈ ಭಾಗದ ಎಲ್ಲಾ ಕೃಷಿಗಳಿಗೆ ಅನುಗುಣವಾಗಿ ಅಭಿವೃದ್ದಿಯ ದೃಷ್ಟಿಯಿಂದ ಅರ್ಜಿ ಪಡಕೊಂಡು ಯೋಜನೆಯ ಪ್ರತಿಫಲ ಪಡೆಯುವಂತೆ ಸರಕಾರದ ಮೇಲೆ ಒತ್ತಡ ತರುವುದು ನಮ್ಮ ಕರ್ತವ್ಯವಾಗಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಎಲ್ಲರಿಗೂ ಪ್ರಯೋಜನವಾಗುವಂತಾಗಬೇಕೆಂದರು.
ಅಂಗನವಾಡಿಗಳಿಗೆ ಕುಡಿಯುವ ನೀರನ ಸಮರ್ಪಕ ವ್ಯವಸ್ಥೆ ಆಗಬೇಕೆಂದು ಕಳಾರ ಅಂಗನವಾಡಿ ಕಾರ್ಯಕರ್ತೆ ಸುಶೀಲ ಹಾಗೂ ಪುಳಿಕುಕ್ಕು ಅಂಗನವಾಡಿ ಕಾರ‍್ಯಕರ್ತೆ ಮರಿಯಮ್ಮ ಒತ್ತಾಯಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಹ್ಮದ್‌ಕುಂಞಿ ರವರು ಅಂಗನವಾಡಿಯಲ್ಲಿ ಪುಟ್ಟ ಮಕ್ಕಳಿಗೆ ಪಾಲನೆ ಪೋಷಣೆ ಮಾಡುವ ಕಾರ‍್ಯಕರ್ತೆಯರ ಮಾತನ್ನು ಗಣನೆಗೆ ತೆಗೆದುಕೊಂಡು ಅವರ ಸಮಸ್ಯೆಗೆ ಸ್ಪಂದಿಸುವುದು ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಗಿರಿಶ್ ಎಸ್.ಆರ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಸದಸ್ಯರಾದ ಆನಂದ ಗೌಡ ಪಡೆಜ್ಜಾರು, ನಾರಾಯಣ ಪೂಜಾರಿ, ಹರ್ಷ, ಮಾಧವ ಕೆ, ನೀಲಾವತಿ ಶಿವರಾಂ, ಶಾಲಿನಿ ಸತೀಶ್ ನೈಕ್, ಜಯಂತಿ ಗಣಪಯ್ಯ, ಸರೋಜಿನಿ ಎಸ್ ಆಚಾರ್, ಜಯಲಕ್ಷ್ಮಿ, ನೇತ್ರ, ಸುಶೀಲ, ಸಂದ್ಯಾ, ಯಶೋಧ, ಉಪಸ್ಥಿತರಿದ್ದರು. ಅಂಗನವಾಡಿ ಕಾರ‍್ಯಕರ್ತೆಯರಾದ ರುಕ್ಮಿಣಿ ಅಡ್ಡಗದ್ದೆ, ಗಂಗಮ್ಮ ಪಿಜಕ್ಕಳ, ವಿಮಲ ಮೂರಾಜೆ, ಮಮತ ಕೊಪ್ಪ, ವಿಮಲ ಕಡಬ, ಪವಿತ್ರಲತಾ ಕಲ್ಲಂತಡ್ಕ, ನಳಿನಿ ಚರ್ಚ್, ಜಯಶ್ರೀ ಕೊರಂದೂರು, ಪದ್ಮಾವತಿ ಮಡ್ಯಡ್ಕ, ಸೇರಿದಂತೆ ಹಲವಾರು ಸಾರ್ವಜನಿಕರು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡರು.
ಗ್ರಾ.ಪಂ.ಕಾರ‍್ಯದರ್ಶಿ ಆನಂದ ಸ್ವಾಗತಿಸಿ, ಸಿಬ್ಬಂದಿ ಹರೀಶ್ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.