ರಾಮಕುಂಜ: ವಿದ್ಯಾರ್ಥಿಗಳಿಗೆ ಪಶು ವೈದ್ಯಕೀಯ ಮಾಹಿತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1

10ಆಲಂಕಾರು: ರಾಮಕುಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ವರ್ಣ ಮಹೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪಶು ವೈದ್ಯಕೀಯ ಮಾಹಿತಿ ಕಾರ್ಯಗಾರ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ದ.ಕ ಜಿಲ್ಲಾ ಕೆ.ಎಂ.ಎಫ್ ವೈದ್ಯರಾದ ಡಾ|ರಾಮಕೃಷ್ಣ ಭಟ್ ರವರು ಪಶು ವೈದ್ಯಕೀಯ ವಿಜ್ಞಾನಕ್ಕೆ ಆದ್ಯತೆ ನೀಡಿ, “ನಮ್ಮ ನಾಡಿಗೆ ಪಶು ವೈದ್ಯಕೀಯ ವಿಜ್ಞಾನ ಪದವೀಧರರು ಬಹು ಸಂಖ್ಯೆಯಲ್ಲಿ ಬೇಕಾಗಿದ್ದಾರೆ. ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೈನ್ಸ್ ಗಳಲ್ಲಿ ಇರುವ ಆಸಕ್ತಿ ಪಶು ವೈದ್ಯಕೀಯ ವಿಭಾಗದಲ್ಲಿ ಇಲ್ಲದಿರುವುದು ಅಚ್ಚರಿಯನ್ನು ಹುಟ್ಟಿಸುತ್ತದೆ ” ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಎಂ ಸತೀಶ್ ಭಟ್, ಪ್ರಾಂಶುಪಾಲರು ವಹಿಸಿದ್ದರು. ವಿಸ್ತರಣಾಧಿಕಾರಿ  ಮಂಜುನಾಥ್, ಸಂಘದ ಅಧ್ಯಕ್ಷ ಪಿ. ರಾಮಭಟ್, ವಿಜ್ಞಾನ ವಿಭಾಗದ ಸಂಯೋಜಕ  ಗಣರಾಜ ಕುಂಬ್ಳೆ ಸ್ವಾಗತಿಸಿದರು, ಶ್ರೇಯಾ ಹಾಗೂ  ಶ್ರೀರಶ್ಮಿ ಪ್ರಾರ್ಥನೆ ಗೀತೆ ಹಾಡಿದರು, ಉಪನ್ಯಾಸಕಿ  ಅಶ್ವಿತಾ ರೈ ಪ್ರಾಸ್ತವಿಕ ಮಾತುಗಳನ್ನಾಡಿದರು. ವಂಶಿ ತಮ್ಮ ಅಭಿಪ್ರಾಯ ಮಂಡಿಸಿದರು, ಭವಿತ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.