ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ ಮದರಸದಲ್ಲಿ ಮಿಲಾದುನ್ನೆಬಿ ಆಚರಣೆ – ಸೌಹಾರ್ದ ಸಂಗಮ

Puttur_Advt_NewsUnder_1
Puttur_Advt_NewsUnder_1

kalluguddeಕಡಬ: ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನೂರುಲ್ ಹುದಾ ಮಸ್ಜಿದ್ ಮದರಸದಲ್ಲಿ ಜ.7 ರಂದು ಮಿಲಾದುನ್ನೆಬಿ ಆಚರಣೆ ನಡೆಯಿತು. ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಪಿ.ಪಿ.ವರ್ಗೀಸ್ ಆಗಮಿಸಿ ಶುಭಹಾರೈಸಿದರಲ್ಲದೆ ಮದರಸ ಕಟ್ಟಡಕ್ಕೆ ಗ್ರಾ.ಪಂ.ವಿಶೇಷ ಅನುದಾನದಲ್ಲಿ ರೂ.50 ಸಾವಿರ ನೀಡುವುದಾಗಿ ಘೋಷಿಸಿದರು.

ಎಲ್ಲಾ ಮೂಲ ಸೌಕರ್ಯಗಳನ್ನೊಳಗೊಂಡ ನೂಜಿಬಾಳ್ತಿಲ ಗ್ರಾ.ಪಂ.ನ ನೂಜಿಬಾಳ್ತಿಲ ದೇವಸ್ಥಾನ ಚರ್ಚ್‌ಗಳೊಂದಿಗೆ ಅತೀ ವಿರಳ ಸಂಖ್ಯೆಯಲ್ಲಿ ವಾಸಿಸುತ್ತಿರುವ ಮುಸ್ಲಿಂ ಕುಟುಂಬಸ್ಥರಿಗೆ ತಮ್ಮ ಆರಾಧನ ಕೇಂದ್ರವಾಗಿ ಇಲ್ಲಿ ಒಂದು ಮಸೀದಿ ನಿರ್ಮಿಸಿಕೊಂಡಿದ್ದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಒಂದು ಮದರಸ ಅವಶ್ಯಕತೆ ಇದೆ ಎಂದು ಕೇಳಿಕೊಂಡಂತೆ ನಮ್ಮ ಪಂಚಾಯತ್‌ನಿಂದಲೂ ಪಂಚಾಯತ್‌ನ ಸರ್ವತೋಮುಖ ಅಭಿವೃದ್ಧಿಗೆ ಬಂದಂತಹ ವಿಶೇಷ ಅನುದಾನದಲ್ಲಿ ರೂ.50 ಸಾವಿರವನ್ನು ನೀಡುವುದಾಗಿ ತಿಳಿಸಿದ ಅವರು ಈ ಊರಿನಲ್ಲಿ ಎಲ್ಲಾ ಜಾತಿ ಧರ್ಮದವರು ಅನ್ಯೋನ್ಯತೆಯಿಂದ ಪ್ರೀತಿ ವಾತ್ಸಲ್ಯದಿಂದ ಬಾಳುತ್ತಿರುವುದು ನಮ್ಮ ಹಿಂದಿನ ಪೂರ್ವಜರ ಪುಣ್ಯದ ಫಲವಾಗಿದೆ. ಇನ್ನು ಮುಂದೆಯೂ ನಾವು ಇದೇ ರೀತಿ ಒಂದೇ ತಾಯಿ ಮಕ್ಕಳಂತೆ ಭಾವೈಕ್ಯತೆಯಿಂದ ಬಾಳಲು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.

ಕಡಬ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಲ್‌ಹಾದಿ ಸಯ್ಯದ್ ಇಸ್ಮಾಯಿಲ್ ತಂಗಳ್ ದುಃವಾ ಆಶೀರ್ವಚನ ನೀಡಿ ಎಲ್ಲರ ಸಹಕಾರದೊಂದಿಗೆ ಇಲ್ಲಿ ದೀನಿ ವಿದ್ಯಾಭ್ಯಾಸ (ಮದರಸ) ಕಟ್ಟಡ ಅತೀ ಶೀಘ್ರದಲ್ಲಿ ನಿರ್ಮಿಸುವಂತಾಗಲಿ ಎಂದು ಪ್ರಾರ್ಥಿಸಿದರು. ಕಡಬ ಕೇಂದ್ರ ಜುಮ್ಮಾ ಮಸೀದಿ ಸದರ್‌ಮುಹಲ್ಲಿಂ ಇಲ್ಯಾಸ್ ಮದನಿ ಪ್ರಭಾಷಣಗೈದರು. ನೂಜಿಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ ಆಗಮಿಸಿ ಶುಭಹಾರೈಸಿದರು. ಕಲ್ಲುಗುಡ್ಡೆ ನೂರುಲ್ ಹುದಾ ಮದರಸದ ಸದರ್‌ಮುಹಲ್ಲಿಂ ಮುಸ್ತಫಾ ಸಹದಿ ಮೌಲೂದ್ ಪಾರಾಯಣದ ನೇತೃತ್ವ ವಹಿಸಿದ್ದರು.

