Breaking News

ಪಡೀಲ್ ಮದ್ರಸದಲ್ಲಿ ಈದ್‌ಮಿಲಾದ್ ಆಚರಣೆ

Puttur_Advt_NewsUnder_1
Puttur_Advt_NewsUnder_1

padil

padil1

ಪುತ್ತೂರು: ಪಡೀಲ್ ಮೊನುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಮದ್ರಸ ಸಮಿತಿ ಇದರ ಆಶ್ರಯದಲ್ಲಿ ಈದ್ ಮಿಲಾಸ್ ಕಾರ್ಯಕ್ರಮ ನಡೆಸಲಾಯಿತು. ಇದರ ಅಂಗವಾಗಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪುತ್ತೂರು ಅನ್ಸಾರುದ್ದೀನ್ ಜಮಾ‌ಅತ್ ಕಮಿಟಿಯ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ ವಹಿಸಿದ್ದರು. ಪುತ್ತೂರು ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ದುವಾಃ ಆಶೀರ್ವಚನ ನೀಡಿ ಬಳಿಕ ಮದ್ರಸದಲ್ಲಿ ಸ್ಥಾಪಿಸಲಾದ ಗ್ರಂಥಾಲಯವನ್ನು ಉದ್ಘಾಟಿಸಿ ಈದ್‌ಮಿಲಾದ್‌ನ ಮಹತ್ವವನ್ನು ವಿವರಿಸಿದರು. ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ್ದ ಪುತ್ತೂರು ಬದ್ರಿಯಾ ಮಸೀದಿಯ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿರವರು ಮಾತನಾಡಿ, ಧಾರ್ಮಿಕ ಹಾಗೂ ಲೌಖಿಕ ವಿದಾಭ್ಯಾಸದೊಂದಿಗೆ ಉತ್ತಮವಾದ ಗ್ರಂಥಗಳನ್ನು ಧಾರ್ಮಿಕ ಪುಸ್ತಕಗಳನ್ನು ಓದುವ ಮೂಲಕ ನಮ್ಮಲ್ಲಿರುವ ಜ್ಞಾನವನ್ನು ವೃದ್ಧಿಸಿಕೊಳ್ಳಲು ಗ್ರಂಥಾಲಯಗಳು ಸಹಕಾರಿಯಾಗಲಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಸಾಲ್ಮರ ಸಯ್ಯದ್ ಮಲೆ ಜುಮಾ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ರವರು ಮಾತನಾಡಿ, ಮುಸ್ಲಿಂ ಮಹಿಳೆಯರ ಮಾನ ಮುಚ್ಚುವ ಬುರ್ಖಾಗಳು ಇಂದು ದುರುಪಯೋಗ ವಾಗುತ್ತಿರುವುದಕ್ಕೆ ಕಡಿವಾಣ ಹಾಕುವ ಅತ್ಯವಶ್ಯಕತೆ ಇದೆ ಎಂದು ಅವರು ನುಡಿದರು.

ಮುಖ್ಯ ಅತಿಥಿಗಳಾಗಿ ಪಡೀಲ್ ಮೊನುಲ್ ಇಸ್ಲಾಂ ಜುಮಾ ಮಸೀದಿಯ ಖತೀಬ್ ಹನೀಫ್ ದಾರಿಮಿ ಪುತ್ತೂರು ಅನ್ಸಾರುದ್ದೀನ್ ಜಮಾ‌ಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಲ್.ಟಿ ರಝಾಕ್ ಹಾಜಿ, ಜೊತೆ ಕಾರ್ಯದರ್ಶಿ ಶೇಖ್ ಜೈನುದ್ದೀನ್, ಪುತ್ತೂರು ಎ.ಪಿ.ಎಂ.ಸಿ ನಿರ್ದೇಶಕ ವಿ.ಹೆಚ್ ಅಬ್ದುಲ್ ಶಕೂರು ಹಾಜಿ ಆಗಮಿಸಿದ್ದರು. ಮಕ್ಕಳಿಗೆ ನಡೆಸಲಾದ ವಿವಿಧ ಇಸ್ಲಾಮಿಕ್ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ  ಬಹುಮಾನ ವಿತರಿಸಲಾಯಿತು. ಪಡೀಲ್ ಮೊನುಲ್ ಮಸೀದಿ ಮದ್ರಸದ ಅಧ್ಯಕ್ಷ ಯು.ಮುಹಮ್ಮದ್ ಹಾಜಿ ಸ್ವಾಗತಿಸಿ ವಂದಿಸಿದರು. ಉಪಾಧ್ಯಕ್ಷ ಇಬ್ರಾಹಿಂ ಹಾಜಿ ಪಡೀಲ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಚಿಕ್ಕಪುತ್ತೂರು, ಜೊತೆ ಕಾರ್ಯದರ್ಶಿ ಅಬ್ದುಲ್ ರಝಾಕ್ ಆರ್.ಪಿ, ಉಪಾಧ್ಯಕ್ಷ ರಝಾಕ್ ಆರ್.ಟಿ.ಎ, ಪಡೀಲ್ ಯೆಂಗ್‌ಮೆನ್ಸ್‌ನ ಅಧ್ಯಕ್ಷ ಅಬ್ದುಲ್ ಅಝೀಝ್, ಮದ್ರಸದ ಅಧ್ಯಾಪಕರುಗಳಾದ ಇಬ್ರಾಹಿಂ ಮುಸ್ಲಿಯಾರ್, ಇಬ್ರಾಹಿಂಸಾಲ್ಮರ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಮದ್ರಸ ವಿದ್ಯಾರ್ಥಿಗಳಿಂದ ಬುರ್ದಾ ಮಜ್ಲೀಸ್ ಕಾರ್ಯಕ್ರಮ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.