ಕಲ್ಲುಗುಡ್ಡೆ ಶಾಲಾ ಬಯಲು ರಂಗಮಂದಿರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

rangamandira udgataneಕಡಬ: ನೂಜಿಬಾಳ್ತಿಲ ಗ್ರಾಮದ ಕ್ಲಲುಗುಡ್ಡೆ ಸ.ಉ.ಹಿ.ಪ್ರಾ.ಶಾಲಾ ಮೈದಾನದಲ್ಲಿ ನೂತನವಾಗಿ ನಿರ್ಮಿಸಿದ ಬಯಲು ರಂಗಮಂದಿರವನ್ನು ಜ.9 ರಂದು ಉದ್ಘಾಟಿಸಲಾಯಿತು. ಪುತ್ತೂರು ತಾ.ಪಂ.ಅಧ್ಯಕ್ಷೆ ಪುಲಸ್ತ್ಯಾ ರೈ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಜಿ.ಪಂ.ಸದಸ್ಯೆ ಕುಮಾರಿ ವಾಸುದೇವನ್ ನಿವೃತ್ತ ಮುಖ್ಯಗುರು ಸುಂದರ ಗೌಡ, ಕಟ್ಟಡ ಕಂಟ್ರಾಕ್ಟರ್ ಉಮೇಶ್ ಶೆಟ್ಟಿ ಸಾಯಿರಾಂ ಮಾತನಾಡಿದರು.

ಸಭಾಧ್ಯಕ್ಷತೆ ವಹಿಸಿದ ನೂಜಿಬಾಳ್ತಿಲ ಗ್ರಾ.ಪಂ.ಅಧ್ಯಕ್ಷ ಪಿ.ಪಿ.ವರ್ಗೀಸ್‌ರವರು ಮಾತನಾಡಿ ಜಿ.ಪಂ.1 ಲಕ್ಷ, ತಾ.ಪಂ.90ಸಾವಿರ ಹಾಗೂ ಕಳೆದ ವಜ್ರಮಹೋತ್ಸವ ಆಚರಣೆಯಲ್ಲಿ ಉಳಿಕೆ ರೂ.82 ಸಾವಿರದಲ್ಲಿ 70 ಸಾವಿರ ಸೇರಿಸಿ ಅತ್ಯುತ್ತಮ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಇನ್ನು ಇದರ ಅಭಿವೃದ್ಧಿಯಲ್ಲಿ ನಮ್ಮ ಗ್ರಾ.ಪಂ.ನಿಂದ ಅನುದಾನ ನೀಡಲಾಗುವುದು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋನಪ್ಪ ಗೌಡ ತೆಂಗಿನ ಕಾಯಿ ಒಡೆದು ಒಳಪ್ರವೇಶಿಸುವುದರೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಪಂಚಾಯತ್ ಸದಸ್ಯರಾದ ಹೊನ್ನಮ್ಮ ಪಾಲೆತ್ತಡ್ಕ, ರಾಮಚಂದ್ರ, ಸಿವಿಲ್ ಇಂಜಿನಿಯರ್ ದುರ್ಗಾಪ್ರಸಾದ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಚಿಂತನಾ ಚಿತ್ರಕಲಾ ಸ್ಪರ್ದೆ 2015-16 ಚಿತ್ರದುರ್ಗಾ ಇವರು ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿದ 64 ವಿದ್ಯಾರ್ಥಿಗಳಲ್ಲಿ ನೂಜಿಬಾಳ್ತಿಲ ಉ.ಹಿ.ಪ್ರಾ.ಶಾಲಾ 8ನೇ ತರಗತಿ ವಿದ್ಯಾರ್ಥಿ ದೀಪಕ್ ಕೆ ಪ್ರಥಮ ಸ್ಥಾನ, 5ನೇ ತರಗತಿಯ ವಿಕಾಸ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 7ನೇ ತರಗತಿ ಚರಣ್ ಮತ್ತು ಮೂರನೇ ತರಗತಿ ಪ್ರಣಮ್ಯ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ, 1ನೇ ತರಗತಿ ಆತ್ಮಿಕ, 2ನೇ ತರಗತಿ ಪ್ರತ್ವಿ, 6ನೇ ತರಗತಿ ಜೀವನ್ ಎಸ್.ಡಿ  ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಇವರನ್ನು ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಶಿಕ್ಷಕಿ ಶ್ರೀಲತಾ ಪ್ರತಿಭಾನ್ವಿತರ ಪಟ್ಟಿಯನ್ನು ವಾಚಿಸಿದರು.

ಶಾಲಾ ಮುಖ್ಯ ಶಿಕ್ಷಕ ಶ್ರೇಯಾಂಸ್ ವಂದಿಸಿದರು. ಶಾರೀರಿಕ ಶಿಕ್ಷಕ ಬಾಲಕೃಷ್ಣ ಎ ಕಾರ‍್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಬಳಿಕ ನೂತನ ರಂಗಮಂದಿರದಲ್ಲಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.