ಕಲ್ಲುಗುಡ್ಡೆ ನೂರುಲ್ ಹುದಾ ಮಸೀದಿ ಮದರಸದ ಕಮಿಟಿ ಅಧ್ಯಕ್ಷ ಖಾದರ್ ಸಾಹೇಬ್ ಕಲ್ಲುಗುಡ್ಡೆ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಡ್ಡಗದ್ದೆ ಮದರಸದ ಹಜರತ್ ಮುಹಮ್ಮದ್ ನಹೀಮ್ ರಝಾ,  ಕೇಪು ಮದರಸದ ಹಜರತ್ ಮಹಮ್ಮದ್ ಯೂನುಸ್ ರಝಾ,  ಕಡಬ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಜಿ.ಪಂ.ಮಾಜಿ ಸದಸ್ಯ ಹಾಜಿ ಸಯ್ಯದ್ ಮೀರಾಸಾಹೇಬ್, ಕಡಬ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್ ಶರೀಫ್, ಮಸೀದಿ ಕಟ್ಟಡ ನಿರ್ಮಿಸಿಕೊಟ್ಟ ಸಯ್ಯದ್ ನಿಸಾರ್ ಅಹ್ಮದ್ ಪುತ್ತೂರು, ಕಡಬ ಕೇಂದ್ರ ಜುಮ್ಮಾ ಮಸೀದಿಯ ಸ್ವಲಾತ್ ಕಮಿಟಿ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಎಸ್.ಇ.ಎಸ್, ಹಾಲಿ ಅಧ್ಯಕ್ಷ ಅಬ್ದುಲ್ ಖಾದರ್ ಮಾಸ್ಟ್ರು, ಕೋಡಿಂಬಾಳ ಜುಮ್ಮಾ ಮಸೀದಿಯ ಪ್ರಧಾನ ಕಾರ‍್ಯದರ್ಶಿ ಕಡಬ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಹಾಲಿ ಸದಸ್ಯರಾದ ಫಝಲ್ ಕೋಡಿಂಬಾಳ, ಕೇಂದ್ರ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಕಡಬ ಗ್ರಾ.ಪಂ. ಸದಸ್ಯ ಆದಂ ಕುಂಡೋಳಿ, ಇಬ್ರಾಹಿಂ ಅಲೆಕ್ಕಾಡಿ, ಕಲ್ಲುಗುಡ್ಡೆ ಮದರಸದ ನಿಕಟಪೂರ್ವ ಸದರ್‌ಮುಹಲ್ಲಿ ಅಬ್ದುಲ್ ರಝಾಕ್ ಭಾಖವಿ, ಕಡಬ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಪ್ರಧಾನ ಕಾರ‍್ಯದರ್ಶಿ ಹಾಜಿ ಹಮೀದ್ ಎಚ್.ಕೆ, ಜೊತೆ ಕಾರ‍್ಯದರ್ಶಿ ಇಬ್ರಾಹಿಂ ಕೋಡಿಬೈಲ್, ಕಲ್ಲುಗುಡ್ಡೆ ಮದರಸ ಕಮಿಟಿ ಗೌರವಾಧ್ಯಕ್ಷ ಅಬ್ದುಲ್ ಖಾದರ್.ಕೆ, ಕೋಶಾಧಿಕಾರಿ ಶೇಖ್ ದಾವೂದ್ ಸಾಹೇಬ್  ಉಪಸ್ಥಿತರಿದ್ದರು. ಕಲ್ಲುಗುಡ್ಡೆ, ಕಡಬ, ಕೇಪು, ಅಡ್ಡಗದ್ದೆ, ಮರ್ದಾಳ ಮದರಸದ ವಿದ್ಯಾರ್ಥಿಗಳಿಗೆ ಪೈಗಂಬರ ಜನ್ಮದಿನಾಚರಣೆ ಬಗ್ಗೆ ವಿವಿಧ ಭಾಷಣ ಕಥಾಪ್ರಸಂಗ, ಹಾಡುಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ಕಲಿಕೆಯಲ್ಲಿ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕಲ್ಲುಗುಡ್ಡೆ ರಿಯದ್ ಸಹದಿ ಸ್ಪರ್ಧಾ ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟರು. ಕಾರ‍್ಯದರ್ಶಿ ತಾಹಿರ್ ಸ್ವಾಗತಿಸಿ, ಜೊತೆ ಕಾರ‍್ಯದರ್ಶಿ ಮಜೀದ್ ವಂದಿಸಿದರು. ಉಪಾಧ್ಯಕ್ಷ ಇಸಾಕ್, ಸದಸ್ಯರಾದ ಶೆರೀಫ್, ಸತ್ತಾರ್ ಸಹಕರಿಸಿದರು. ಕೊನೆಗೆ ಎಲ್ಲರಿಗೂ ಅನ್ನದಾನ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.