Breaking News

ಜ.10: ಈಶ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ – ಈಶ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ ಎಜ್ಯುಕೇಶನಲ್ ಆಂಡ್ ಸೋಶಿಯಲ್ ಸರ್ವೀಸ್ ಟ್ರಸ್ಟ್ ನ ಆಡಳಿತದಲ್ಲಿ ನಡೆಸಲ್ಪಡುವ ಈಶ ಶಿಕ್ಷಣ ಸಂಸ್ಥೆ, ಈಶ ಕಂಪ್ಯೂಟರ್ ಶಿಕ್ಷಣ ಸಂಸ್ಥೆ, ಈಶ ಮೊಂಟೆಸರಿ ಅಧ್ಯಾಪಿಕೆಯರ ತರಬೇತಿ ಶಿಕ್ಷಣ ಸಂಸ್ಥೆ ನೆಲ್ಲಿಕಟ್ಟೆ, ಈಶ ಶಿಕ್ಷಣ ಸಂಸ್ಥೆ ವಿಟ್ಲ, ರೆಂಜ ಬೆಟ್ಟಂಪಾಡಿಯ ಈಶ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಕಾರ‍್ಯಕ್ರಮ ಜ.10ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಜರುಗಲಿದ್ದು, 2016ರ ಈಶ ಪ್ರಶಸ್ತಿ ಗೌರವ ಸನ್ಮಾನ ಕಾರ‍್ಯಕ್ರಮ ನಡೆಯಲಿದೆ.

ಬೆಳಿಗ್ಗೆ ಮೂಡಾಯೂರು ಯಮುನಾ ಮಹಾಲಿಂಗ ಪಾಟಾಳಿ ಮತ್ತು ಮಹಾಲಿಂಗ ಪಾಟಾಳಿಯವರು ಕಾರ‍್ಯಕ್ರಮ ಉದ್ಘಾಟಿಸಲಿದ್ದಾರೆ. ಈಶ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಯಾಕೂಬ್ ಮುಲಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಕ್ಷೇವಿಯರ್ ಡಿ’ಸೋಜ, ಸವಣೂರು ಸ.ಪ.ಪೂ ಕಾಲೇಜಿನ ಉಪನ್ಯಾಸಕ ಬಿ.ವಿ.ಸೂರ್ಯನಾರಾಯಣ, ಸಮೂಹ ಸಂಪನ್ಮೂಲ ವ್ಯಕ್ತಿ ಶಾಲಿನಿ ಶೆಟ್ಟಿ ಬಿ, ಬಿ.ಸಿ.ರೋಡ್ ಎಚ್.ಡಿ.ಎಸ್ ಕಂಪ್ಯೂಟರ್ ಮುಖ್ಯಸ್ಥ ಲಕ್ಷ್ಮೀದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಾಲೆತ್ತೋಡಿ ಸ.ಕಿ.ಪ್ರಾ.ಶಾಲೆಯ ಮುಖ್ಯಗುರು ತಿಮ್ಮಪ್ಪ ಮಾಲೆತ್ತೋಡಿಯವರಿಗೆ 2016ರ  ಈಶ ಪ್ರಶಸ್ತಿ ಪ್ರದಾನ ಮತ್ತು ಕಣಿಯಾರ್‌ಬೈಲ್ ಸ.ಕಿ.ಪ್ರಾ.ಶಾಲೆಯ ವೇದಾವತಿಯವರಿಗೆ ವಿಶೇಷ ಗೌರವ ಸಮಾರಂಭ ನಡೆಯಲಿದೆ. ಸಮಾರಂಭದ ಬಳಿಕ ಮನೋರಂಜನಾ ಕಾರ‍್ಯಕ್ರಮ ಜರುಗಲಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಗೋಪಾಲಕೃಷ್ಣ ಎಂ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.